ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾರಗಾ ಎನುತಂದು ಸಾರಲಾ ನುಡಿಕೇಳಿ ಆರಯ್ದು ಕಯ್ವಿಡಿದು ಕಾಯ್ದೆ ದ್ವಿಜನ ಗೋವಿಂದ ಪೊರೆ ಎಂದು ಗೋಳಿಟ್ರಗಜರಾಜಗಾ ದಿವ್ಯದರ್ಶನಾನಂದಮಾಯ್ತು ಅಕ್ಷಯನೆ ಕಾಪಿಡೆಂದಾಕ್ಷಣವೆ ಪಾಂಚಾಲಿ ಗಕ್ಷಯಾಂಬರಗಳಿಂ ರಕ್ಷೆಯಾಯ್ತು ಪಾರ್ಥಸೂತನೆ ನಿನ್ನನರ್ಥಿಯಿಂ ಕೆಲಸಾರ್ದು ಪ್ರಾರ್ಥಿಸುತ್ತಿರ್ಪೆನೈ ಪರಮಪುರುಷ ವರಶೇಷಗಿರಿನಿಲಯ ಸುಗುಣವಲಯ ಶರದಿಂದು ನಿಭವದನ ಚತುರವಚನ ದಮನ ಗರುಡಗಮನ ಪರಿಪಾಹಿ ಮಮದೇವ ಸುಪ್ರಭಾವ
--------------
ನಂಜನಗೂಡು ತಿರುಮಲಾಂಬಾ
ಬೆಳೆಬೆಳೆದು ಮನದಾಸೆಗಳ ಕಳೆದೆನಯ್ಯ ಸುಳಿದಿರ್ಪುದೊಂದಾಸೆ ಅದ ಪೇಳ್ವೆನಯ್ಯ ಪ ತೊಳತೊಳಲಿ ಬಳಬಳಲಿ ಬೆಂಡಾದೆನಯ್ಯ ಕೊಳಕೊಳದಿ ಮುಳುಮುಳುಗಿ ತಳಮಳಿಪೆನು ಅ.ಪ ಅದು ನಿನ್ನ ಬಳಿಸಾರ್ದು ನಿಲ್ವಪರಿಯಾಸೆ ಅದು ನಿನ್ನ ಪಾದಗಳ ನೋಡಿ ನಲಿವಾಸೆ ಅದು ನಿನ್ನ ನಾಮಗಳ ಪಾಡಿನುಡಿವಾಸೆ ಅದು ನಿನ್ನ ನಸುನಗೆಯ ಬೇಡಿಕೊಂಬಾಸೆ 1 ಅದು ನಿನ್ನ ಅಡಿಗಳಿಗೆ ಮುಡಿಯಿಡು[ವಾಸೆ] ಅದು ನಿನ್ನ ಕೊರಳಿಗೆ ಮಾಲೆಯಿಡು[ವಾಸೆ] ಅದು ನಿನ್ನ ಬೆಡಗುಗಳ ನುಡಿನುಡಿಯೊಳೆಸೆವಾಸೆ ಅದು ಮಾಂಗಿರಿಯ ರಂಗ ನಿನ್ನ ಕೃಪೆಯಾಸೆ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಬೇಡಲೇತಕೆ ಪರರ ದೇಹಿಯೆಂದು ಪ ನೀಡುವಾ ಧೊರೆ ಎನಗೆ ನೀನಿರಲು ಸರ್ವದಾ ಅ.ಪ. ಗ್ರಾಸವನು ಬೇಡೆ ದೂರ್ವಾಸ ಮುನಿಗಂದನ್ನ ಅನಾ ಯಾಸದಿಂ ತತ್ಕಾಲದಲಿ ಕಲ್ಪಿಸಿ ಆ ಸಂಯಮಿಗೆ ಉಣಿಸಿ ದಣಿಸಿದ ಮಹಾ ದಾತಾ ದಾಶರಥೆ ನಿನ್ನ ಬಿಟ್ಟನ್ಯ ದೇವತೆಗಳನು 1 ಖಳ ದುಶ್ಯಾಸನನು ದ್ರೌಪದಿಯ ಸಭೆಯೊಳು ದು ಕೂಲವನು ಸೆಳೆಯೆ ದ್ವಾರಕ ಮಂದಿರಾ ಶ್ರೀ ಲೋಲ ಶ್ರೀ ಕೃಷ್ಣ ಕರುಣಿಸು ಕರುಣಿಸೆನೆ ಪಾಂ ಚಾಲಿ ಮೊರೆ ಕೇಳಿ ದಿವ್ಯಾಂಬರ ನಿಚಯವಿತ್ತೆ 2 ಮಡದಿ ಕಳುಹಲು ಬಂದ ಬ್ರಾಹ್ಮಣನ ಪೀಡಿಸುವ ಬಡತನವ ಕಳೆದೆ ಒಪ್ಪಿಡಿಯವಲಿಗೆ ಪೊಡವಿಯನ್ನಾಳಿಸಿದೆ ಕ್ರಿಮಿಗೊಲಿದು ಕಾರುಣ್ಯದಲ್ಲಿ ಮೃಡ ಬಿಡೌಜರೀಪ್ಸಿತ ಕೊಡುವೆ 3 ತಾಪಸೋತ್ತಮ ಮೃಕಂಡಾತೃಜಗೆ ಕಲ್ಪಾಯು ನೀ ಪೂರ್ತಿ ಮಾಡಿ ಅಲ್ಪಾಯು ಕಳೆದು ಆ ಪರ್ವತೇಶ್ವರನ ಪಟ್ಟಣವ ಸಾರ್ದು ಸಾಂ ದೀಪ ತನಯನ ತಂದ ಸರ್ವಾಂತರ್ಯಾಮಿ 4 ವಿಶ್ವ ಜೀವರಿಗನ್ನ ಕಲ್ಪಕನೆ ನೀನಿರಲು ಜ್ಞಾನ ದ್ರವ್ಯ ಅಲ್ಪ ಮಾನವರಿಗಾಲ್ಪರಿರೇನಹುದು ಅಹಿ ತಲ್ಪ ಜಗನ್ನಾಥ ವಿಠ್ಠಲ ಕಲ್ಪತರುವಿರಲು 5
--------------
ಜಗನ್ನಾಥದಾಸರು
ಮೂರನೆಯ ಸಂಧಿ ಪತ್ರವನೋದಿಕೊಂಡು ಪದ್ಮನಾಭನ ಕಿಂಕರಗೆ ವಿಷಯೆ ವಿಶಾಲದಿ ಸಖಿಯರು ಕೂಡಿ ಆಲಯದಿಂದಲಿ ಹೊರಟರು ವಸಂತಕಾಲ ಬಂದಿರೆ ನಂದನಕೆ 1 ವಚ್ಚೇರೆಗಂಗಳ ವಾರಿಜಮುಖಿಯರು ನಿಚ್ಚಳಾಂಗದ ನೀರೆಯರು ಹೆಚ್ಚ ಹಿರಿಯ ಹೆಂಗಳ ರನ್ನೇರು ಬೆಚ್ಚದೆ ಬೆರೆದು ನಡೆದರು 2 ಚೆಲ್ಲೆಗಂಗಳ ಚೆಲ್ವೆಯರು ಎಲ್ಲರೈದಿದರು ನಂದನಕೆ 3 ಕಳಸಕುಚದೋರು ಕಂಬುಕಂಧರೆಯರು ಕುಂತಳಕಾಗಿ ನಡೆದರು4 ಚೆಂದುಟಿ ಚೆಲುವಿನ ಬಾಲೆಯರು ನಟನೆಯಿಂದೆಲ್ಲ ನಡೆದರು 5 ತಬ್ಬುತ ತಾಗೊಲವುತಲಿ ಕಬ್ಬುವಿಲ್ಲನ ಕೋಲಾಹಲ ಉಲ್ಲಸದಿ ತಬ್ಬಿ ನಡೆದರು ನಂದನಕೆ 6 ಕಕ್ಕಸ ನಕ್ಕುನಲಿದು ನಾನಾ ಚೇಷ್ಟೆಗಳಿಂದ ಹೊಕ್ಕರು ನಂದನವನವ7 ಸರೋವರವಿಳಿದು ಮಾಡಿದರ್ ಕೈಚಳಕವ ಜಲಕ್ರೀಡೆಯನಾಡಿದರತಿ ಹರುಷದಲಿ 8 ಕೆಂದಾವರೆ ಮೊಗ್ಗು ಕಂಡು ಹರುಷದಿ9 ಕೋಮಲೆಯರ ನೀರಾಟದ ರಭಸಕ್ಕೆ ತಾವರೆಗಳು ಬೆರಗಾಗೆ ಹೇವದಿ ತಲೆಯ ತಗ್ಗಿದವು10 ಸಮನಾಗಿ ತೋರುತಲಿಹವು 11 ದಿವ್ಯಾಂಗ ತೋರುತಲಿ ಹೆರೆಯ ಕೂರಂಬಿನಂದದಲಿ12 ಸಡಿಲಿದಾಭರಣವನಿಟ್ಟು ಮುಡಿದರು ತುದಿವೆಣ್ಣೆಗಂಟು 13 ಕಣ್ಣಿಗೆ ಅಂಜನ ಹಚ್ಚಿ ಸಂಪಿಗೆ ಮಕರಂದ ಪತ್ರಿಕೆಯನಿಟ್ಟು ಲಲನೆಯರೆಲ್ಲ ಶೃಂಗಾರದಿ 14 ಮಾನಿನಿಯರು ತೆರಳಿದರು 15 ಕಂದರ್ಪನ ಮದದಾನೆಯಂತೆ ಕರ್ಪುರ ವೀಳ್ಯವ ಕರದಲ್ಲಿ ಪಿಡಿದು ಗುಪ್ಪವಡೆದರು ನಾರಿಯರು 16 ಘನರಾಗದಿಂದ ಪಾಡುತಲಿ ತಮ್ಮ ಮನಬಂದ ಫಲ ಪುಷ್ಪಂಗಳ 17 ಉದ್ದಂಡತನದಲಾಡುತಿಹರು 18 ಬೆರಸಿಕೊಂಡಾಡುತಲಿಹರು ಹರುಷದಿಂದಲಿ ಮಂತ್ರಿ ತನುಜೆ 19 ಚಿಕ್ಕ ಪ್ರಾಯದ ಕೋಮಲಾಂಗಿಯು ಹೆಮ್ಮಕ್ಕಳನಗಲಿ ತಾ ಚೂತ ಬೆಕ್ಕಸ ಬೆರಗಾಗಿ ನಿಂದಳ್ 20 ಮತಿಭ್ರಮೆಯಿಂದ ನೋಡಿದಳು 21 ಪಾರ್ವತಿಪತಿಯೆಂಬೆನೆ ಪಣೆಗಣ್ಣಿಲ್ಲ ವಾರಿಜೋದ್ಭವನಿವನಲ್ಲ ನಾರಾಯಣನೆಂಬೆನೆ ಶಂಖಚಕ್ರವು ತೋರುವುದಿಲ್ಲ ಕೈಯೊಳಗೆ 22 ಇಂದ್ರನೆಂಬೆನೆ ಬಿಳಿಯಾನೆ ಕೆಲದಲಿಲ್ಲ ಚಂದ್ರನೆಂಬೆನೆ ಮೃಗವಿಲ್ಲ ಬಂದಿಳಿದನೊ ಭೂತಳಕೆ 23 ಕುಸುಮ ಬಾಣವು ಕೈಯೊಳಿಲ್ಲ ವಿಷಯೆ 24 ಹತ್ತಿರೆ ಬಂದು ನಿಲ್ಲುವಳು ಹೊತ್ತಲ್ಲವೆಂದು ಸಾರುವಳು 25 ಮುಟ್ಟುವೆನೆಂದು ನಿಲ್ಲುವಳು ಥಟ್ಟನೆ ಕಡೆಗೆ ಸಾರುವಳು 26 ಲಜ್ಜೆಹೋದರು ಹೋಗಲಿ ಎನುತ ಭೇದಿಸಿ ನೋಡಿದಳವನ 27 ಚೊಗೆಯ ಕುಪ್ಪಸದ ಕೊನೆಯಲ್ಲಿ ಮಂತ್ರಿ ತನುಜೆ 28 ಹೊದ್ದಿದ್ದ ಲಜ್ಜೆ ಭಾವದಲಿ ಸಾರ್ದುಮುದ್ರೆಯೊಡೆದಳಂಬುಜಾಕ್ಷಿ 29 ಮೋಡಿಯ ಬರೆದ ಬರಹನು ಮಾಡಿದ ಸುಕೃತದ ಫಲದಿ 30 ನೇಮಿಸಿ ಕಳುಹಿದ ಕಾರ್ಯ ವಿಷವ ಕೊಡುವುದುತ್ತಮವು 31 ಭಾವಿಸಿ ನಿನ್ನ ಮನದಿ ಮುಂದಕ್ಕೆ ಲೇಸುಂಟು ನಮಗೆ 32 ಕೈತಪ್ಪೆಂದು ಮನದಲ್ಲಿ ತಿಳಿದು 33 ವಾಕಾರವನೆ ಚೆಳ್ಳುಗುರಿಂದಲಿ ತಿದ್ದಿ ಯೇಕಾರವನೆ ಮಾಡಿದಳು ಮರುಗಿದಳು 34 ಕಟ್ಟಿದ ಭರದಿಂದ ತಲೆಯನು ಎತ್ತಿ 35 ನಿಂದೊಮ್ಮೆ ನೋಡುವಳು ಕಂದಿ ಕಾತರಿಸುತಲಿಹಳು 36 ಬೆದರಿದ ಹುಲ್ಲೆಯಂದದಲಿ ಹೃದಯ ಸಂಚಲಿಸುತಲಿಹಳು 37 ಹುಸಿ ನುಡಿಗಳನು ಉಟ್ಟ ದೇವಾಂಗ 38 ಪರಿಮಳ ಮಾಜುವುದೆ
--------------
ಹೆಳವನಕಟ್ಟೆ ಗಿರಿಯಮ್ಮ