ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕನಸು ಕಂಡೆನು ಕೇಳೇ ಪ್ರಾಣ ಸಖೀ ಒಳ್ಳೆ ಪ ಕನಸು ಕಂಡೆನು ಕೇಳು ಘನತರ ಸುಖದೊಳೂ ಮನದೊಳಗನುದಿನ ನೆನೆಸೇ ಸಖಿಅ.ಪ ಎಳೆಯ ಚಂದ್ರನ ಚೆಲ್ವ ಪೊಳೆವ ಬೆಳಕಿನೊಳು ಝಳಿಪಾ ಚೆಂದುಟಿಯಂ ತಿಳಿವೇ ಸಖಿ 1 ವಾಸವಾರ್ಚಿತ ಹರಿದಾಸ ತುಲಸಿರಾಮಾ ದೇಶಿಕನಾದಾನು ತಾನಹುದೇ ಸಖಿ ಅಸ್ಮದ್ದೇಶಿಕನಾದಾನು 2 ಯಾತರ ಸುಖ ಬರಿ ಮಾತಿನೊಳಿಗೆ ಜಾಣೆ ಪ್ರಿತಿಯಿಲ್ಲದೆಲೇ ತಾಮಾತರಮಳಿವುದೇನೇ 3 ಬರಿಯ ಮಾತಿನೊಳೆನ್ನಾ ಬೆರಗು ಮಾಡಲಿಬೇಡಾ ಸುರತಕೇಳಿಗೆ ಬಂದೂ ಸರಸವನಾಡೆಲೆ 4 ವಾಸವನುತ ಹರಿ ದಾಸತುಲಸಿರಾಮಾ ಆಸೆಯ ತೋರಿಯೀಪರಿಯೋಳ್ ಮೋಸಗೈವುದು ಸರಿಯೆ 5
--------------
ಚನ್ನಪಟ್ಟಣದ ಅಹೋಬಲದಾಸರು
ನಾರೆ ಸಖಿ ಪ. ಪರಮಪುರುಷನಿವ ಕೇಳೆ ಸಖಿಅ.ಪ. ಕೆಂದಾವರೆಯಾ ಕರೆದೊಳು ಕೊಳಲಾ ನಂದದೊಳೂದುವನಾರೆ ಸಖಿ ಇವ ಚಂದ್ರವಂಶೋದ್ಭವ ಗುಣಸಾಂದ್ರ ಶ್ರೀ ಕೃಷ್ಣಾ ನಂದನ ಕಂದನಿವ ಕೇಳೆ ಸಖಿ1 ಕಂಗೊಳಿಸುವ ಬೆಳದಿಂಗಳ ಸೊಬಗಿಲಿ ಶ್ರೀಂಗಾರ ಪುರುಷನಾರೆ ಸಖಿ ಇವ ಮಂಗಳ ಮೂರುತಿ ಜನಂಗಳಿಗೊಡೆಯ ರಂಗನಾಥನಿವ ಕೇಳೆ ಸಖಿ 2 ಕೊರಳೊಳು ಧರಿಸಿಹ ವರ ತುಳಸಿಯ ಸರ ವರ ಕೌಸ್ತುಭಧರನಾರೆ ಸಖಿ ಇವ ಕರೆದಾದರಿಶಿ ಭಕ್ತರ ಸಲಹುವ ವರದ ಶ್ರೀ ಶ್ರೀನಿವಾಸ ಕೇಳೆ ಸಖಿ 3
--------------
ಸರಸ್ವತಿ ಬಾಯಿ