ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಳಗಿರಿಯಲಿ ಬೆಳಗಿಹೆಯ ಕಳವಳಿಸುವ ಮನ ಸುಳಿವದೆನ್ನಮಲ ಕಳೆದಭಯವನಿತ್ತು ನರಹರಿ ಪ. ಅಳಗಿರಿ ಹತ್ತಲು ಝಳ ಝಳ ಮನಸಲಿ ಸುಳಿದು ಭಯವ ಹರಿಸಿ ತೊಳಲಿದ ಭಕ್ತರಘ ಕಳೆದು ಪೊರೆವೆನೆಂದು ಅ.ಪ. ರಂಗನ ಮದುವೆಯೋಳ್ ವೆಂಕಟೇಶನು ಬೊಮ್ಮಗೆ ಮುಂಗಡ ನಿನಗುಣಿಸೆನೆ ಉಂಡನು ಹರೆ ರಂಗನ ಬೆಟ್ಟ ಬಾಷಿಂಗ ನರಸಿಂಗ ಹಿಂಗದೆ ವೆಂಕಟನ ತೋರಿಸೋ ಎನ್ನ ಕಂಗಳಲಿ ನೋಡುವೆ ಮನದಣಿಯೆ 1 ಬಂದ ಭಕ್ತರಿಗಭಯದಿಂದಲೇರಿಸಿ ಮುನ್ನ ತಂದೆ ತೋರಿ ವೆಂಕಟನ್ನ ರನ್ನನ್ನ ನಿಂದು ಶ್ರೀನಿವಾಸ ತಂದೆ ವರಹರಂತೆ ಇಂದೆನ್ನ ಕುಲದೇವತೆ ತಂದು ತೋರಿದೆ ನಿಮ್ಮ ಮೂವರ ರೂಹವ 2 ನಾರದ ವಂದ್ಯನ ನಾರೇರಿಗೊಲಿದನ ಶೂರ ಶ್ರೀ ಶ್ರೀನಿವಾಸನೆಂಬ ಪೆಸರಿನ ನೀ ಸಾರಿರ್ಪೆ ಪೆಸರ್ವ ನಾಮದಲಿ ನಾರಾಯಣನೆಂದ ಬಾಲನಿಗೆ ಒಲಿದನೆ ಆರಿಗು ವಶವÀಲ್ಲ ದಾರುಣನಿನಾಮ ನರಸಿಂಹ3
--------------
ಸರಸ್ವತಿ ಬಾಯಿ
ಕಂಡುದನು ಪೇಳ್ವೆ ಬ್ರಹ್ಮಾಂಡ ನಾಯಕನೆ | ಕೊಂಡೆಯವಿದಲ್ಲ ಗ್ರಹಕುಂಡಲವ ಶೋಧಿಸುತ ಪ ಮಕರ ಸತಿ ಲಗ್ನದಲ್ಲಿರ್ಪ ಜಲ ತಾರಕೇಂದು ದಶೆ ಯಲಿ ನಿನಗೆ ಜಲದೊಳಾವಾಸವಾಯಿತು ಹರಿಯೆ 1 ಮನುಮಥನ ತಾತ ಕೇಳಿನಸುತನು ನಾಲ್ಕನೆಯ ಮನೆಯೊಳಿರುವನು ಲಗ್ನಕಧಿಪನೆನಿಸಿ ಮನದಿ ಯೋಚಿಸಲಿಕಾ ಶನಿದಶೆಯೊಳಾ ಕುಧರ ವನು ಪೊತ್ತು ದಣಿದೆನೀವ ನಿಧಿಯೊಳು ಹರಿಯೆ2 ಮಂಗಳನೆ ಸುಖಕಧಿಪ ಮಂಗಳನು ಸಿಂಗರದಿ ಸಿಂಗರಾಶಿಯೊಳು ತಾ ಕಂಗೊಳಿಸುತ ತುಂಗವಿಕ್ರಮನವನೆ ಸಂಘಟಿಸಿದನು ವನದಿ ಹಿಂಗದೆ ಬೇರು ಮೆಲುವಂಗವನು ಹರಿಯೆ 3 ವಾರಿಜಾಸನ ಪಿತನೆ ಕ್ರೂರಕ್ಷೇತ್ರದಿ ರಾಹು ಸಾರಿರ್ಪ ರಾಶಿ ವೃಶ್ಚಿಕವೆನಿಸಲು | ಕಾರುಣಿಕನವನ ದಶೆಯಾರಂಭದಲಿ ನಿನಗೆ ಘೋರ ರೂಪವ ತಾಳಲಾಯ್ತು ನರಹರಿಯೆ 4 ಮಂದರೋದ್ಧರ ಕೇಳು ಚಂದಿರನ ರಾಶಿಗಾ ನಂದದಧಿಪತಿ ಸೂರ್ಯನಂದನನು ತಾ ನಿಂದು ಮೇಷದೊಳತ್ರಿಕಂದನ ನಿರೀಕ್ಷಿಸಲು ಬಂದುದೈ ಭಿಕ್ಷೆಯದರಿಂದ ನಿನಗೆಲೆ ಹರಿಯೆ 5 ಅಂಬುಜಾನನ ಕೇಳು ಒಂಭತ್ತರಧಿಪ ಶಶಿ- ಸಂಭವನು ಪಾಪದಿಂ ತುಂಬಿರ್ಪನು | ಸಂಭವಿಸಲವನ ದಶೆಯಿಂದ ನೀ ಕ್ಷತ್ರಿಯ ಕ-ದಂಬ ಮರ್ದಿಸಿ ಧರ್ಮಮಂ ಬಿಟ್ಟೆ ಹರಿಯೆ 6 ದುರಿತ ಸ್ಥಾನಾಧಿಪತಿ ಗುರುವೇಳನೆಯ ಮನೆಯೊಳಿರುವನದರಿಂ | ಹಿರಿಯರುಪದೇಶದಿಂದಿರದೆ ಭಾರ್ಯೆಯನಗಲಿ ಚರಿಸಿದೆಯರಣ್ಯದೊಳಗಿರುತ ನೀ ಹರಿಯೆ 7 ಘೋರಪಾಪವಿನಾಶ ನಾರಿರಾಶಿಯ ನವಮ-ಕಾ ರವಿಯು ಸಾರಿ ನಿಂದಿರ್ಪನದರಿಂ | ಚೋರವ್ಯಾಪಾರ ಪರನಾರಿಯರ ಕೂಡೆ ವ್ಯಭಿ-ಚಾರ ನಿನಗಾಯಿತು ರಮಾರಮಣ ಹರಿಯೇ 8 ಕೈವಲ್ಯ ತಾರಕನಾಥನು | ಪೂತ ಬುದ್ಧಿಸ್ಥಾನ ವಾದನದರಿಂಲಿಂ ಭೂತಲದಿ ಸ್ಥಾಪಿಸಿದೆ ನೂತನ ಮತವ ಹರಿಯೇ 9 ಪಾರವರ್ಜಿತ ಕವಿಯು ಸಾರಿರ್ದ ದಶಮದೊಳ್-ಗಾರವ ನೆನೆಯುಂಟು ಧೀರನೆನಿಸಿ | ಭೂರಿಮ್ಲೇಂಛರನು ಸಂಹಾರ ಗೈಯುತ ತೇಜಿಯೇರಿ ಮೆರೆಯುತ್ತಿರುವ ನಾರಾಯಣ ಹರಿಯೆ 10
--------------
ಅನ್ಯದಾಸರು