ಒಟ್ಟು 7 ಕಡೆಗಳಲ್ಲಿ , 4 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಗಲಿರಲಾರೆನೊ ಹರಿಯೆ ನಿನ್ನನು ಪ ಹಗಲು ಇರಳು ಸಮ್ಮೊಗದಲಿರುತಿಹ ಮಿಗೆ ಭಾಗ್ಯವ ಕೊಡೊ ನಗೆಮೊಗದರಸನೆ ಅ.ಪ. ಅನುದಿನ ನಿನ್ನಯ ಚರಣ ವನಜಕೆ ಮಣಿಯುವುದೆನಗಾಭರಣ ಅನಿಮಿಷರೊಡೆಯನೆ ಅನಿಮಿತ್ತ ಬಂಧುವೆ ಪ್ರಣತ ಜನ ಮಂದಾರ ಮುಕುಂದನೇ 1 ಮಾರ ಜನಕ ಎನ್ನ ಕರುಣದ ಪಾರ ಪ್ರಭುವರೇಣ್ಯ ಸಾರಸನಯನ ಉದಾರ ಹೃದಯ ಗಂ ಭೀರ ಗುಣಾಂಬುಧಿ ಸಾರಸನಾಭನೇ 2 ಮಂಗಳಾಂಗ ಹರಿಯೇ- ತವಪದ ಭೃಂಗನೆನಿಸೊ ದೊರೆಯೆ ರಥಾಂಗ ಪಾಣಿ ಭವ ಭಂಗ ಕರಿಗಿರಿ ನೃಸಿಂಗ ಶುಭಾಂಗನೆ 3
--------------
ವರಾವಾಣಿರಾಮರಾಯದಾಸರು
ಆರತಿ ಬೆಳಗುವೆ ವಾರಿಧಿಶಯನಗೆ ಮಾರನಪಿತನಿಗೆ ನಾರದಸುತಗೆ ಪ ಸಾರಸನಾಭಗೆ ನೀರಜಗಾತ್ರಗೆ ಶ್ರೀರಮೆಯರಸಗೆ ನಾರಿಯರೊಡನೆ ಅ.ಪ ಮುರಳಿಯನೂದುವ ತರಳ ಶ್ರೀಕೃಷ್ಣಗೆ ಶರಣರ ದುರಿತವ ಪರಹರಿಸುವಗೆ ಕರುಣಜಲಧಿ ಮಾಂಗಿರಿರಂಗಯ್ಯಗೆ ಸರಸತಿ ಪಾರ್ವತಿ ತರುಣಿಯರೊಡನೆ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕನ್ಯಾರತ್ನವನಿತ್ತನು ಹರಿಗೆ ಸತ್ರಾಜಿತರಾಯನು ಪ ಧನ್ಯನು ತಾನೆಂದೆನ್ನುತ ಯದುಕುಲರನ್ನ ಸುಗುಣ ಸಂಪನ್ನಗೆ ಹರುಷದಿ ಅ.ಪ. ಸನ್ನುತ ಚರಣನಿಗೆ ಕಮನೀಯ ಸ್ವರೂಪಗೆ ಕಮಲಾರಮಣಗೆ ಸ್ವರತನಿಗೆ ಕಾಮಿತ ಫಲದಾತಗೆ ಸುಮಬಾಣನ ಪಿತ ಸುಂದರಗೆ ಸುಮದಳನೇತ್ರನಿಗೆ ನಮಿಪ ಜನರ ಸುರದ್ರುಮನೆಂದೆನಿಸುವ ಅಮಿತ ಮಹಿಮಯುತಸಮವಿರಹಿತನಿಗೆ 1 ಬೃಂದಾರಕ ಬೃಂದ ಸುವಂದಿತಗೆ ಶ್ರೀ ಗೋವಿಂದಗೆ ಬೃಂದಾವನ ವಿಹರಣ ವಿಭವಗೆ ವಿಶ್ವಂಭರನಿಗೆ ಮಂದಾಕಿನಿ ಜನಕಗೆ ಮಾಧವಗೆ ಮರಕತಶ್ಯಾಮನಿಗೆ ಮಂದರಧರ ಮುಚುಕುಂದವರದ ಪೂ ರ್ಣೇಂದು ವದನಗುಣಸಾಂದ್ರ ಮುಕುಂದಗೆ 2 ವರಲೀಲಾ ಮಾನುಷ ವೇಷನಿಗೆ ವದನಾಂಬುಜದಲಿ ಸರಸಿಜ ಜಾಂಡವ ತೋರಿಪಗೆ ಸಾರಸನಾಭ ಪರಮಪಾವನ ಚರಿತಗೆ ಪುರುಷೋತ್ತಮನಿಗೆ ಗರುಡಗಮನ ಶ್ರೀ ಕರಿಗಿರೀಶ ಯದು ವರಕುಲಮಣಿ ಮುರಹರನಿಗೆ ಮುದದಲಿ 3
--------------
ವರಾವಾಣಿರಾಮರಾಯದಾಸರು
ದಾರಿಗಾಣದಯ್ಯ ಕಣ್ಣಿಗೆ ದಾರಿ ತೋರಿಸಯ್ಯಾ ಪ ಪಾರುಗಾಣದ ಸಂಸಾರ ವಾರಿಧಿಯಲಿ ಪಾರುಗಾಣಿಸಯ್ಯ ಮಾರನ ಪಿತನೇ ಅ.ಪ ಯಾರಿಗೆ ಮೊರೆಯಿಡಲಾರು ಕೈಹಿಡಿವರು ಧಾರಿಣಿಯೆ ಅಂಧಕಾರವಯ್ಯ ಸಾರಸನಾಭ ನೀ ಕಾರುಣ್ಯಾಮೃತ ಬೀರದಿದ್ದರೆ ಎನ್ನ ಗತಿಏನೋ ರಂಗ1 ಸತಿಸುತರೆನಗತಿ ಹಿತರೆಂದೆನ್ನುತೆ ಸತತ ನಂಬಿ ಸತ್ಪಥವನು ಮರೆತಂತೆ ಪತಿತನಾದೆನಗೆ ನೀ ಗತಿದೋರದಿದ್ದರೆ ಪತಿತನಾಗಿರುವುದೇ ಗತಿಯೊ ಮಾಂಗಿರಿರಂಗ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವಾಸುದೇವ ತೇ ನಮೋ ನಮೋ ವಾಸವ ವಂದಿತ ನಮೋ ನಮೋ ಪ ಮಾಧವ ಕೃಷ್ಣ ದಾಮೋದರ ಶ್ರೀಶ ಪರೇಶ ವಿಷ್ಣು ಪೀತಾಂಬರ ಈಶ ಮುಕುಂದ ವೈಕುಂಠ ಪರಾತ್ಪರ ಕೌಶಿಕ ಗೌತಮ ಮೌನಿ ಶುಭಂಕರ 1 ಶೌರಿ ಚತುರ್ಭುಜ ಚಕ್ರಧರಾಚ್ಯುತ ವೈರಿ ಭಯಂಕರ ಸಕಲಾಗಮನುತ ಸಾರಸನಾಭ ನೀರೇಜ ಭವಾನತ ಮಾರಜನಕ ರಘುವೀರ ಶಿವಾರ್ಚಿತ 2 ಶ್ರೀಮಹಿತಾಂಗಾ ರಂಗಾ ನಮೋ ನಮೋ ಶ್ರೀಮಣಿಹಾರಾ ರಂಗಾ ನಮೋ ನಮೋ ಶ್ರೀಮುಕುಂದಾ ಶ್ರೀರಂಗಾ ನಮೋ ನಮೋ ಶ್ರೀಮಾಂಗಿರಿ ವರರಂಗಾ ನಮೋ ನಮೋ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶ್ರೀಮುರವೈರಿಣಿ ಮಂಗಲಂ ಜಯ ಮಂಗಲಂ ಪ ವೇದ ವ್ಯಾಪಕನಿಗೆ | ಸಾಧುಗಳೊಡೆಯಗೆ | ರಾಧೆಯೊಲ್ಲಭ ಜಗದಾದಿ ನಾಯಕನಿಗೆ 1 ಸಾರಸನಾಭಗೆ ನಾರದ ವಿನುತಗೆ ಮಾರಕಜನಕನಿಗೆ ಶ್ರೀರಾಮಚಂದ್ರಗೆ 2 ಧಾಮ ಮುಕುಂದಗೆ 3 ಭಾವಿಕೋದ್ಧಾರಗೆ ದೇವಕೀತನಯಗೆ ಶ್ರೀವಾಸುದೇವ ದಾಮೋದರ ಶೌರಿಗೆ 4
--------------
ಅನ್ಯದಾಸರು
ಶುಭನಾಮ ಶೋಭಿತಧಾಮಶ್ರೀ ಭೂಪ ಸಾರಸನಾಭ ವಿಭೋ ವಿಭೋ ಪ.ಅರ್ಭಕಪಾಲಕ ದರ್ಭಶಯನವಿಶ್ವಗರ್ಭ ವಿದಾರಿತ ದುರ್ಭಾಗ್ಯ ದನುಜ 1ದÀÀಂಡಿತ ರಕ್ಷ ಕೋದಂಡಮಂಡಿತಕರದÀಂಡಕಹರ ಕೋಟಿ ಚಂಡಕರಾಭಾ 2ಮರ್ದಿತದುಷ್ಟ ವಿವರ್ಧಿತ ಶಿಷ್ಟ ಕಪರ್ದಿ ವಿರಿಂಚಾಂತಧ್ರ್ಯಾನಚರಣ3ಅಂಜನಾತ್ಮಜ ಕೃತಾಂಜಲಿ ಪುಟಸೇವ್ಯಮಂಜುಳ ಸೂಕ್ತ ಪ್ರಭಂಜಿತಕಲುಷ4ಭದ್ರ ಚರಿತ್ರ ಲಸದ್ರತ್ನ ಭೂಷಣಚಿದ್ರೂಪ ಪ್ರಸನ್ವೆಂಕಟಾದ್ರೀಶಪಾಹಿ5
--------------
ಪ್ರಸನ್ನವೆಂಕಟದಾಸರು