ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೆಳಗಾಯಿತು ಏಳಿ ಪಾದ ನಳಿನ ಸೇವಕರು ಪ ಉದಯ ಕಾಲದೊಳೆದ್ದು ಹೃದಯ ನಿರ್ಮಲರಾಗಿ ಮಧುಸೂದನನ ಪಾಡಿ ಸ್ತುತಿಸುತಲಿ ಮುದದಿಂದ ಮಾಧವನ ವಿಧವಿಧದಿ ಪೂಜಿಸಿ ಪದುಮನಾಭನ ಪಾಡಿ ಪೊಗಳುವ ಜನರು 1 ರಂಗನ ಮಹಾದ್ವಾರದ ಮುಂದೆ ಕಾಣುವ ಗಜ ಸಾಲುಗಳ ನೋಡುತ ಬಂಗಾರ ಕೋಡುಳ್ಳ ಗೋವ್ಗಳಿಗೆರಗುತ್ತ ಅಂಗಜ ಜನಕನ ಪಾಡಿ ಪೊಗಳುವರು2 ರಂಭೆ ಊರ್ವಶಿ ಮೇನಕೆಯರೆಲ್ಲರು ಕೂಡಿ ಸಂಭ್ರಮದಲಿ ನಾಟ್ಯವಾಡುತಿರೆ ಗಂಗೆ ಗೋದಾವರಿ ಕೃಷ್ಣ ತುಂಗಭದ್ರೆ ಯಮುನೆಯರು ಇಂಬಿಲ್ಲದೆ ಪಾಡುತಿಹರೊ ಶ್ರೀ ಹರಿಯ 3 ಅತ್ರಿ ವಸಿಷ್ಠ ಗೌತಮ ಭಾರದ್ವಾಜರು ಅರ್ಥಿಯಲ್ಲಿ ಜಮದಗ್ನಿ ಋಷಿಗಳೆಲ್ಲ ಸ್ತೋತ್ರಮಾಡುತ ಪುರುಷೋತ್ತಮನನು ಪಾಡಿ ವಿಶ್ವಾಮಿತ್ರರು ಬಹು ಭಕ್ತಿಯಲಿ 4 ಸುತ್ತ ಸನಕಾದಿ ನಾರದರೆಲ್ಲ ಪಾಡಲು ನೃತ್ಯಗಾಯನದಿಂದ ಶ್ರೀ ಕೃಷ್ಣನ ಅರ್ತಿಯಿಂದ ಅಜಭವ ಸುರರೆಲ್ಲ ಸ್ತುತಿಸಲು ಸ್ತೋತ್ರಮಾಡಲು ದುರ್ಗದೇವಿಯರು5 ಗಜರಾಜ ಗೋಮಾತೆ ಮೊದಲಾದವರು ಬಂದು ಮಧುಸೂದನನ ನೋಡೆ ನಿಂತಿಹರು ಮದಗಜಗÀಮನೇರು ಮುದದಿ ಕಲಶ ಕನ್ನಡಿಗಳ ಪಿಡಿದು ನಿಂತಿಹರು ಬೇಗದಲಿ 6 ಮುತ್ತಿನ ಕದಗಳು ತೆಗೆವ ವ್ಯಾಳ್ಯದಲಿ ನೌಬತ್ತು ನಗಾರಿ ವಾದ್ಯಗಳಾಗಲು ಸಪರ್Àನ್ಹಾಸಿಕೆಯಲ್ಲಿ ಮಲಗಿರುವ ದೇವನ ಅರ್ಥಿವೈಭವ ನೋಡೊ ವೇಳೆ ಮೀರುವದು7 ಗಂಗಾಜನಕನ ಚರಣಂಗಳು ನೋಡುವ ಬಂಗಾರ ಕಿರುಗಂಟೆಗಳ ನಡುವನು ನೋಡುವ ರಂಗು ಕೇಸರಿಯ ಪೀತಾಂಬರ ನೋಡುವ ಶೃಂಗಾರ ವೈಜಯಂತಿಯ ನೋಡುವ 8 ವಕ್ಷ ಸ್ಥಳದಲ್ಲಿ ಶ್ರೀ ಲಕ್ಷ್ಮಿಯ ನೋಡುವ ಹಸ್ತದ ಆಭರಣಂಗಳ ನೋಡುವ ಮುತ್ತಿನ ಭುಜ ಕೀರ್ತಿ ರತ್ನದ್ಹಾರಗಳಿಂದ ಒಪ್ಪುವ ಉರದಿ ಶ್ರೀವತ್ಸನ ಸ್ತುತಿಸೆ 9 ಕೋಟಿ ಸೂರ್ಯರ ಕಾಂತಿ ಸೋಲಿಪ ನಗುಮುಖ ಲಲಾಟದಿ ಕಸ್ತುರಿ ತಿಲಕ ಒಪ್ಪಿರಲು ಮಾಟದ ಕರ್ಣಕುಂಡಲಗಳು ಹೊಳೆಯುತ್ತ ನೋಟದಿ ಜಗವ ಮೋಹಿಪ ದೇವನನು ನೋಡೆ10 ಅಂದದ ಮುಗುಳು ನಗೆಯು ದಂತ ಪಂಙÉ್ತಯು ಪಾದ ಕದಪುಗಳಂದವು ಇಂದ್ರ ನೀಲದಮಣಿ ಖಚಿತ ಕಿರೀಟದ ಮಂದಹಾಸದ ನಗೆÀಮುಖ ನೋಡುವ 11 ಕಡೆಗಣ್ಣ ನೋಟದಿ ಜಗವ ಸೃಷ್ಟಿಪದೇವ ಖಗವಾಹನನು ಸಂರಕ್ಷಿಪ ಲೋಕವ ಅಗಣಿತ ಮಹಿಮ ಅತಿಶಯದಿ ಲಯವ ಮಾಳ್ಪ ಸುಗುಣ ಸುಂದರನ ಗುಣ ಪೊಗಳುವ ಜನರು12 ನಿಖಿಳ ವ್ಯಾಪಕ ಕೃಷ್ಣ ಶುಕಮುನಿ ವಂದಿತ ದಿವ್ಯ ಚರಣನ ರುಕುಮಿಣಿ ಅರಸನ ಭಕುತರ ಪೋಷನ ಸಖ್ಯದಿಂದ ಪ್ರಿಯನ ನೋಡುವ ಸುಜನರು13 ಅನಿರುದ್ಧ ದೇವ ಶ್ರೀ ಪ್ರದ್ಯುಮ್ನ ಮೂರ್ತಿಯ ಸಂಕರುಷಣ ವಾಸುದೇವೇಶನ ನವನೀತ ಚೋರನ ನಾರಾಯಣನ ನಾಮ ಸ್ಮರಿಸುವ ಸುಜನರು 14 ಕವಿಜನ ಪ್ರಿಯನ ಕಮನೀಯ ರೂಪನ ಕಮಲನಾಭವಿಠ್ಠಲನ ಪಾಡುವ ಕಮಲಸಖನ ಸೋಲಿಸುವ ಮುಖಕಾಂತಿಯಕಮಲಾಕ್ಷಿಯರಸನ ಪೊಗಳುವ ಸುಜನರು15
--------------
ನಿಡಗುರುಕಿ ಜೀವೂಬಾಯಿ
ಮುರುಳಿಯ ನೂದಿದನಾಗ ಹರಿ ವಿಧವಿಧರಾಗದೊಳೀಗ ಪ ತುರುಗಳ ಕಾಯುತ ತರಳರ ಒಡಗೂಡಿ ಸುರಮುನಿವಂದಿತ ಸರಸಿಜನಾಭನು ಅ.ಪ ಚಂದದ ಪಾಡಗರುಳಿಯು ಕಾ- ಲಂದುಗೆ ಕಿರುಗೆಜ್ಜೆ ಧ್ವನಿಯು ಹಿಂಡುಗೋವ್ಗಳ ವೃಂದದಿ ನಲಿಯುತ ಮಂದರೋದ್ಧರ ಗೋವಿಂದ ಮುಕುಂದನು1 ಉಟ್ಟ ಪೀತಾಂಬರ ಹೊಳೆಯೆ ನಡು ಕಟ್ಟಿದ ಚಲ್ಲಣ ಹೊಳೆಯೆ ಪರಮೇಷ್ಟಿ ಪಿತನು ತನ್ನ ಪುಟ್ಟ ಕರದಲಿ ಉತ್ತಮನಾದದ 2 ವಿಧವಿಧಹಾರಗಳಿಂದ ರನ್ನ ಪದಕದ ಮುತ್ತುಗಳಿಂದ ಹೃದಯದಿ ಶ್ರೀ ಭೂ ಸಹಿತದಿ ಮೆರೆಯಲು ಪದುಮನಾಭ ಶ್ರೀ ಚಲ್ವ ಮದನಗೋಪಾಲನು 3 ಕೋಟಿಸೂರ್ಯರಂದದಲಿ ಬಹು ಮಾಟದ ಮುಖಕಾಂತಿಯಲಿ ನೋಟದಿ ಜಗವನೆ ಮೋಹವಗೊಳಿಪ ಕಿರೀಟಿಯ ಪೊರೆದ ವೈರಾಟನು ಹರುಷದಿ 4 ಕರ್ಣದಿ ಬಾವುಲಿ ಹೊಳಪು ನವ- ರನ್ನ ಕಿರೀಟದ ಬೆಳಕು ಕನ್ನಡಿಯಂದದಿ ಕದುಪಿನ ಝಳಪು ಮೋ- ಹನ್ನ ಮಾಲೆನಿಟ್ಟ ಸೊಗಸಿನ ವಲಪು 5 ಮುಖದಲಿ ಮುಂಗುರುಳೊಲಿಯೆ ಪ್ರಿಯ ಸಖಿಯರು ಹರುಷದಿ ನಲಿಯೆ ಅಕಳಂಕ ಮಹಿಮನು ಗುಪಿತದಿ ಗೆಳೆಯರ ಸುಖವ ಪಡಿಸುತಲಿ ಸಖ್ಯದಿಂದ ಪ್ರಿಯನು 6 ತುರು ವೃಂದದಲಿ ಗೋ- ವಿಂದನು ಕುಣಿಕುಣಿಯುತಲಿ ಅಂಬರದಲಿ ದೇವದುಂದುಭಿ ಮೊಳಗಲು ಕಂಬು ಕಂಧರ ಹರಿ ಸಂಭ್ರಮ ಸೂಸುತ 7 ವಾಸವ ವಂದಿತ ಹರಿಯೆ ಸರ್ವೇಶ ಕೃಪಾಕರ ದೊರೆಯೆ ವಾಸುದೇವ ಸರ್ವೇಶನೆ ಭಕುತರ ಸಾಸಿರನಾಮದಿ ತೋಷಪಡಿಸುತಲಿ 8 ಪಾಹಿ ಪಾಹಿ ಶ್ರೀಶ ನಮೋ ಪಾಹಿ ಪಾಹಿ ಬ್ರಹ್ಮೇಶ ಪಾಹಿ ಪಾಹಿ ಪರಿಪಾಲಿಸು ನಮ್ಮನುಪಾಹಿ ಕಮಲನಾಭವಿಠ್ಠಲ ದಯಾನಿಧೆ 9
--------------
ನಿಡಗುರುಕಿ ಜೀವೂಬಾಯಿ
ನಕ್ಕರಮ್ಮ ಕೆಲದೆಯರುಸಖ್ಯದಿಂದ ಕೈ ಹೊಯ್ದು ಪ.ಚಿಕ್ಕ ಸುಭದ್ರೆ ಬರೆಸಿದ ಚಿತ್ರಕ್ಕೆಅಕ್ಕಜಬಟ್ಟಾರವರುಭಾಳಅಪಶೌರಿಕೃಷ್ಣನರಸಿಯರು ಗೌರಿಯ ಕಂಡರುತೋರುತಿರೆ ಬರೆಸಿದ ಚಿತ್ರ ನೀರೆ ನೀನು ವರ್ಣಿಸಲೆಂದು 1ನಾರಿ ಬರೆಸಿದ ಗೊಂಬೆನೋಡೆ ನೀರೊಳು ಹರಿದಾಡತಾವೆಮಾರಿಸಣ್ಣದು ಮಾಡಿ ಭಾಳೆ ಭಾರಪೊತ್ತು ಭೋರ್ಯಾಡುತಾವೆ2ನಲ್ಲೆನೆಲವ ಕೆದರೋದೊಂದು ಹಲ್ಲು ತೆರೆದು ಬೇಡೋದೊಂದುಕಲ್ಲು ಮನದಿಕೊಡಲಿ ಎತ್ತಿ ನಿಲ್ಲಗೊಡದೆ ಜನನಿಯ 3ಮಡದಿಯ ಒಲ್ಲದ್ದೆÉೂಂದು ಕಿಡಿಗೇಡಿ ಪುರುಷನೊಂದುಕಡುಬತ್ತಲೆಯಾದದ್ದೊಂದು ಹಿಡಿದೇಜಿ ಏರೋದೊಂದು 4ವೀರತನವೆಲ್ಲನೀಗಿನಾರಿರೂಪ ಆದದ್ದೊಂದುಆ ರಾಮೇಶನ ಹಾಡಿಪಾಡಿ ಸಾರಿ ಸಾರಿ ಹೊಗಳೋದೊಂದು 5
--------------
ಗಲಗಲಿಅವ್ವನವರು