ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅವನೆವೆ ಶರಣಾ ಪ ಗುರುಗರಡಿಯ ಮನಿಯೊಳು ಬೆರೆದು | ಗುರುದಾಸರ ಸಂಗವ ಬಲಿದು | ಅರಿತಾವಿನಾ ಅಲ್ಲಿಯ ಕಳೆಗಳ ತಿಳಿದು 1 ಹರಿದಾಡುವ ಚಂಚಲ ನೀಗಿ | ಗುರುಸೇವೆಯಲಿ ತತ್ಪರನಾಗಿ | ಕರುಣವ ಬೀರ್ವನು ಅರಿಸಖರೊಳಗಾಗಿ2 ಆರಿಗೆ ಹೊಲ್ಲೆಯ ತಾ ನುಡಿಯಾ | ಆರಿಂದು ನಿಷ್ಟುರ ಪಡಿಯಾ | ಧರಿಯೊಳು ಸನ್ಮತ ಮಾರ್ಗದಿ ತಾ ನಡಿಯಾ3 ದೋರಗಡುದೆ ಬಲ್ಲವಿಕೆಯನು | ಪರರವಗುಣವನು ಅರಿಸನು | ನೀರು ಹಾಲಿನ ಸಖ್ಯಕ ಪರಿಲಿಹನು4 ತನುಧನ ಮದದೊಳು ಬೆರಿತಿರದೇ ಘನದೆಚ್ಚರಿಕೆಯ ಮರೆದಿರದೇ ನೆನೆವನು ಗುರುಮಹಿಪತಿಸ್ವಾಮಿಯ ಬಿಡದೇ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪುಟ್ಟಿಸಬೇಡವೊ ದೇವ - ಎಂದಿಗು ಇಂಥ-|ಕಷ್ಟಪಟ್ಟು ತಿರುಗುವ ಪಾಪಿ ಜೀವನವ ಪನರರ ಸ್ತುತಿಸಿ ನಾಲಗೆ ಬರಡು ಮಾಡಿಕೊಂಡು |ದರಪೋಷಣೆಗಾಗಿ ಅವರಿವರೆನದೆ ||ಧರೆಯೊಳು ಲಜ್ಜೆ - ಮಾನಗಳೆಲ್ಲವೀಡಾಡಿ |ಪರರ ಪೀಡಿಸಿ ತಿಂಬ ಪಾಪೀ ಜೀವನವ 1ಎಂಟುಗೇಣು ಶರೀರವ ಒಂದು ಗೇಣು ಮಾಡಿಕೊಂಡು|ಪಂಟಿಸುತ್ತ ಮೆಲ್ಲಮೆಲ್ಲನೆ ಪೋಗಿ ||ಗಂಟಲಸೆರೆಗಳುಬ್ಬಿ ಕೇಳುವ ಸಂಕಟ ವೈ-|ಕುಂಠಪತಿ ನೀನೆ ಬಲ್ಲೆ ಕಪಟನಾಟಕನೆ 2ಲೆಕ್ಕದಲಿ ನೀ ಮೊದಲು ಮಾಡಿದಷ್ಟಲ್ಲದೆ |ಸಖ್ಯಕೆವೆಗ್ಗಳಕೊಡುವರುಂಟೆ ||ಕಕ್ಕುಲತೆಪಟ್ಟರಿಲ್ಲ ಕರುಣಾಳು ನಿನ್ನ ಮೊರೆ |ಹೊಕ್ಕೆ ಎನ್ನನು ಕಾಯೊ ಪುರಂದರವಿಠಲ 3
--------------
ಪುರಂದರದಾಸರು