ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಗಮಂ ನಖಾಗ್ರದಿಂ ನೆಗಪಿ ಸಮ್ಮೋದದಿಂ ಜಗಕೆ ಚಿತ್ರವ ತೋರ್ದ ಜಗದಧೀಶ ಭೂರಿ ಸಂಭ್ರಮವಾಂತು ಕ್ರೂರಫಣಿಗರ್ವಮಂ ಭಂಗಗೈದು ಶಿಶುರೂಪದಿಂದಮೆ ನಿಶಿಚರರ ಸದೆವಡೆದ ವಸುದೇವನಂದನಗೆ ವಿಶ್ವಪಿತಗೆ ಅಣುರೇಣು ತೃಣಕಾಷ್ಟ ಪೂರ್ಣನಾಗಿರುತಿರ್ಪ ಪ್ರಾಣಕಾಂತಗೆ ನಾನು ಮಣಿವೆ ಮುನ್ನ ಸತ್ಯವಿಕ್ರಮನನ್ನು ಸಾರಿಬಂದು ಭಕ್ತಿಭಾವದಿ ನಮಿಪೆ ನುತಿಸಿ ಮನದಿ ಕರ್ತೃಶೇಷಗಿರೀಶನೆನುವೆ ಮುದದಿ
--------------
ನಂಜನಗೂಡು ತಿರುಮಲಾಂಬಾ
ಬರಡು ಕಣ್ಗಳಿದ್ದರೇನು ಮನದ ಕಣ್ಣ ತೆರೆಯದ ಪ. ತರಳಗೊಲಿದ ವರದರಾಜದೊರೆಯ ನಿಜವನರಿಯದ ಅ.ಪ. ನಾರದಾದಿ ಮೌನಿವರರು ಸಾರಿಬಂದು ಸೇವಿಸಿ ಸಾರಸಾಕ್ಷನ ಮನವನೊಲಿಸಿ ಸಾರಭೂತರೆನಿಸಿದರು ಮನದ ಕಣ್ಣ ತೆರೆಯದಿಂತು 1 ತರಳಗೊಲಿದು ಕಂಬದಿಂದ ಬಂದು ಹಿರಣ್ಯನುರವ ಬಗೆದು ಕರುಳಮಾಲೆ ಧರಿಸಿ ಮೆರೆವ ನರಹರಿಯ ಕಾಣದ 2 ಈ ಕಳಂಕವೆಲ್ಲ ತೊಳೆದು ಶ್ರೀಕಟಾಕ್ಷಕೆ ಪಾತ್ರನಾಗಲು 3 ಶರಧಿಶಯನ ಪರಮಪಾವನೆ ಶರಣರಕ್ಷಕನೀತನ ವರದ ಶೇಷಶೈಲಧಾಮನ ವರದಿ ಪಡೆವೆ ಮನದಕಣ್ಗಳಂ 4
--------------
ನಂಜನಗೂಡು ತಿರುಮಲಾಂಬಾ