ಒಟ್ಟು 11 ಕಡೆಗಳಲ್ಲಿ , 8 ದಾಸರು , 11 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅತಿಭಾಷಿಯೆನಿಸದೆ ಪ. ದೂಷಿಸುವರಾಕ್ರೋಶದಿಂದಲಿ ರೋಷಗೊಳ್ಳುವೆÀ ಗಾಸಿಯಾಗುವೆ ಶೇಷಶಯನನ ದಾಸನೆÀನಿಪೊಡೆ 1 ಮೂಲಮಂತ್ರದ ಸಾರವಿದು ಮೇಲನರಿತು ಸುಶೀಲನೆನ್ನಿಸು ಕಾಲಪಾಶದಿ ಬೀಳದಂತಿರೆ 2 ಏಕೆ ಸೇರುವೆ ಜೋಕೆಯಿಂದಿರು ಮೂಕನಂತಿರು ಲೋಕನಾಥ ನೊ ಳೈಕ್ಯವಾಗಿ ವಿವೇಕಿಯೆನ್ನಿಸೆ 3 ಭೃತ್ಯರೆಲ್ಲರ ಸುತ್ತಿನೀಂ ಮತ್ತನಾಗದೆ ನಿತ್ಯತೃಪ್ತನ ಸತ್ಯಚರಿತನ ಸತ್ವವರಿವೊಡೆ 4 ಬಂದು ನುಡಿಯದಿರೆಂದೆ ಸುಮ್ಮನೆ ತಂದೆ ಶೇಷಗಿರೀಶ ನಂಘ್ರಿಯೆ ನಂಬಿ ನೀ ನಲವಿಂದ ಸುಖಿಪೊಡೆ 5
--------------
ನಂಜನಗೂಡು ತಿರುಮಲಾಂಬಾ
ಇಕ್ಕೊ ಇಲ್ಲೆ ಹರಿ ಇದ್ದಾನೆ | ಸಿಕ್ಕುವಾ ಸದ್ಗುರು ಕರುಣದಲಿ ಧ್ರುವ ಆದಿ ಅನಾದಿಯ ಹಾದಿ ವಿಡಿದು | ಸಾಧಿಸಿ ನೋಡಿರಯ್ಯ ಸಜ್ಜನರು | ವೇದಾಂತದ ಸುಸಾರವಿದು | ಭೇದಿಸಿದವರಿಗೆ ಭಿನ್ನವಿಲ್ಲ 1 ತನ್ನೊಳಗಾಗಿರಲಿಕ್ಕೆ ಭಿನ್ನವ್ಯಾಕೆ | ಚೆನ್ನಾಗಿ ನೋಡುವದು ಉನ್ಮನದಲಿ | ಇನ್ನೊಬ್ಬರಿಗೆ ತಾ ತಿಳಿಯದು | ಧನ್ಯವಾದರು ಅನುಭವಿಗಳು2 ಸೆರಗು ಸಿಲ್ಕಲಿಲ್ಲ ನಾಲ್ಕರಲಿ | ಅರಹು ಆಗಲಿಲ್ಲ ಆರರಲಿ | ಪೂರಿಸಲಿಲ್ಲ ಭಾವ ಮೂರಾಗಲಿ | ತೋರಿದ ಸದ್ಗುರು ಎನ್ನೊಳಗೆ 3 ಮೋಸಹೋಯಿತು ಜಗ ವೇಷದಲಿ | ವಾಸತಿಳಿಯದೆ ವಾಸುದೇವನ | ಕಾಸಿನ ಆಶೆಗೆ ದಾಸರಾಗಿ | ಘಾಸಿ ಆಯಿತು ಭವಪಾಶದಲಿ 4 ಸಣ್ಣದೊಡ್ಡದರೊಳು ಸಾಕ್ಷವಾಗಿ | ಬಣ್ಣ ಬಣ್ಣದಲಿ ತಾ ಭಾಸುತಿಹ್ಯ | ಕಣ್ಣಾರೆ ಕಂಡು ಗುರು ಕೃಪೆಯಿಂದ | ಧನ್ಯವಾದ ಮೂಢ ಮಹಿಪತಿಯು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಎನ್ನಲ್ಲಿ ಅವಗುಣ ಶತಸಾವಿರವಿರೆ | ಅನ್ಯರ ಕರೆದಾನು ನಡತೆ ಇದೇನೆಂಬೆ ಪ ವೇದವನೋದಿದೆ ಪರರಿ | ಗಾದÀರಿಸಿ ಮುಕುತಿಗೆ | ಹಾದರಹಳು ನಾರಿ | ಮಾದಿಗÀನ ಪೋದಂತೆ 1 ಧನದಾಸೆಯಿಂದ ಸಾಧನವಾಗದೆಂದು | ಜನರಿಗೆ ಉಪದೇಶವನು ಮಾಡುವೆ | ತೃಣ ಹತ್ತದಿದ್ದ | ವಧನರಾಶಿ ಕದ್ದಂತೆ2 ರಸನೇಂದ್ರಿಯಗಳ ಬಂ | ಧಿಸಬೇಕೆಂದು ನಾನು | ಉಸುರುವೆ ಅಲ್ಲಲ್ಲಿ ಕುಶಲನಾಗಿ | ಅಮೃತ | ರಸವಲ್ಲೆನೆಂದಾವ ಮುಸುರಿಯ ಮೆದ್ದಂತೆ 3 ಒಡಿವೆ ವಸ್ತುಗಳು ಸಂಗಡ ಬಾರವು ಮಮತೆ | ಬಿಡು ಸಂಸಾರವಿದು ಕಡಿಗೆ ಭವದ | ಮಡವು ಸಿದ್ಧವೆಂದು ನುಡಿವೆನೊ ಪರರಿಗೆ | ಯಡಹಿಯೊ ಎಂದಾವ ಗಿಡನೇರಿ ಬಿದ್ದಂತೆ 4 ಭಕುತಿ ಕೂಡಿದ ವಿರಕುತಿ ಲೇಶವಿಲ್ಲಾ | ಯುಕುತಿ ಬಾಯಲಿ ನಾರಕಕೆ ಸಾಧನಾ | ಲಕುಮಿವಲ್ಲಭ ನಮ್ಮ ವಿಜಯವಿಠ್ಠಲ ನಿನ್ನ ಅ | ರ್ಚಕನಾಗಿ ಬದುಕತಕ್ಕದ್ದು ಮಾರ್ಗವ ತೋರೊ 5
--------------
ವಿಜಯದಾಸ
ಕಾಲ ತಪ್ಪದು ನಿನಗೆಂದಿಗು ಮರುಳೆಒಳ್ಳಿತಾಗಿ ಕೇಳಿಕೋ ಹಿರಿಯರನು ಮರುಳೆನಾಳೆ ನಾಡದೋ ಆವಾಗಲೋ ತನು ನಿತ್ಯವಲ್ಲಕಾಲಕೆ ಸಿಕ್ಕಬೇಡ ಮರುಳೆ ಪ ಆಳುವ ಮಠಪತಿ ಊರಲ್ಲಿ ತನ್ನನ್ನುಹೂಳ್ಯಾರು ಎನಬಾರದೆ ಮರುಳೆಮೂಳ ಸಂಸಾರ ನೆಚ್ಚಲು ಕೆಡುವೆಆಲೋಚನೆ ಮಾಡಿಕೋ ಮರುಳೆ 1 ಮನವುಳ್ಳವರು ಇಹರೆ ಸಂಸಾರವೇನೆಂಬೆ ನೀನು ಸಂಗವ ಮರೆವೆ ಮರುಳೆಮಾನಿನಿ ಸುತರ ಮೋಹಕೆ ಬಿದ್ದುನಿನಗಾಗುವ ಮಾನಹಾನಿಯ ಕಾಣೆ ಮರುಳೆ 2 ಸಂಸಾರಕಾಂಕ್ಷೆಯ ಮನದಿ ತ್ಯಾಗವ ಮಾಡುಸಂಸಾರವಿದು ಮಾರಿಯು ಮರುಳೆಹಂಸ ಚಿದಾನಂದ ಸದ್ಗುರು ಹೊಂದಿಯೇನೀ ಸದಾಸುಖಿಯಾಗು ಮರುಳೆ 3
--------------
ಚಿದಾನಂದ ಅವಧೂತರು
ಗುರುವೆ ಸಂಸಾರವಿದು ಸ್ಥಿರವೇ ಬರಿದೆ ನಾ ಮೆರೆವೆ ಧರವೇ ವಿಷಯಂಗಳಲಿ ವಿಶ್ವಾಸಾ ವಿರಕ್ತಿಗೆ ಮೋಸಾ ಎಲ್ಲ ಉಪಾಧಿಯೊಳು ಸುಖವಿಲ್ಲ ಅನುಭವಿ ತಾಂ ಬಲ್ಲ ಈ ನುಡಿ ಪುಸಿಯಲ್ಲ ಗುರುವೆ ಆಗ ಈಗೆಂಬ ಶರೀರದ ಭೋಗ ತೀರಿಸಿಕೊಂಡು ಹೋಗಬೇಕೆಂಬ ಚಿಂತೆ ಎನಗೆ ಮುಕ್ತಿಯಮನೆಗೆ ಗುರುವೆ 1 ಆಶಾಪಾಶದಲಿ ಶರೀರದ ಘಾಸಿಯಾಗದಂತೆ ಪ್ರ ನಿನ್ನಂತೆ ಮಾಡೊ ಗುರುವೆ 2 ಹಣವೆ ಮುಂದಿಲ್ಲ ಕೊಟ್ಟ ಋಣವೇ ತೀರಿಸಲಿಕ್ಕೆ ನಾ ಬೆಳಗೆ ಗುರುವೆ 3 ನಿನಗೆ ಎಣೆಯಾದ ವಸ್ತÀು ಎನಗೆ ಸಿಕ್ಕುವುದುಂಟೇ ಬಾರಯ್ಯ ಬಲು ಕೃಪೆಯಿಂದ ಗುರು ವಿಮಲಾನಂದಾ ಗುರುವೆ 4
--------------
ಭಟಕಳ ಅಪ್ಪಯ್ಯ
ಪರಮಾತ್ಮನ ನೆನೆಯಲು ಬೇಕು ಪರತರಸುಖವನು ಪಡೆಯುವನಿದರಿಂ ದುರಿತಗಳೆಲ್ಲವ ನೀಗಲು ತಾ ಪ ಮೊದಲನೆ ಕಾರ್ಯವು ಜೀವರೆಲ್ಲರಿಗೆ ಇದು ಬಲು ಸುಲಭವು ಸಾಧನಗಳಲೀ ಪದುಮನಾಭನನು ನೆನೆಯದಿರುವವ ಅಧಮನು ಜಗದಿ ವ್ಯರ್ಥ ಜೀವಿಸುವ 1 ಎಲ್ಲ ವೇದಗಳು ಎಲ್ಲ ಶಾಸ್ತ್ರಗಳು ಎಲ್ಲ ಸಾಧನೆಗಳು ಆತನ ಪ್ರಾಪ್ತಿಗೆ ಬಲ್ಲವರಿಂದಲಿ ತಿಳಿದು ವಿಚಾರಿಸಿ ನಿಲ್ಲದೆ ಸಾಧನೆ ಕೈಕೊಳ್ಳುವುದು 2 ಕೇಳುವದೈ ಪರಮಾತ್ಮನ ತತ್ವವ ತಿಳಿವುದು ತನ್ನೊಳು ತಾನೇ ನಿರುತಾ ಪೇಳಲೇನು ಧ್ಯಾನಿಸುವುದಾತನ ಮೇಳವಿಸುವದೈ ಜೀವನ್ಮುಕುತಿ 3 ನಾರಾಯಣನೇ ಪರಮಗತಿಯು ಈ ನರಜನ್ಮಕೆ ಬಂದಿರೆ ಲಾಭವಿದೇ ಅರಿತು ಇದನು ತಾ ಸಾಧನೆ ಮಾಳ್ಪುದು ಗುರುಶಂಕರನಾ ಬೋಧಸಾರವಿದು 4
--------------
ಶಂಕರಭಟ್ಟ ಅಗ್ನಿಹೋತ್ರಿ
ಬೇಡಧ್ಯಾನಿಸಿ ನೋಡು ಪ ಭವ ಮುಳುಗಿ ನೀನಾರು ಅಲ್ಲಿ ತಂದೆ ತಾಯಿಗಳು ಮತ್ತವರಾರು ಅಂದಿನವನಿತೆಯಾಗಿಗಳಾರು ನಿನ್ನ ನಂದನರೆನಿಸಿ ಬಂದವ ರಾರೋ 1 ಮುನ್ನ ಮಾಡಿದ ಹೊಲಮನೆಯೆಲ್ಲ ನಿನ್ನ ಬೆನ್ನು ಬಂದಗ್ರಜಾನುಜರೆಲ್ಲ ಚೊಕ್ಕ ಚಿನ್ನ ಚಿಗುರು ಬೆಳ್ಳಿ ನಗವೆಲ್ಲಿ ಪಶು ಹೊನ್ನು ಕನಕ ಮಿತ್ರ ಜನರೆಲ್ಲ 2 ಇಂದಿನ ಭವದೊಳು ನಿನಗೆಲ್ಲಿ ಈಗ ಬಂದು ಕೊಡಿದ ಸಂಸಾರವೆಲ್ಲಿ ಮುಂದೆ ಹೊಂದಿ ಹುಟ್ಟುವ ಠಾವುಗಳೆಲ್ಲ ಅಲ್ಲಿ ಬಂಧು ಬಳಗ ನೆರೆದಿಹುದೆಲ್ಲ 3 ಹಲಬರ ನೆರವಿಯ ದೇಹವಿದು ಹೊಳೆ ಚಳಿಕ ತನ್ನಯ ಈ ಋಣ ತೀರುವುದು ಎಲ್ಲ ಬಯಲಿಗೆ ಬಯಲಾಗಿ ಹೋಗುವುದು 4 ಸಾರವಿಲ್ಲದ ಸಂಸಾರವಿದು ನಿ ಪರ ಕೆಡುತಿಹುದು ಈ ಘೋರವನುಳಿದು ನಿರ್ಮಲನಹುದು ಲಕ್ಷ್ಮೀ ಪಾದ ಕೊಡುವುದು5
--------------
ಕವಿ ಪರಮದೇವದಾಸರು
ಮನವೆ ನೋಡೋ ನಿನ್ನೊಳಗಿಹ್ಯ ನಿಜವ ಪಡಿದೊ ಕೂಡೋ ಗೂಡಿನೊಳರಿಯದೆ ನಾಡಗೊಡವೆ ನಿನಗ್ಯಾಕೊ ಮನವೆ ಧ್ರುವ ಸುಖಿಯಾಗೊ ಕೂಡೊ ಮನವೆ 1 ಮನ ಕರಗಿ ಘನ ಸಮರಸವಾಗೊ ತನುವಿನ ಕಳವಳಗಳೆದು ಅನುದಿನ ತೋರಿದ ಫಲವೇನು 2 ತನ್ಮಯ ತಾರಕ ಬ್ರಹ್ಮಾನಂದವು ಭಿನ್ನವಿಲ್ಲದೇ ನೀ ನೋಡೊ ಸುಖಸಾರವಿದು ಮನವೆ 3 ಅಲ್ಪದೆ ಮಹಿಪತಿ ಮನವೆ ಆಶಾಪಾಶಕೆ ಸಿಲುಕಿಲಿಬ್ಯಾಡೊ ಕೂಡೊ ಮನವೆ 4
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶ್ರೀಗುರುವಿಟ್ಟಂತಿರಿರೋ ವ್ಯರ್ಥಸ್ಯ ಭ್ರಮೆಗೊಳ್ಳಬೇಡೀ ಪ ಕೊಟ್ಟರೂಟವ ಮಾಡಿ ಕೊಡದಿದ್ದರವನ ಪಾಡಿ ಸಿಟ್ಟಾಗಿ ಶಿವನ ಬೈಬೇಡೀ 1 ಸಂತೆಯ ಕೂಟವಿದು ಸಟೆಯ ಸಂಸಾರವಿದು ಅಂತರಾತ್ಮನ ಧ್ಯಾನಿಸುವನೇ ಸಾಧು 2 ಯಾರಿಗೆ ಯಾರಿಲ್ಲಾ ನರದೇಹ ಸ್ಥಿರವಲ್ಲಾ ವಸ್ತು ಮೀರಿದ ಬಳಿಕ ಇರಲಿಲ್ಲಾ 3 ಒಂದೇ ಜನ್ಮದ ನಂಟು ಸುಖದುಃಖಕ್ಕೋಂದೇ ಗಂಟು ಸಂದೇಹವಿಲ್ಲ ಕೊಟ್ಟ ಋಣ ಉಂಟು 4 ವರಮಂಗೀಶಾತ್ಮಾರಾಮಾ ಇರಿಸಿದಂತಿರುವ ನೇಮಾ ಗುರು ವಿಮಲಾನಂದ ಸುಖಧಾಮಾ 5
--------------
ಭಟಕಳ ಅಪ್ಪಯ್ಯ
ಸಾರವಲ್ಲ ಸಂಸಾರವಿದು ಪ ತನುವಿನ ಪಾಶವು ವನಿತೆರ ಪಾಶವು | ಉಣಲುಡುಪಾಶಾ ಹಣಗಳ ಪಾಶವು | ಮನೆ ಪಶು ಪಾಶಾ ಇನಿತಿಹ ಪಾಶದ | ಮನುಜಗ ಸುಖವೆ 1 ಭ್ರಾಂತಿಯ ಮಂದಿರ ಚಿಂತೆಯ ಮಡುವು | ಪಂಥವು ನರಕದ ಕಂತುವಿನಾಶ್ರಯ | ಖಂತಿಯ ನೆಲೆಭವ ಜಂತುರ ನೋಡಲು | ಸಿಂತರ ಬೀಳುವಂತಿನಾ ಜನುಮಾ 2 ತಾಪತ್ರಯ ನಾನಾ ಪರಿಯಿಂದಲಿ | ವ್ಯಾಪಿಸಿಕೊಂಡಿಹ ದೀಪರಿ ಭವಣಿ | ಆ ಪರಗತಿ ನಿನಗಾಪೇಕ್ಷಾದರ | ಪಡಿ ತಂದೆ ಮಹಿಪತಿ ಬೋಧಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹುಚ್ಚು ಮುಂಡೆ ನೀನಾಗಬೇಡ ಹೇಳುವೆ ಕೇಳುಹುಚ್ಚು ಮುಂಡೆ ಹುಚ್ಚು ಮುಂಡೆಯು ಅಲ್ಲಬ್ರಹ್ಮವೇ ನೀನಾಗಿಹೆ ಹುಚ್ಚು ಮುಂಡೆಪಸರ್ವದೇಹಕೆ ನರದೇಹವು ಉತ್ತಮ ಹುಚ್ಚು ಮುಂಡೆಇರುವ ದೇಹದಿ ನಿನ್ನ ಸಾರ್ಥಕ ಮಾಡಿಕೋ ಹುಚ್ಚು ಮುಂಡೆಉರ್ವಿಪ್ರಪಂಚವು ಸತ್ಯವೆಂದು ಎನಬೇಡ ಹುಚ್ಚು ಮುಂಡೆತೋರುವುದಿಂದ್ರಜಾಲದ ತೆರದಿ ಸ್ವರ್ಗ ಮತ್ರ್ಯವುಹುಚ್ಚು ಮುಂಡೆ1ಸತಿಸುತರನು ನೀನು ನಂಬಿ ಕೆಡಬೇಡ ಹುಚ್ಚು ಮುಂಡೆಸತಿಯೆಷ್ಟು ಸುತರೆಷ್ಟು ಆದರು ನಿನಗೆ ಹುಚ್ಚು ಮುಂಡೆಮಿತಿಯಿಲ್ಲದ ದೇಹವಾದವು ನಿನಗೆ ಹುಚ್ಚು ಮುಂಡೆಮತಿಗೆಟ್ಟು ಮರೆತು ಜನ್ಮವನಂತವ ತಿರುಗುವರೆ2ಸ್ವಪ್ನದ ಸುಖದಂತೆ ಸಂಸಾರವಿದು ಮೃಷೆ ಹುಚ್ಚು ಮುಂಡೆಇರುವೆನಾಚಂದ್ರಾರ್ಕವೆಂದು ಎಂಬೆಯೋ ಹುಚ್ಚು ಮುಂಡೆಅಪ್ಪಯ್ಯ ಹೋದನು ಮುತ್ತಯ್ಯ ಹೋದನು ಈ ಪರಿಯಿಂದೆ ಹುಚ್ಚು ಮುಂಡೆಮುಪ್ಪಾದೆ ಇಂತು ಭವದ ಸುಳಿಯಲಿ ಬಿದ್ದು ಹುಚ್ಚು ಮುಂಡೆ3ಕಾರ್ಯೋಪಾಧಿ ಯಿಂದ ಹುಚ್ಚು ಮುಂಡೆ ನೀನಾದೆ ಹುಚ್ಚುಮುಂಡೆಕಾರ್ಯಕಾರಣ ಉಪಾಧಿಯು ನಿನಗಿಲ್ಲವು ಹುಚ್ಚು ಮುಂಡೆಕಾರ್ಯಗುಣಗಳಿಂದ ನಿನ್ನ ತಿಳಿವುದು ಕಷ್ಟ ಹುಚ್ಚು ಮುಂಡೆಕಾರಣ ಗುಣದಲ್ಲಿ ತಿಳಿಯೆ ತಿಳಿಸುವೆ ನಿನ್ನ ಹುಚ್ಚು ಮುಂಡೆ4ಹೊಂದು ಸದ್ಗುರುಪಾದ ತಿಳಿ ನಿನ್ನ ಬ್ರಹ್ಮೆಂದು ಹುಚ್ಚು ಮುಂಡೆನಿಂದುನಾಶಿಕಗೊನೆಯ ನೋಡಿ ದೃಷ್ಟಿಯಿಡು ಹುಚ್ಚು ಮುಂಡೆಚಂದ್ರರು ಶತಕೋಟಿ ಬೆಳಗುವರು ತಾವಲ್ಲಿ ಹುಚ್ಚು ಮುಂಡೆಸುಂದರ ಚಿದಾನಂದನಾಗುವೆ ನಿಜದಲ್ಲಿ ಹುಚ್ಚು ಮುಂಡೆ5
--------------
ಚಿದಾನಂದ ಅವಧೂತರು