ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂಥಾದಯವಂತನೋ ಸಂತಾರನಾಥನೋ ಪ ಕಂತೂ ಜನಕಾನ ಪ್ರಿಯ್ಯಾನೋ ಆ - ನಂತಾ ನಂತಾ ಮಹಿಮನೋ ಅ.ಪ ರಮ್ಯಾ ಗುಣಾ ಪೂರ್ಣನೋ - ಆ - ಗಮ್ಯಾ ಸಚ್ಚರಿತಾನೋ ನಮ್ಯಾನತರಾ ಪೊರೆವಾನೋ - ಈತ ನಮ್ಯಲ್ಲಾರ ಸಲಹೋನೋ 1 ಪ್ರಾಣಾವೇಶಾಯುತನೋ - ಜಗ - ತ್ರಾಣಾ ತಾನಾಗಿಹನೋ ಕ್ಷ್ಯೋಣೀಯೋಳ್ವಿಖÁ್ಯತಾನೋ - ಎನ್ನ ಪ್ರಾಣಾUಳಿಗೆ ನಾಥನೋ 2 ಕರುಣಾಶಾಲಿ ಎನಿಪಾನೋ - ತನ್ನ ಚರಣಾ ಸೇವಾ ನೀಡುವನೋ ಶರಣಾಬ್ಜ - ತರಣೀ ಸÀಮನೋ - ಅಂತಃ ಕರಣಾದಲ್ಲಿರುವಾನೋ 3 ಜನನೀ ಜನಕಾರೆನಿಪನೋ - ಸಕಲ ಜನರೀಗೆ ಸಮ್ಮತನೋ ಜನುಮಾ ಜನುಮದಲೀತನೋ - ನಿಶ್ಚಯ ಎನಗೆ ತಾತನೋ 4 ಭೂತಾಳದೊಳು ವಿಖ್ಯಾತನೋ ನಿಜ - ದಾತಾ ಜನರಿಗೆ ಪ್ರೀತನೋ ನೀತಾ ಗುರು ಜಗನ್ನಾಥಾ ವಿಠಲ - ಪ್ರೀತಿಯ ತಾಪೊಂದಿಹನೋ 5
--------------
ಗುರುಜಗನ್ನಾಥದಾಸರು
ನಂದಕಂದನ ನೋಡಿರೇ| ಅಂದದಿ ಛಂದದಿ ಪಾಡಿರೇ ಪ ದುಡುದುಡುಕೆಂದು ಕಡೆಯಲು ಗೋಪಿ| ಒಡನೊಡನಾಲಿಸಿ ಶಬ್ದವಾ|| ದುಡುದುಡು ಬಂದ ಕಡಗೋಲ ಪಿಡಿದು ಬಿಡದೆವೆ ಬೆಣ್ಣೆಯ ಬೇಡುವಾ1 ಅಂದುಗೆ ಗೆಜ್ಜೆಗಳಾ| ಘಿಲು ಘಿಲುಕೆಂದು ನುಡಿಸುವಾ| ಎಳೆಯಳೆಗೆಳೆರ ಮೇಳದಲಾಡಿ| ನಲಿನಲಿದಾಡುತಲೊಪ್ಪುವಾ 2 ಅಚ್ಚರಿ ಬಗೆಯಲಿ ಗುರುಮಹಿಪತಿ ಪ್ರಭು ಸಚ್ಚರಿತಾಮೃತ ಬೀರುವಾ|| ಪಟ್ಟದ ಬೊಂಬೆಯ ನಿಚ್ಚಳ ಭಾಸುವ| ಅಚ್ಯುತನಾಕೃತಿ ದೋರುವಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶೋಭಾನ | ಶೋಭಾನವೆನ್ನಿರೆ ಸುರರಂಗನಿಯರೆಲ್ಲ ಶೋಭಾನವೆನ್ನಿ ಶುಭವೆನ್ನಿ ಪ ಶೃಂಗಾರದ ಗುಣನಿಧಿಯೆ ಬಾ | ಅಂಗಜಜನಕ ಅರವಿಂದದಾಳಾಕ್ಷನೆ ರಂಗಾ ಬಾ || ಭವಭವ ಭಂಗಾ ಬಾ | ದೇವೋತ್ತುಂಗಾ ಬಾ | ಜಗದಂತರಂಗಾ ಬಾ ಹಸೆಯ ಜಗುಲಿಗೆ1 ಪಂಕಜ ಸಂಭವನಯ್ಯ ಬಾ | ಕುಂಕುಮಾಂಕಿತನೆ ಭಕುತ ಕುಮುದ ಮೃಗಾಂಕ ಬಾ || ನಿಷ್ಕಳಂಕಾ ಬಾ ಶಂಖಚಕ್ರಾಂಕ ಬಾ | ಅಹಿಪರಿಯಂಕÀ ಬಾ ಹಸೆಯ ಜಗುಲಿಗೆ 2 ಸಾಮಜರಾಜಾ ವರದಾ ಬಾ | ಸಾಮವಿಲೋಲನೆ ಸದ್ಗುಣ ಶೀಲನೆ ರಾಮಾ ಬಾ || ರಣರಂಗಭೀಮಾ ಬಾ ಹಸೆಯಾ ಜಗುಲಿಗೆ 3 ಅಚ್ಯುತ ಉನ್ನತ ಮಹಿಮನೆ ಯಾದವ ಬಾ | ಘನ್ನ ಮೂರುತಿಯೆ ಸುಪ್ರಸನ್ನಾ ಬಾ ಸಚ್ಚರಿತಾ ಬಾ | ಭಾಗ್ಯ ಸಂಪನ್ನಾ ಬಾ ಜೀವರ ಭಿನ್ನಾ ಬಾ ಹಸೆಯಾ ಜಗುಲಿಗೆ 4 ನಾರಾಯಣ ದಶರೂಪಾ ಬಾ | ಚಾರುಚರಿತಾ ಪ್ರತಾಪ ಬಾ | ಶೌರಿ ಮುರಾರಿಯೆ ನಿಟಿಲ ಕಸ್ತೂರಿಯ ಲೇಪಾ ಬಾ || ನಿತ್ಯ ಸಲ್ಲಾಪಾ ಬಾ ನಮ್ಮ ಸಮೀಪ ಬಾ ಹಸೆಯಾ ಜಗುಲಿಗೆ 5 ವಾಸುದೇವ ಮುಕುಂದಾ ಬಾ | ಸಾಸಿರನಾಮ ಗೋವಿಂದಾ ಬಾ | ಕೇಶವ ಪುರುಷೋತ್ತಮ ನರಸಿಂಹ ಉಪೇಂದ್ರ ಬಾ || ಗೋಪಿಕಂದಾ ಬಾ | ಬಹುಬಲ ವೃಂದಾ ಬಾ | ಅತಿಜವದಿಂದಾ ಬಾ ಹಸೆಯಾ ಜಗುಲಿಗೆ 6 ಪರತತ್ವದಿ ಅತಿ ಚಿಂತಾ ಬಾ | ಪರಬೊಮ್ಮನೆ ಅತಿ ಶಾಂತಾ ಬಾ | ಪರಮಾತ್ಮನೆ ಪರಿಪೂರ್ಣ ವಿಭೂತಿವಂತಾ ಬಾ || ಅಖಿಳ ವೇದಾಂತಾ ಬಾ | ರುಕ್ಮಿಣಿಕಾಂತಾ ಬಾ | ಸದ್ಗುಣವಂತಾ ಬಾ ಹಸೆಯಾ ಜಗುಲಿಗೆ7 ತ್ರಿದಶಗುಣನುತ ವಿಲಾಸಾ ಬಾ | ಮಾಧವ ಶ್ರೀಧರನೆ ಸುನಾಸಾ ಬಾ || ಸಿರಿಮಂದಹಾಸಾ ಬಾ | ಭಕುತ ಉಲ್ಲಾಸಾ ಬಾ | ಶ್ರೀ ಶ್ರೀನಿವಾಸಾ ಬಾ ಹಸೆಯಾ ಜಗುಲಿಗೆ8 ಕೃಷ್ಣವೇಣಿಯ ಪಡೆದವನೆ ಬಾ | ರಥ ಹೊಡೆದವನೆ ಬಾ | ಕೃಷ್ಣೆಯ ಕಷ್ಟವ ನಷ್ಟ ಮಾಡಿದ ಕೃಷ್ಣಾ ಬಾ || ಯದುಕುಲ ಶ್ರೇಷ್ಠ ಬಾ | ಸತತ ಸಂತುಷ್ಟ ಬಾ | ಉಡುಪಿಯ ಕೃಷ್ಣ ಬಾ ಹಸೆಯಾ ಜಗುಲಿಗೆ 9 ಎಲ್ಲರೊಳಗೆ ವ್ಯಾಪಕನೆ ಬಾ ಬಲ್ಲಿದ ದೊರೆಗಳ ಅರಸನೆ ಬಾ | ನಾ ಎಲ್ಲಿ ನೋಡಲು ಪ್ರತಿಗಾಣೆ ನಿನಗೆ ಸಿರಿನಲ್ಲಾ ಬಾ || ಅಪ್ರತಿಮಲ್ಲ ಬಾ ಭಕ್ತವತ್ಸಲಾ ಬಾ | ವಿಜಯವಿಠ್ಠಲ ಬಾ ಹಸೆಯ ಜಗುಲಿಗೆ10
--------------
ವಿಜಯದಾಸ
ಸ್ಮರಿಸು ಸಂತತ ಹರಿಯನು ಮನವೇ ಪ ಸ್ಮರಿಸು ಸಂತತ ಹರಿಯ ಕರುಣಾಳುಗಳ ದೊರೆಯ ಸರಸಿಯೊಳಗಂದು ಕರಿಯ ನರನ ಸಂಗರದೊಳಗೆ ಕಾಯ್ದು ದೊರೆಯ ಜಗದೀಶ ಅ.ಪ. ಪರ ಸೌಖ್ಯ ದಾನಿಗಳರಸನೆಂದು ಸಾನುರಾಗದಿ ನಂಬಿದ ಜನಕೆ ಸುರ ಮೋದ ಸಲಿಸುವ ಶ್ರೀಮ ಪತಿ ಸಾಮ ಗಾನ ಲೋಲನ ಪ್ರಸಾದಾ ಪಾದಾ 1 ಎಲ್ಲೆಲ್ಲಿ ನೋಡೆ ಮತ್ತಲ್ಲಲ್ಲಿ ನೆಲೆಸಿಹನು ಬಲ್ಲಿದನು ಭಾಗ್ಯವಂತ ನಂಬಿದವರಿ ಗಲ್ಲದೆ ಒಲಿಯ ಭ್ರಾಂತಾ ದುಷ್ಟ ಜನ ರೊಲ್ಲ ನಿಶ್ಚಯ ಮಹಂತಾರೊಡೆಯ ಕೈ ವಲ್ಯದಾಯಕನ ಇಂಥಾ ಪಂಥಾ 2 ಅಣುವಿನೊಳಗಣುವಹನು ಘನಕೆ ಘನತರನಹನು ಅಣು ಮಹದ್ವಿಲಕ್ಷಣಾ ಕಲ್ಯಾಣ ಗುಣಜ್ಞಾನ ಘನಲಕ್ಷಣಾ ಸಂಪೂರ್ಣ ಮನ ಮುಟ್ಟಿ ಕರೆದಾಕ್ಷಣಾ ಬಂದೊದಗಿ ಕುಣಿವ ಲಕ್ಷ್ಮೀ ವಕ್ಷನಾ ಅನಪೇಕ್ಷನಾ 3 ಚೆಲುವರೊಳಗತಿ ಚೆಲುವ ಸುಲಭರೊಳಗತಿ ಸುಲಭ ಒಲಿವ ಸರಿ ಬಂದ ತೆರದಿ ಗುಣಕರ್ಮ ಕುಲಶೀಲಗಳನೆಣಿಸನರಿದೀ - ಭಕುತಿ ಫಲವ ಕೊಡೆ ತಾ ತವಕದಿ ಶಬರಿ ಎಂ ಶರಧಿ ಭರದೀ 4 ನೋಡಿ ನೋಡಿಸುತಿಹನು ಮಾಡಿ ಮಾಡಿಸುತಿಹನು ನೀಡಿ ನೀಡಿಸುವ ಪಿಡಿವಾ ಪಿಡಿಸುವನು ಬೇಡಿ ಬೇಡಿಸುವ ಬಡವರೊಡೆಯ ಕೊಂ ಡಾಡುವರ ಒಡನಾಡುವಾ ಈ ಮಹಿಮೆ ಗೀಡೆಂದು ಆವ ನುಡಿವಾ ಕೆಡುವಾ 5 ಕೋದರಾದ್ಯಮರ ವ್ರಾತಾ ಸಹಿತ ಮಹ ದಾದಿ ಪೃಥ್ವಂತ ಭೂತಾದೊಳು ನಿಲಿಸಿ ಕಾದುಕೊಂಡಿಹ ವಿಧಾತಾ ಅಂಡತ್ರಿದ ಶಾಧಿಪನ ಸೂತ ಸಚ್ಚರಿತಾ 6 ನಿಗಮ ಸಂಚಾರ ಶ್ರೀ ಜಗನ್ನಾಥವಿಠಲರೇಯಾ ತನ್ನ ಪಾ ದಗಳ ಧ್ಯಾನಿಪರ ನೋಯಾಗೊಡದಂತೆ ಮಾಯಾ ರಮಣ ನಮ್ಮ ನಗಲಿ ಸೈರಿಸನು ಪ್ರಿಯಾ ಧ್ಯೇಯಾ 7
--------------
ಜಗನ್ನಾಥದಾಸರು