ಎಲ್ಲಿ ಕಲಿತೆಯೋ ಇಂಥಾ ಜಾಲೆಗಳನು ಆಲಲ್ಲೆಗಾರತಿಯ ಕೂಡಾಡಿ ಬಂತದಕೇನು ಪ
ಅವಳ ಕುರುಳಿವಳ ಮುಗುಳ್ನಗೆಯನೆ ಬಯಸುವುದುಇವಳ ನಯನಗಳವಳ ಮುದ್ದು ಮೊಗವಾಅವಳಕ್ಷಿ ಇವಳ ತೋಳ್ಗಳನೆಂದು ನಿನ್ನ ಸಖಿವಿವರಿಸಿ ಬರೆದುದ ನೀನೋಡಿದುದ ಸಖಿ ಪೇಳ್ದ 1
ತರುಣಿ ಹಾರವನು ಮತ್ತೋರ್ವಳುಂಗುರವನುಸರ್ವಾಭರಣವ ಧರಿಸಿದಳೋರ್ವಳುಭರದಿ ಮೂವರೊಳಗಾರನು ಕಳುಹಲೆಂದು ಸಖಿಬರೆಯಲದ ನೀ ನೋಡಿಕೊಂಡುದನೆ ಸಖಿ ಪೇಳ್ದ2
ಇನ್ನಾದರೆಯು ಪರಸತಿಯರ ಬೇಟವ ಬಿಟ್ಟುನಿನ್ನ ನಂಬಿದಳೆಂದು ಮನಕೆ ತಂದುಎನ್ನ ಕರದೊಳಗೆ ಕರವಿಟ್ಟು ಮನ್ನಿಸೋ ಕೆಳದಿಪನ್ನಗಾಭರಣ ಶ್ರೀ ರಾಮೇಶಲಿಂಗ 3