ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾರಜನಕ ನಂಬಿದೆ ನಿನ್ನ ಪಾರುಮಾಡೆನ್ನ ಪರಮಪಾವನ್ನ ಪ ಮೀರಿತು ಭವಬಾಧೆ ಸೈರಿಸೆನಿನ್ನು ಸಾರಸಾಕ್ಷನೆ ಪರಿಹರಿಸು ಮೋಹನ್ನ ಅ.ಪ ದುಷ್ಟಸಂಸಾರಸಾಗರದೊಳು ಕೆಟ್ಟ ನಿಂದೆಗಳೆಂಬ ಘನತೆರಿಗಳು ಹುಟ್ಟಿ ಏಳುತಲಿಹವು ಸಾಲಿಗೆ ಸಾಲು ಬೆಟ್ಟದಂತೆ ಮಹ ಭೀಕರದೊಳು ಎಷ್ಟಂತ ಈಸಬೇಕಿನ್ನಿದರೊಳು ಸೃಷ್ಟಿಕರ್ತ ನೀನೆ ಮೊರೆ ದಯದೊಳು 1 ವಾಸನ್ಹಿಡಿದು ಸೆಳೆದುನುಂಗ್ವವೈದಾರು ಮೋಸ ಜಲಚರಗಳ ಮೀರಿದ ತೊಡರು ಆಸೆಯೆಂಬ ಮಹ ಸೆಳವಿನ ಜೋರು ಸುಳಿ ಮಡುವು ಸಾವಿರಾರು ಈಸುವುದು ಮುಂದಕ್ಕೆ ಅಗದು ಮಾರು ಶ್ರೀಶನೆ ಪಿಡಿದೆತ್ತಿ ಕರುಣವ ತೋರು 2 ಇಂತು ಭವದ ಸಾಗರವನ್ನು ಎಂತು ದಾಟಿ ನಾ ಪಾರಾಗುವೆನು ನಿಂತುನೋಡಲು ಅಂಜಿ ಮನಸಿಗೆ ಇನ್ನು ಭ್ರಾಂತಿಬಡುತ ನಿನ್ನ ಮರೆಯ ಹೊಕ್ಕೆನು ಚಿಂತಾಯಕ ಭಕ್ತ ತೀವ್ರಬಂದಿನ್ನು ಸಂತಸದಿಂ ಪೊರೆಯೊ ಶ್ರೀರಾಮ ಎನ್ನನು 3
--------------
ರಾಮದಾಸರು
ಶ್ರೀರಮಣನೆ ಕಾಯೊ ದಯಮಾಡು ರಂಗಶ್ರೀರಮಣನೆ ಕಾಯೊ ಏ ಕರುಣದಿ ಪ. ನೀರಜಭವಜನಕ ತಾರಿದೆ ಭವದಿಂದ ಏ ಮುರಹರೆಸೇರಿದೆ ನಿನ್ನ ಪದವ ಶ್ರೀರಮಣನೆ ಕಾಯೊ ಅ.ಪ. ಕರುಳ ಸಂಬಂಧವೆಂಬೊ ಎನ್ನ ಕೊರಳಿಗೆಉರುಳುಗಳನೆ ಸಿಲುಕಿ [ಸಿ]ಬರಿದೆ ಮದಗಳೆಂಬ ಈಕರಿಗಳ ಧುರತಗ್ಗದು ಹರಿಯೆ 1 ಅರಿಷಡ್ವರ್ಗವೆಂಬ ಈ ಮಹಾಉರಗಭಯಕೆ ಸಿಲುಕಿಬರಿದೆ ಮದಗಳೆಂಬ ಈ ಕರಿಗಳ ಧುರತಗ್ಗದು ಹರಿಯೆ 2 ಬಲುದುರ್ವಿಷಯಂಗಳ ಈ ಬಲೆಗಳಸಾಲಿಗೆ ಒಳಗಾದೆಕಲಾವತಿ ಜನರೆಂಬ ಈಖಳರ ಒಳಬಿದ್ದೆನೊ ಹರಿಯೆ3 ಜರೆನರೆಗಳು ಬಂದು ಇರುವಾಗಪರಸತಿಯರ ಕಾಟನರನಾಯಿಗಳಂತೆ ಈ-ಪರಿ ನೆರೆಹೊರೆಗಳ ಕೂಟ 4 ದಯವಿಲ್ಲದ ಸತಿಯು ಈ ದುರುಳರುನಯಹೀನರು ಸುತರುಭಯದಿಂದಲಿ ನೊಂದೆದಯಾಂಬುಧೇ ಹಯವದನ ನೀ ಬಂಧು 5
--------------
ವಾದಿರಾಜ