ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೃಷ್ಣ ಕೃಷ್ಣ ಕೃಷ್ಣಯೆಂದು ಮೂರುಬಾರಿ ನೆನೆಯಿರೊ ಪ ಭಾರ ಹೊರುವನೋಅ.ಪ ಸಕಲ ವೇದ ಶಾಸ್ತ್ರ ಪಠಿಸಿ ಸಾರವನ್ನು ತಿಳಿದರೇನುಮಕರ ಕುಂಡಲಧರನ ನಾಮಕೆ ಸರಿಯಿಲ್ಲವೊ 1 ಕಮಲನಾಭನ ಚಿನ್ಹೆಯನ್ನು ಧರಿಸಿಕೊಂಡು ಮೆರೆಯಿರೊಯಮನ ಭಟರು ನೋಡಿ ಅಂಜಿ ಅಡವಿ ಹೊಗುವರೋ2 ಜನ್ಮವೆತ್ತಿ ಮಧ್ವಮತವ ಅನುಸರಿಸಿ ನಡೆಯಿರೊಸುಮ್ಮಾನದಿ ಸಿರಿಕೃಷ್ಣ ತನ್ನ ಲೋಕ ಕೊಡುವನೋ3
--------------
ವ್ಯಾಸರಾಯರು
ಜೋ ಜೋ ಜೋನಂತ ಸದ್ಗುಣಧಾಮಾ ಜೋ ಜೋ ಜೋ ಯದುವಂಶಲಲಾಮ ಜೋ ಜೋ ಸಕಲ ಮಲಾಪಹ ನಾಮ ಜೋ ಜೋ ಸಮಾಲಿಂಗಿಹ ಸತ್ಯಧಾಮ ಪ. ನಿಗಮತತಿಗಳೆಲ್ಲ ಪೊಗಳುತ್ತಲಿಹನ ನಗಚಾಪ ಪಿತನನ್ನು ನಗುತ ಪೆತ್ತವನ ಸ್ವಗತ ಭೇದಶೂನ್ಯ ಖಗಪ ವಾಹನನ ಮಗುವೆಂದು ಕೂಗುವ ಮಾರಜನಕನ 1 ಮೂರು ಗುಣಂಗಳ ಮೀರಿದ ಸಿರಿನಲ್ಲ ಚೋರತನದಿ ಬೆಣ್ಣೆ ಮೆಲುವರೆ ಬಲ್ಲ ಈರೇಳು ಭುವನವ ಮೂರಡಿ ಮಾಡಿದ ಧೀರಗೆ ತಕ್ಕ ತೊಟ್ಟಿಲ ಕಾಣೆನಲ್ಲ 2 ಜಾಗ್ರತ್ಸ್ವಪ್ನ ಸುಷುಪ್ತಿ ಭಾವಗಳು ಭೋಗಿ ಶಯನತ್ವದಧೀನವಾಗಿರಲು ವಾಗೀಶವಾಯುಗಳರ್ಚಿಪ ನಿನ್ನನು ತೂಗುವ ರಾಗವ್ಯಾವದೊ ಪೇಳೊ ರನ್ನ 3 ಆದರು ಕಲುಷಾವನೋದನ ನಿನ್ನಯ ಪಾದಕಮಲಗಳ ಪೊಗಳಿ ಪಾಡುವರ ಕಾದುಕೊಳ್ಳುವೆನೆಂಬ ವೇದ ಸಾರವನ್ನು ನೀ ದಯ ಮಾಡಿದರೋದುವೆನಿದನು 4 ನೀರೊಳಗಾಡಬ್ಯಾಡೆಂದರೆ ಕೇಳದೆ ಮಂದರ ಪೊತ್ತು ಬೇರನೆ ಕಿತ್ತಿ ಘೋರ ದೈತ್ಯನ ಸೀಳಿ ತೋರಿ ವಾಮನ ಮೂರ್ತಿ ಧಾರುಣೀಶರ ಕೊಂದ ಧೀರ ರಾಘವನೆ 5 ಚಿಕ್ಕತನದಿ ಬಹು ರಕ್ಕಸ ಕುಲವ ಧಿಕ್ಕರಿಸುತ ಕೈಗೆ ಸಿಕ್ಕದೆ ಓಡಿ ಮಕ್ಕಳಾಟಿಕೆಯಿಂದ ಫಕ್ಕನೆ ಮಾವನ ಸೊಕ್ಕ ಮುರಿದು ನೆಲ ತಿಕ್ಕಿದ ಹರಿಯೆ 6 ಘೋರ ಜರಾಸಂಧ ಸಾಲ್ವೈಕಲವ್ಯರ ಗಾರಗೆಡಿಸಿ ದ್ವಾರಕಾ ಪುರ ರಚಿಸಿ ಕೌರವನೊಶದಲಿ ಸೇರಿದ ಧರಣಿಯ ಮಾರುತಿಯಲಿ ಪ್ರೇಮದೋರಿ ಪಾಲಿಸಿರಿ 7 ಎರಡು ಹೆಂಗಳನಾಳುವುದೆ ಬಹು ಘೋರ ಎರಡೆಂಟು ಸಾವಿರ ಮತ್ತೆಂಟು ನೂರ ನೆರಹಿಕೊಂಡರೆ ನಿನಗಾಗದೆ ಭಾರ ಪರಮಾತ್ಮ ನಿನಗಿದು ಲೀಲಾವತಾರ 8 ಬತ್ತಲೆ ತಿರುಗಿದರಾಗದೆ ದೃಷ್ಟಿ ಕರವಾಳ ಮುಷ್ಟಿ ಸುತ್ತ ತಿರುಹಿ ಪಾಪಿಗಳ ಕೊಂದ ಜಟ್ಟಿಯ ನಿತ್ಯ ನಂಬಿದಪರಿಗಾನಂದ ಪುಷ್ಟಿ 9 ಅಣುಗಳಿಗೆ ಪರಮಾಣುವಾಗಿ ನಿಲುವಿ ಘನಕಿಂತ ಘನವಾಗಿದನುಜರ ಕೊಲುವಿ ಕನಡಿಲಿ ಪ್ರತಿಫಲಿಸುವ ವೋಲಿರುವಿ ಕನಲುತ ಭಕ್ತರು ನೆನೆವಲ್ಲಿ ಒಲಿವಿ 10 ಜೋಗಿ ಜನರ ಸಹವಾಸ ಬೇಡೆಂದರೆ ಪೋಗಿ ಪೋಗಿ ಅವರ ಮನದೊಳಗಿರುವಿ ಶ್ರೀ ಗುರು ಮಧ್ವಮುನಿಯ ಮೇಲೆ ಕರುಣದಿ ಸಾಗಿ ಬಂದಿರುವೀಗ ರೌಪ್ಯ ಪೀಠದಲಿ 11 ಶೃಂಗಾರ ವಾರುಧಿ ಶ್ರೀ ಕೃಷ್ಣಜೀಯ ಮಂಗಳ ದೇವಿಯ ಮೋಹಿಪಕಾಯ ಗಂಗೆಯ ಪಡದಂಗುಷ್ಠವನಿಟ್ಟಪಾಯ ರಂಗನಾಥ ಶ್ರೀ ವೆಂಕಟರಾಯ 12
--------------
ತುಪಾಕಿ ವೆಂಕಟರಮಣಾಚಾರ್ಯ
ತೆಗೆ ತೆಗೆ ಬಾಗಿಲನ್ನು ಲಕ್ಷ್ಮೀಪತಿ ತೆಗೆ ತೆಗೆ ಬಾಗಿಲನ್ನು ಪ ತೆಗೆ ತೆಗೆ ಬಾಗಿಲ ಜೋಗಿ ಕೇಶವದಾಸ ನಗುತ ಬಂದಿರುವನು ಸ್ವೀಕರಿಸಿನ್ನು ಅ.ಪ. ಹÉೀಸಿ ಸಂಸಾರವನ್ನು ತ್ಯಜಿಸಿ ಬಿಟ್ಟು ಆಶೆಪಾಶೆಗಳನ್ನು ಸಾಸಿಮೆ ಕಾಳಿಗೆ ಸರಿಮಾಡಿ ಭವವನ್ನು ವಾಸುಕಿ ಶಯನ ಶ್ರೀ ಲೋಲನ ನಂಬೀ 1 ನಿನ್ನಯ ಭಜನೆಯನು ಮಾಡುತ ಬಂದೆ ನಿನ್ನಯ ಸ್ಮರಣೆಯನು ಪನ್ನಗ ಶಯನ ಶ್ರೀ ದಾಸದಾಸರ ಪೋಷ ಮನ್ನಿಸಿ ನೋಡಲು ಚರಣವ ನಂಬೀ 2 ನಿನ್ನಯ ಲೀಲೆಯಲ್ಲೀ ವೇಷವ ಹಾಕಿ ನಿನ್ನ ನಾಟಕದಲ್ಲಿ ಚನ್ನಾಗಿ ಕುಣಿದು ಲೋಕದೊಳಹÀುತಿಯನಾಗಿ ಚನ್ನಕೇಶವ ಸೂತ್ರಧಾರನ ನಂಬೀ 3
--------------
ಕರ್ಕಿ ಕೇಶವದಾಸ
ಶ್ರೀ ಪತಿಯೆ ನಿನ್ನ ದಯವೆಂತಾಹದೋ ಪಾಪಕರ್ಮವ ಮಾಡಿ ಜೀವಿಸುವೆ ನಿರುತ ಪ ಬಾಲತನವನು ಬಾಲಲೀಲೆಯಿಂದಲಿ ಕಳೆದೆ ಕೀಳು ಜನರೊಡನೆ ಸ್ನೇಹವ ಬೆರಸಿದೆ ಹಾಳು ಹರಟೆಗೆ ಹೊತ್ತು ಸಾಲದೋಯಿತು ಯನಗೆ ಶ್ರೀ ಲೋಲ ನಿನ್ನಡಿಗೆ ದೂರಾದೆ ನಾನು 1 ಬುದ್ಧಿ ಪೂರ್ವಕದಿ ಸದ್ವಿದ್ಯೆಯನು ಕಲಿಯದಲೆ ಶುದ್ಧ ತಾಮಸ ವಿದ್ಯದೊಳು ರಮಿಸಿದೆ ಮಧ್ವಶಾಸ್ತ್ರದಸಾರವನ್ನು ತಿಳಿಯದೆ ನಾನು ಕದ್ದಕಳ್ಳನ ತೆರದಿ ಬಾಳಿದೆನು ಬರಿದೆ 2 ಪ್ರಾಯತನವೆ ವಿಷ ಪ್ರಾಯವಾಯಿತು ಎನಗೆ ಕಾಯಜನ ಉಪಟಳದಿ ಮತ್ತನಾದೆ ತೋಯಜಾಕ್ಷಿಯರ ದುರ್ಮಾಯ ಜಾಲಕೆ ಸಿಲುಕಿ ನೋಯಿಸಿದೆ ನಿಜ ಸತಿಯ ಪರಿಪರಿಯಲಿಂದ 3 ಮದನ ಜನಕನೆ ನಿನ್ನ ಮಧುರನಾಮವ ಮರೆದು ಸುದತಿಯರ ಅಧರಾಮೃತಕೆ ಬೆರೆದು ವಿಧಿಕುಲಾಚರಣೆ ಜರೆದ್ಹÀÀಗಲಿರುಳು ನಾರಿಯರ ವದನವನು ನೋಡಿ ಮೋದಿಪನರಾಧಮನೊಳ್ 4 ಉದರ ಗೋಸುಗ ಪರರ ಹೃದಯ ದ್ರವಿಸುವ ತೆರದಿ ವಿಧ - ವಿಧದಿ, ಆತ್ಮ ಸ್ತೊತ್ರವನೆ ಪೊಗಳಿ ಸದ-ಸದ್ವಿ ವೇಕವನು ತೊರೆದನ್ಯರ್ಹಳಿದು ಬಲು ಚದುರ ನಾನೆಂಧೇಳಿ ಮೋಸಗೊಳಿಸುತ ಜನರ 5 ಸಿರಿ ಚರಣಕ್ಕೆ ಶಿರ ಬಾಗ ದ್ಹರಿ ಭಕುತರಿಗೆ ವಿನಯದಿಂದೆರಗದೆ ನಿರುತದಲಿ ನಾಚಿಕಿಲ್ಲದಲೆ ಭೂದನುಜಯ ವಾನರಿಗೆ ಕರಮುಗಿದು ಜೀವಿಪÀಖೂಳ ಮನುಜನೊಳು 6 ಸತ್ಯಧರ್ಮವÀ ತ್ಯಜಿಸಿ ಮತ್ತೆಯುತ್ತಮರಜಾ - ನ್ನತ್ಯವನು ಸಹಿಸದಲೆ ತತ್ತಳಿಸುವೆ ಪೆತ್ತವರ ಸೇವಿಸದೇ ಮಿಥ್ಯವನೆ ಬೊಗಳಿದು - ಷ್ಕøತ್ಯದಿಂಬಾಳ್ವ ಉನ್ಮತ್ತನರ ಪಶುವಿನೊಳು 7 ಹರಿಗೆರಗದಿರುವÀÀ ಶಿರ ಹರಿಯ ಸ್ಮರಿಸದ ಜಿಂಹೆ ಹರಿವಾರ್ತೆಯಾಲಿಸದ ಕರ್ಣಂಗಳು ಕರ ಹರಿಯ ನೋಡದ ಚಕ್ಷು ಸರುವ ಪರಿಯ ಪವಿತ್ರದೇಹಧರಿಸಿದ ನರಗೆ 8 ವಿತ್ತ ಪಹರಿಸಿ ಪರರ ನಿಂದಿಸಿ ಪರರ ಬಲುವಂಚಿಸಿ ಪರಮೇಷ್ಟಿ ಜನಕನೆ ಪರತರ ಪರಂಜ್ಯೋತಿ ಪರದೈವನೆಂದರಿಯದಿರುವ ಪಾಮರನಿಗೆ 9 ನಾಮಾಡದಿಹ ಪಾಪ ವೀಮಹಿಯೊಳೊಂದಿಲ್ಲ ಸೀಮೆಗಾಣಲು ರವಿಜನಿಗೆ ಸಾಧ್ಯವಿಲ್ಲ ಆ ಮಹಾನರಕÀಂಗಳೆನಗೆÀ ತಕ್ಕವು ಅಲ್ಲ ಸ್ವಾಮಿ ನೀಪೊರೆಯದಿರೆ ಯನಗಾರು ಗತಿಯಿಲ್ಲ 10 ಏನಾದರೊಳಿತೆ ವರದೇಶ ವಿಠಲ ನಿನ್ನಾ ಙÁ್ಞನುಸಾರದಿ ಕರ್ಮಗಳ ಮಾಡಿದೆ ಧೀನರಕ್ಷಕನೆಂಬ ಬಿರಿದು ನಿಜ ವಿದ್ದರಾ - ದೀನನಾದವನನುದ್ಧರಿಸಲರಿಯಾ 11
--------------
ವರದೇಶವಿಠಲ