ಒಟ್ಟು 59 ಕಡೆಗಳಲ್ಲಿ , 21 ದಾಸರು , 58 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂತೊಲಿವನೋ ತನಗಿನ್ನೆಂತೊಲಿವನೋ ಕಂತುಪಿತ ಶ್ರೀಕಾಂತ ಹರಿ ಪ ಜಡಮನದ ಜಡರು ತೊಡೆದು ಪಿಡಿದು ಸತ್ಯ ನುಡಿಯ ಬಿಡದೆ ಅಡರಿಬರುವ ಎಡರಿಗೆದೆ ಒಡೆಯದೆ ಧೃಢಬಲಿಸುವನಕ 1 ದೋಷದೆಳಿಪ ಹೇಸಿ ಭವದ ವಾಸನಳಿದು ಕ್ಲೇಶನೀಗಿ ದಾಸಜನರ ವಾಸದಿರ್ದು ಈಶಭಜನೆ ಬಲಿಸುವನಕ 2 ಕಾಮಿತಾರ್ಥನೀಗಿ ನಿತ್ಯ ನೇಮಬಿಡದೆ ತಪವ ಮಾಡಿ ಸ್ವಾಮಿದಾಸನಾಗಿ ಶ್ರೀ ರಾಮಮಂತ್ರ ಪಡೆಯುವನಕ 3
--------------
ರಾಮದಾಸರು
ಎಲ್ಲಿ ಜನರೆಲ್ಲನೋಡುವರು ನೋಡುವರು ಗುರುಗಳನಾ | ಪ್ರಹ್ಲಾದನೆಂದು ಹೊಗಳುವರು 1 ದಾಸಜನರೆಲ್ಲ ನೋಡುವರು ಮುನಿಯೆಂದು ಹೊಗಳುವರು 2 ಮಂತ್ರಾಲಯದ ದೊರೆಗಳು ಬಿಡಿಸಿ ಕಳುಹುವರು 3 ಎಂಥ ಕÀರುಣಾಳು ಸಂತಾನಕೊಟ್ಟುಸಲಹುವರು 4 ಬಂದ ಜನರನ್ನು ಪೊರೆಯುವರು ನೆಂತೆಂದು ಕರಿಯುವರು 5 ತೋರಮುತ್ತಿನ ಹಾರವನು ಕೈಯ ಮುಗಿವೇನು 6 ಅಂಗಾರ ಧರಿಸುವರು ಮಂತ್ರಾಕ್ಷತೆಯಿಂದ | ಕುಷ್ಟ ರೋಗಗಳನೆಲ್ಲ ಕಳೆಯುವರು 7 ವಂಧ್ಯುರಿಗೆ ಕಂದರಾಗುವರು ಆಗುವರು ಗುರುಗಳು | ಜನರು ಆನಂಧದಿಂದ ಭಜಿಸುವರು 8 ಆನಂದಕ್ಕೆ ಅಳವಲ್ಲ ಅಳವಲ್ಲ ಗುರುಗಳನ | ನಿಂತು ನೋಡುವರ ನೆಲೆಯಿಲ್ಲ 9 ಎಲ್ಲದುರಿತಗಳ ಪರಿಹಾರ ಪರಿಹರಿಸುವ ಲಕ್ಷ್ಮೀ ವಲ್ಲಭ | ನರಸಿಂಹ ವಿಠಲನ ನೆನೆವೇನೆ 10
--------------
ಓರಬಾಯಿ ಲಕ್ಷ್ಮೀದೇವಮ್ಮ
(ಕಾರ್ಕಳದ ವೆಂಕಟೇಶನನ್ನು ನೆನೆದು) ಶ್ರೀನಿವಾಸ ನಮೋ ನಮೋ ಶ್ರುತಿಗಾನಲೋಲ ಪಾಹಿ ಪ. ವಿಪಿನ ನ- ವೀನದವಾನಲ ದೀನೋದ್ಧಾರ ದಯಾನಿಧೆ ಸುಂದರ ಅ.ಪ. ಶೇಷಗಿರಿಯಿಂದ ಸುಜನಗಳ ಘೋಷದಿ ನಂಬಿದ ದಾಸಜನರಭಿಲಾಷೆಯನು ಸಂತೋಷದಿ ಕೊಡಲು- ಲ್ಲಾಸದಿಂದ ಪರೇಶ ನಾನಾ ವಿಲಾಸದಿ ನೆಲಸುತ ಕಾಸುವೀಸದ ಭಾಷೆಯನು ದಿಗ್ದೇಶದಿಂದ ಮಹಾಸುಕೀರ್ತಿಯ ರಾಸಿಗಳಿಸಿ ಜಗದೀಶ ಪರೇಶ ಮ- ಹೇಶವಿನುತ ನಿರ್ದೋಷ ಜಗನ್ಮಯ 1 ಉತ್ತಮಾಂಗಸುರತ್ನಖಚಿತಕಿರೀಟದ ನಿಜಪದ- ಭಕ್ತಜನಮನವೃತ್ತಿ ಒಲಿಸುವ ಕೂಟದ ಕರುಣೋ- ತ್ಪತ್ತಿ ಸರಸಿಜನೇತ್ರಯುಗ್ಮದ ನೋಟದ ಭೂಷಣ- ಮೊತ್ತದಿಂದಾದಿತ್ಯಕೋಟಿಯನ್ನೆತ್ತಿಂದತೆಸೆವುತ್ತ ಮಂಗಲ- ಮೂರ್ತಿಧರಿಸಿ ಜನರರ್ತಿಯ ಸಲಿಸುವ ಚಿತ್ತಜಜನಕ ಸರ್ವೋತ್ತಮ ನಿರುಪಮ 2 ಪಂಕಜಾಂಬಕ ಶಂಕರಾಪ್ತ ಶುಭಾಕರ ಶ್ರೀವ- ತ್ಸಾಂಕ ಮುಕ್ತಾಲಂಕೃತ ಕರುಣಾಕರ ಭಕ್ತಾ- ತಂಕರಹಿತ ನಿಶ್ಯಂಕ ನಿತ್ಯನಿರಾಕರ ಪ್ರಭು ವೆಂಕಟೇಶ ನಿರಾಮಯಾಮರಸಂಕುಲಾರ್ಚಿತ ಶಂಖಚಕ್ರಗ- ದಾಂಕಿತ ದನುಜಭಯಂಕರ ವರ ನಿರ- ಹಂಕರ ನಿಜದ ನಿಷ್ಕಳಂಕಚರಿತ್ರ 3 ಮಂದರಾಧರ ಮಾಪತೇ ಮುಖಚಂದಿರ ಮೌನಿ ವೃಂದವಂದ್ಯ ಸುರೇಂದ್ರಪೂಜ್ಯ ಧುರಂಧರ ಮಹಾ- ಕಂಬುಕಂಧರ ಶೋಭಿಪ ಕುಂದರದನ ಕುಚೇಲಪಾಲಾರವಿಂದನಾಭ ಪುರಂದರಾರ್ಚಿತ ಮಂದಹಾಸ ಮುಚುಕುಂದವರದ ಗೋ- ವಿಂದ ಸಚ್ಚಿದಾನಂದ ಉಪೇಂದ್ರ 4 ಮೂರು ಲೋಕೋದ್ಧಾರಿ ಘನಗಂಭೀರನೆ ವೆಂಕಟ ಧೀರಕಾರ್ಕಳಸಾರನಗರಾಧಿಕಾರನೆ ಭೂಸುರ- ಭೂರಿವೇದಪುರಾಣಘೋಷಾದಿಹಾರನೆ ಸಂತತ ಚಾರು ಗೌಡಸಾರಸ್ವತಶೃಂಗಾರಋಗ್ವೇದಾಖ್ಯ ಉತ್ತಮ ದಾರುಣೀಸುರರಿಂದನವರತ ಮಂಗ- ಲಾರತಿಗೊಂಬ ಲಕ್ಷ್ಮೀನಾರಾಯಣ ಹರಿ 5
--------------
ತುಪಾಕಿ ವೆಂಕಟರಮಣಾಚಾರ್ಯ
ಅಲ್ಲಿನೋಡಿ ಶ್ರೀನಿವಾಸನ ಪ ವಾಸವ ಮಾಡುತ ದಾಸಜನರ ಮನ ತೋಷಪಡಿಸುವುದ ನೋಡಿ 1 ಸಾಧು ಜನರ ಮನ ಮೋದಪಡಿಸುವುದ ನೋಡಿ2 ಪ್ರಾಣನಾಥÀವಿಠಲನು ಸಾನುರಾಗದಲಿ ವೇಣು ಸಿರಿ ಮಾನಿನಿಯಿಂದೊಪ್ಪಿರುವುದ ನೊಡಿ 3
--------------
ಬಾಗೇಪಲ್ಲಿ ಶೇಷದಾಸರು
ಅಹುದಹುದೊ ಹನುಮಂತ ನಿನ್ನ ಮಹಿಮೆಅಹಿತರೆದೆಶೂಲ ನಿಜಪಾಲ ಹರಿಪದಲೋಲ ಪ. ಬೇಡಿದರಿಗಭಯಹಸ್ತದ ಪ್ರಸಾದವನಿತ್ತುಕೂಡೆ ಮನದಭೀಷ್ಟಗಳ ಕೊಡುವೆಆಡಲನ್ನಳಕೊವಿಯನೊಡದು(?)ರಿಪುಖಳ ವಿ-ಭಾಡನೆಂದೆನಿಸಿ ಸೋದೆಯ ಜನರ ಪೊರೆದೆ 1 ರಾಮಲಕ್ಷ್ಮಣರ ಪೆಗಲಲಿ ಹೊತ್ತುಕೊಂಡು ನಿ-ಸ್ಸೀಮನೆಂದೆನಿಸಿ ಸುಗ್ರೀವನಪ್ರೇಮದಿಂದಲಿ ತಂದು ಅವನಿಗಭಯವಿತ್ತುಭೂಮಿಕಪಿಗಳ ಕೂಡಿ ಸೀತೆಯನರಸಿದೆ2 ಮಂಡೋದರಿಯ ಸುತನ ತುಂಡುಚೂರ್ಣವ ಮಾಡಿತಂಡ ತಂಡದ ಅಂಗಡಿಯ ಸಾಲೆಯಲಿಚಂಡ ಪಾವಕÀನಿಪ್ಪ ಸವುದೆಯೊಳು ಖಳರಹಿಂಡ ಹೋಮಿಸಿ ರಣಾಧ್ವರಕೆ ವೀಕ್ಷಿತನಾದೆ3 ಸ್ವಾಮಿಕಾರ್ಯದಿ ದುರಂಧರನೆನಿಸಿ ನಿನ್ನ ಪದಪ್ರೇಮ ವರ್ಧಿಪುವುದೇನು ಚಿತ್ರತಾಮಸಜನರ ಸೀಮೆಯೊಳು ಪೂಜೆಯಗೊಂಬಧೀಮಂತ ನಿನಗಲ್ಲದುಳಿದವರಿಗುಂಟೆ 4 ಗಿರಿವನವ ತಂದು ವಾನÀರ ಸಮೂಹವ ರಕ್ಷಿಸಿದೆದುರುಳ ರಾವಣನ ನೀನೆ ಗುದ್ದಿ ಧರೆಯೊಳಗೆಸಿರಿರಾಮನ ಪಂಥ ಗೆಲಲೆಂದುತಿರುಗಿದೆಯೆಲೊ ಹಯವದನನ ಮೋಹದ ಬಂಟ5
--------------
ವಾದಿರಾಜ
ಇದು ಎಂಥ ಸವಿ ಇಹ್ಯದು ಶ್ರೀಹರಿ ನಾಮ ಮಧುಗಿಂತ ಮಧುವಿಹ್ಯದು ಪ ಅಧಮ ಮನಸೇ ನೀನು ಸ್ವಾದ ಸವಿದುನೋಡೋ ಅಧಿಕ ಅಮೃತಕಿಂತ ಮಾಧುರ್ಯ ತುಂಬಿಹ್ಯದು ಅ.ಪ ಸುಧೆಗಿಂತ ಸುಧೆಯಿಹ್ಯದು ಮೃಷ್ಟಾನ್ನದ ಮೃದುಗಿಂತ ಮೃದುವಿಹ್ಯದು ವದನದೊಳಿಟ್ಟರೆ ವಿಧವಿಧದ್ಹಸುತೃಷೆ ಸದೆದು ಸದಮಲಸುಖ ಒದಗಿಸಿ ಕೊಡುವುದು 1 ಶುಚಿಗಿಂತ ಶುಚಿಯಿಹ್ಯದು ಹೆಚ್ಚಿಗೆ ಹೆಚ್ಚು ರುಚಿಗಿಂತ ರುಚಿಯಿದ್ಯದೋ ಉಚ್ಚಿಷ್ಟರಾಗದೆ ಬಚ್ಚಿಟ್ಟು ಸುರಿವರ್ಗೆ ನಿಶ್ಚಲಸುಖಪದ ಮೆಚ್ಚಿ ತಾ ಕೊಡುವುದು 2 ಶಾಶ್ವತಸುಖವೀಯ್ವುದೋ ಭವರೋಗ ಕೌಷಧ ಮಾಗಿಹ್ಯದೋ ದಾಸಜನರಿಗನುಮೇಷ ಸವಿಯುದೋರಿ ಪೋಷಿಸುತಿರುವುದು ಶ್ರೀಶ ಶ್ರೀರಾಮನಾಮ 3
--------------
ರಾಮದಾಸರು
ಈ. ಯತಿವರ್ಯ ನಮನ ಮಧ್ವರಾಯರಿಗೆ ನಮೋ ನಮೋ ಗುರು ಮಧ್ವಸಂತತಿಗೆನಮೋ ನಮೋ ಪ ಸಂತತ ಶುಭವಾದೆನುತ ದಾಸಜನರಿಗೇಕ ಚಿತ್ತದಿಂದವಂದಿಸಿ ಬೇಡುವೆ ಅ.ಪ. ಕುಸುಮನಾಭರ ಸಮ ನಾಲ್ವರುಯೆಂದೆನಿಪಹಸನಾದ ಗುರುಗಳ ಸ್ಮರಿಸುತಾನ್ಯಾಯಸುಧಾಕಾರರಿಗೆ ನಮೋ ನಮೋ 1 ರಘುಕುಲನಂದನ ಸುಬ್ರಮಣ್ಯತೀರ್ಥ ಕರದಿ ಪಾಲಿತಗೆಬಿಡದೆ ಬೋಧಿಸಿದ ತಲೆಗೆ ನಮೋ ನಮೋ 2 ರಘೋತ್ತುಮಾಖ್ಯರ ಕಾರುಣ್ಯಪರೆಂದೆನಿಪರಿಗೆಸೂರಿತಾರೇಶ ಜಾತ ವಿಜೇಂದ್ರತನಯನೆನಿಪಶ್ರೀ ಸುಧೀಂದ್ರ ಪೋಷಿತ ಸದ್ಗುರು ರಾಘವೇಂದ್ರತಾತಗೆನಮೋ ನಮೋ 3 ಗುರುಪುರಂದರ ದಾಸರ ಸುಜಾತರ್ಗೆ ನಮೋ ವೈಕುಂಠದಾಸರಿಗೆ ನಮೋ ನಮೋ ಚನ್ನ ಚಿಕ್ಕಬದರಿನಿಲಯನ್ನ ಕಂಡರ್ಗೆ ಕರುಣಾಪಾತ್ರರುಯೆನಿಪವರದಗುರುಗೋಪಾಲ ಸು ಜಗನ್ನಾಥರಾಯರಿಗೆನಮೋ ನಮೋ 4 ತತ್ವಮಸಿ ವ್ಯಾಸ ಶ್ರೀಧರ ಶ್ರೀಗುರು ಶ್ರೀಪತಿ ಪ್ರಾಣೇಶಗುರು ವಿಜಯ ರಾಮಚಂದ್ರದಾಸರಿಗೆ ನಮೋ ನಮೋಬಾದರಾಯಣಗುರು ವೆಂಕಟ ಶ್ರೀನಿವಾಸ ಜಯಜಯೇಶತಂದೆವರದಗೋಪಾಲವಿಠಲನ ದಾಸರಿಗೆ ನಮೋ ನಮೋ5
--------------
ತಂದೆವರದಗೋಪಾಲವಿಠಲರು
ಈಶನೀನೆ ದಯಾಸಿಂಧು ದಾಸಜನರ ಪ್ರೇಮಬಂಧು ಪ ಹೇವವಿಲ್ಲದೆ ಕಾಸಾರಕೈದಿ ಬೋವನಾಗಿ ಬಂಡಿ ಹೊಡಿದಿ ಕೇವಲ ಮಾನಕಾಯ್ದಿ ಸತಿಯ ಸೇವಕಜನರ ಬೆಂಬಲನೆ 1 ನಿನ್ನ ಭಜಿಸಿ ಬೇಡುವವರ ಭಿನ್ನವಿಲ್ಲದೆ ದಯದಿ ಒದಗಿ ಸಾವುಹುಟ್ಟು ಬಂಧಗೆಲ್ಲಿಸಿ ಧನ್ಯರೆನಿಸಿ ಸಲಹುವಿ 2 ಕಾಮಿತಾರ್ಥಪೂರ್ಣ ಭಕ್ತ ಕಾಮಧೇನು ಕಲ್ಪತರು ಸ್ವಾಮಿ ಶ್ರೀರಾಮ ನಿಮ್ಮ ವಿಮಲ ನಾಮ ಎನ್ನ ಜಿಹ್ವೆಗೆ ನೀಡೊ 3
--------------
ರಾಮದಾಸರು
ಎಂದಿಗೀಪದ ಕರುಣಮಾಡುವೆಯೋ ನಿಮ್ಮ ಧ್ಯಾನಾ ನಂದ ಅಮೃತಪಾರ ನವಿನುಡಿಯ ಪ ಎಂದಿಗೀಪದ ಕರುಣಮಾಡಿ ಕರವ ಪಿಡಿದು ಮಂದಮತಿಯ ತರಿದು ಪೊರೆಯುವೆ ಸಿಂಧುಶಯನ ತಂದೆ ಶ್ರೀಹರಿ ಅ.ಪ ವಿಷಮಸಂಸಾರ ಮೋಹವನು ಬಿಡಿಸಿ ನಿಮ್ಮ ಭಜನ ಅಸಮ ಸುಖದೆನ್ನ ಮನವ ನಿಲ್ಲಿಸಿ ವ್ಯಸನ ಏಳರ ಕಾಟ ತಪ್ಪಿಸಿ ಬಿಡದೆ ಎನ್ನ ರಸನೆಮೇಲ್ನಿಮ್ಮ ನಾಮ ಸ್ಥಾಪಿಸಿ ವಸುಧೆ ಜನರ ಸುದ್ದಿ ಮರೆಸಿ ನಶಿಪ ಲೌಕಿಕದಾಸೆ ಕೆಡಿಸಿ ಕುಶಲಮತಿಯಿತ್ತು ಪಾಲಿಸುವ ಮಹ ಅಸಮಶುಭದಿನ ಕುಸುಮನಾಭ 1 ಹತ್ತು ಇಂದ್ರಿಯ ಮೂರು ಬಾಧೆ ತೊಲಗಿಸಿಬಿಡದೆ ಎನ್ನ ನೇತ್ರದೊಳು ತವಮೂರ್ತಿ ನಿಲ್ಲಿಸಿ ಸುತ್ತಿ ಕೊಲುವ ಮಾಯ ಮುಸುಕು ಹಾರಿಸಿ ನಿತ್ಯದೆನ್ನ ಚಿತ್ತದೊಳು ನಿಜಜ್ಞಾನ ಸ್ಥಿರಪಡಿಸಿ ಸತ್ಯ ಸನ್ಮಾನ್ಯಕ್ತನೆನಿಸಿ ನಿತ್ಯ ನಿರ್ಮಲ ನಿಮ್ಮ ಭಕ್ತರ ಉತ್ತಮ ಸಂದರುಶನವಿತ್ತು ತವ ಭೃತ್ಯನೆನಿಸೆನ್ನ ಸಲಹುವಂಥ 2 ಕ್ಲೇಶ ಪಂಚಕದುರುಲು ಪರಿಹರಿಸಿ ಅನುಮೇಷ ನಿಮ್ಮ ದಾಸಜನರಾವಾಸದೆನ್ನಿರಿಸಿ ಮೋಸಮರವೆಯ ಜಾಲ ಛೇದಿಸಿ ನಿಶಿದಿವದಿ ನಿಮ್ಮ ಧ್ಯಾನದೊಳೆನ್ನ ಮನವಐಕ್ಯೆನಿಸಿ ಮೋಸ ಪಾಶಗಳೆಲ್ಲನಾಶಿಸಿ ದೋಷರಾಶಿಯಿಂ ಮುಕ್ತನೆನಿಸಿ ಶ್ರೀಶ ಶ್ರೀರಾಮ ನಿಮ್ಮ ಚರಣ ದಾಸನೆನಿಸಿ ಪೋಷಿಸುವಂಥ 3
--------------
ರಾಮದಾಸರು
ಎಂದು ದೂರಮಾಡುವಿ ಎನ್ನ ಬಂಧನವನು ಸಿಂಧುಶಯನ ತಂದೆ ಈ ಭವದಂದುಗವನು ಸಹಿಸಲಾರೆ ಪ ಸತಿಪತಿಯ ರತಿಯ ಕಲಹದಿ ಪತನಾದಿಂದ್ರಿಯಿಂದೆ ನಾನು ಪೃಥಿವಿಮೇಲೆ ಬಿದ್ದು ಘನ ವ್ಯಥೆಯಬಡುವ ತಾಪತ್ರಯವ 1 ಮಂದಭಾಗ್ಯನಾಗಿ ಆಗಿ ನಾನಾ ಸಂದಿನೊಳಗೆ ಬಂದು ಬಂದು ಮಂದಿಸೇವೆಗೈದು ನರಕ ಬಂಧರುರುಳವಂಥ ಕೆಡುಕು 2 ಆಸೆದೆಳಸಿ ಪರರಾಸ್ತಿ ಮೋಸತನದಿ ಕದಿಸಿ ಯಮನ ಪಾಶದೊಳಗೆ ನೂಕುವಂಥ ಹೇಸಿ ಎನ್ನ ನಾಶಬುದ್ಧಿ 3 ಅವನಿಯೊಳು ಜನಿಸಿಬಿಟ್ಟ ಬವಣೆ ನೆನೆಸಿ ನೆನೆಸಿ ಎನಗೆ ಸವೆಯದಯ್ಯೋ ದು:ಖ ಈ ದು ರ್ಭವ ಪಾಪ ಸಂಕಟ 4 ದಾಸಜನರ ಪ್ರಾಣಪ್ರಿಯ ಶ್ರೀಶ ಶ್ರೀರಾಮ ನಿಮ್ಮ ಚರಣ ಧ್ಯಾಸ ಮರೆಗೆ ಬಳಲಿಸುವ ಹೇಸಿಭವದ ವಾಸನವ 5
--------------
ರಾಮದಾಸರು
ಎಲೆ ಮನಸೆ ನಾಂ ಪೇಳ್ವ ಬುದ್ಧಿ ಮಾತುಗಳ ಕಲಿತು ಜಾಣನಾಗಿ ನಿಜಸುಖದಿ ಬಾಳು ಪ ಪರನಿಂದೆ ಬೆರೆಸದಿರು ನಿರುತರನು ಜರಿಯದಿರು ದುರಿತದೊಳಗುರುಳದಿರು ಪರಚಿಂತೆ ಮಾಡು ಗುರುಹಿರಿಯ್ಹರಳಿಯದಿರು ದುರುಳರೊಳಗಾಡದಿರು ಹರಿಯಶರಣರ ಸೇವೆ ಸ್ಥಿರವಾಗಿ ಮಾಡು 1 ಮರವೆ ಪರದೆಯ ಹರಿ ಅರಿವಿನಮೃತ ಸುರಿ ಸ್ಥಿರಜಾನ್ಞದೊಳು ಸೇರಿ ಹರಿಚರಿತ ಬರಿ ಹರಿದಾಟವನು ಮರಿ ಜರೆಮರಣದು:ಖ ತರಿ ಪರಮಹರುಷದಿ ಮರೆ ದುವ್ರ್ಯಸನ ತೂರಿ 2 ಕ್ರೋಧವನು ಕಡೆಮಾಡು ವಾದಬುದ್ಧಿಯ ದೂಡು ಸಾಧುಜನರೊಳಗಾಡು ಶೋಧನ ಮಾಡು ಖೇದವನು ಈಡ್ಯಾಡು ವೇದದರ್ಥವ ಮಾಡು ಪಾದಸೇವೆಯ ಮಾಡು ಮಾಧವನ ಕೂಡು 3 ಕಾಮಲೋಭವ ಕಡಿ ಭೂಮಿಮೋಹವ ತೊಡಿ ಭಾಮೆಯರ ಪ್ರೇಮ ಬಿಡಿ ಕ್ಷೇಮಪಥ ಪಿಡಿ ತಾಮಸದೂರಮಾಡಿ ಸಾವಧಾನದ್ಹಿಡಿ ಪಡಿ ನೇಮದ್ಹುಡುಕಾಡಿ 4 ಮೋಸಪಾಶವ ಗೆಲಿ ಕ್ಲೇಶಗುಣಗಳ ತುಳಿ ದಾಸಜನರೊಳು ನಲಿ ಶಾಶ್ವತವ ತಿಳಿ ಹೇಸಿಕ್ವಾಸನೆಯಳಿ ದೋಷರಾಸಿಯಿಂದುಳಿ ಶ್ರೀಶ ಶ್ರೀರಾಮನಲಿ ದಾಸನಾಗಿ ಸೆಳಿ 5
--------------
ರಾಮದಾಸರು
ಕರ ಪ ಪಾಪ ವಿಮೋಚಕ ತಾಪವಿದೂರಕ ತಾಪತ್ರಯಗಳನೇಕ ಪರಿಹಾರಕ 1 ದೋಷನಿವಾರಕ ತೋಷಪ್ರದಾಯಕ ದಾಸಜನರ ಚಿತ್ತವಾಸನಾಯಕ 2 ಗಗನದೊಳಿರುವಂಥ ಜಗದೊಡೆಯನೇ ನೀನು ನಿಗಮಗೋಚರ ಶ್ರೀ ನರಸಿಂಹವಿಠ್ಠಲಾ 3
--------------
ನರಸಿಂಹವಿಠಲರು
ಕರ ಜೋಡಿಸುತ ನಿನ್ನಾ | ಗಣಾಧಿಪತಿ ನಾ ಪ ಶಂಭುಕುವರನೆ ಲಂಬೋದರನೆ ಬೇಡುವೆನು 1 ಯೋಗಮೂರುತಿ ಯೋಗಿವಂದಿತ ಬೇಡುವೆನು 2 ದಾಸಜನರನು ಪೋಷಿಸೆನ್ನುತ ಬೇಡುವೆನು 3
--------------
ಬೆಳ್ಳೆ ದಾಸಪ್ಪಯ್ಯ
ಕೇಳಮ್ಮ ತಂಗಿ ಕೇಳಮ್ಮ ಪ ಕೇಳಿ ಪುರಾಣದಿ ಪೇಳಿದ ಕೃಷ್ಣನ ಲೀಲೆಯ ಪಾಡುತ ``ಬಾಳಮ್ಮ'' ಅ.ಪ ನಿಷ್ಟೆಯಿಂದಲಿ ಬಲು ಶಿಷ್ಟಳಾಗುತ ದುಷ್ಟರಿಂದ ದೂ``ರಾಗಮ್ಮ'' 1 ಹರಿದಾಸರಪದ ಹರುಷದಿ ಹಾಡುತ ಗುರು ಹಿರಿಯರ ಮನ ``ಕೊಪ್ಪಮ್ಮ'' 2 ಕಾಲ ಕಳೆಯದೆ ಶೀಲಮತಿ ನೀ “ನಾಗಮ್ಮ'' 3 ವಿದ್ಯೆಯ ಕಲಿತು ಬದ್ಧಿವಂತ | ಳಾ | ಗಿದ್ದರೆ ಸುಖ ಶತ “ಸಿದ್ಧಮ್ಮ'' 4 ವಂದಿಸಿ ತುಲಸಿ ವೃಂದಾವನ ಪೂಜಿಸು ಮುಂದೆ ನಿನಗೆ ``ಆನಂದಮ್ಮ'' 5 ಹೀನರ ಬೆರೆಯದೆ ಮೌನವ್ರತದಲಿ | ಜ್ಞಾನಿ ಜನರ ನೀ ``ನರಸಮ್ಮ'' 6 ಮೂಢ ಜನರ ಒಡನಾಡದೆ ಭಕ್ತಿಲಿ ಮಾಡುವ ಸಜ್ಜನರ ``ಸಂಗಮ್ಮ'' 7 ಧರ್ಮದಿಂದ ಸತ್ಕರ್ಮ ಮಾಡುತ ನಿರ್ಮಲಗೊಳಿಸಿ ಸಂತ ``ರಂಗಮ್ಮ'' 8 ಪವನ ಪಿತನ ಕಥಾಶ್ರವಣವೆ ಪುಣ್ಯವು ಭವ ವಿದು ಕತ್ತಲು ``ಕಾಳಮ್ಮಾ'' 9 ಸದನಕೆ ಬಂದಿಹ ಬುಧರಾವರಿಸಲು ಮಂದಬಲು ನಿನಗದ ``ರಿಂದಮ್ಮ'' 10 ಎಂದೆಂದಿಗು ಪರನಿಂದೆಯ ಮಾಡದೆ ಮಂದಿರದಿರುವದೆ ``ಚಂದಮ್ಮ'' 11 ಸಾರಿದ ಜನರಘದೂರಗೈದು ಹರಿ ತೋರುವ ನುಜಗುರು ``ಈರಮ್ಮ'' 12 ಅತ್ತಿಯ ಮನಿಗೆ ಹೆತ್ತವರಿಗೆ ಉತ್ತಮ ಕೀರ್ತಿ ``ತಾರಮ್ಮ'' 13 ಗೋವಿಪ್ರಾಳಿ ಸೇವಿಸುತಿರುವದೆ ಕೋವಿದರಿಗೆ ಬಲು ``ಜೀವಮ್ಮ'' 14 ಭಾವದೊಳಗೆ ಪರದೇವನೆ ಪತಿಯೆಂದು ಪಡಿ ``ಭೋಗಮ್ಮ'' 15 ಭೇದಜ್ಞಾನ ಸಂಪಾದಿಸು ಕ್ಷಮಿಸುವ ಶ್ರೀಧರ ನಿನ್ನಾಪ ``ರಾಧಮ್ಮ'' 16 ಕೋಪದಿ ಪರರಿಗೆ ತಾಪವ ಬಡಿಸಲು ಲೇಪವಾಗುವದು ``ಪಾಪಮ್ಮ'' 17 ಇಂಗಡಲಾತ್ಮಜನಂಘ್ರಿ ಸರೋಜಕೆ ಸತಿ ``ತುಂಗಮ್ಮ'' 18 ದಾಸಜನರ ಸಹವಾಸದೊಳಿರುವದೆ ಕಾಶಿಗಿಂತ ವಿ``ಶೇಷಮ್ಮ'' 19 ಕಲಿಯುಗದಲಿ ಸಿರಿನಿಲಯನ ನೆನೆದರೆ ಸುಲಭ ಮುಕ್ತಿ ತಿಳಿ ``ಕಂದಮ್ಮ'' 20 ಪತಿಯು ಸದ್ಗತಿಗೆ ಗತಿ ಎಂದರಿತಹ ಮತಿಯುತ ಸತಿಯೆ ``ಯವನಮ್ಮ'' 21 ಮಧ್ವಸಿದ್ಧಾಂತದ ಪದ್ಧತಿ ತಪ್ಪದೆ ಇದ್ದರೆ ಹರಿಗತಿ ``ಮುದ್ದಮ್ಮ'' 22 ಸೋಗಿಗೆ ನೀ ಮರುಳಾಗಿ ನಡೆದರೆ ಯೋಗಿ ಜನರ ಮನ ``ಕಲ್ಲಮ್ಮ'' 23 ಶೀಲೆ ಗುಣದಿ ಪಾಂಚಾಲೆಯು ಎಲ್ಲ ಬಾಲೆಯರೊಳು ``ಮೇಲಮ್ಮ'' 24 ನೇಮದಿ ನಡೆದರೆ ಪ್ರೇಮದಿ ಸಲಹುವ ಶಾಮಸುಂದರನು ``ಸತ್ಯಮ್ಮ'' 25
--------------
ಶಾಮಸುಂದರ ವಿಠಲ
ಗಿರಿರಾಜ ಸುಕುಮಾರಿ ಶಕ್ತಿ ವಿರಕ್ತಿ ಪ ದೊರೆಯುವಂತೆನಗವ್ವ ತವಪಾದ ಭಕ್ತಿ ಅ.ಪ ಕಂಬುಕಂಠಿನಿ ಗುಹ ಜನನಿ ದುರ್ಗಾಂಬಾ 1 ನಾಸಿಕ ಚಂಪ ಪೋಲ್ವ ಶರ್ವಾಣೀ2 ಪಾವಂಜೇಶನ ದಾಸಜನರ ರಕ್ಷಕಿಯೇ 3
--------------
ಬೆಳ್ಳೆ ದಾಸಪ್ಪಯ್ಯ