ಆಳ್ವಾರಾಚಾರ್ಯಸ್ತುತಿಗಳು
1. ಶ್ರೀ ಆಂಜನೇಯ ಸ್ತುತಿಗಳು
155
ನಮೋಸ್ತು ಹನುಮಾನ್ ನಮೋಸ್ತು ಹನುಮಾನ್
ನಮೋಸ್ತು ಹನುಮಾನ್ ನಮೋ ನಮೋ ಪ
ನಮೋಸ್ತು ಧೃತಿಮಾನ್ ನಮೋಸ್ತು ಧೃತಿಮಾನ್
ನಮೋಸ್ತು ಧೃತಿಮಾನ್ ನಮೋ ನಮೋ ಅ.ಪ
ನಮೋಸ್ತು ಶ್ರೀಮಾನ್ ನಮೋಸ್ತು ಧೀಮಾನ್
ನಮೋಸ್ತು ಮರುತಾತ್ಮಜ ಹನುಮಾನ್
ನಮೋಸ್ತು ಬಲವಾನ್ ನಮೋಸ್ತು ವೀರ್ಯವಾನ್
ನಮೋಸ್ತು ಪಂಚಾನನ ರೂಪಾ 1
ನಮೋ ಸಮೀರಾಂಜನಾಕುಮಾರಾ
ನಮೋ ದಿವಾಕರ ಭಯಂಕರಾ ವಿಧಿ
ವರಪ್ರಸಾದಿತ ನಮೋ ನಮೋ 2
ನಮೋ ನಮೋ ವಾನರೇಂದ್ರ ಸಚಿವಾ ನಮೋ ಜಿತೇಂದ್ರಿಯ ಗದಾಧರಾ
ಸನ್ನುತ ನಮೋಸ್ತು ಸಕಲಕಲಾಧರ 3
ವಸುಂಧರಾಪ್ರಿಯ ತನೂಭವಾನ್ಯೇ
ವಸುಗಣೋತ್ಸುಕಾ ಶುಭದಾಯಕಾ
ಹಸನ್ಮುಖಾ ಶ್ರೀರಘೋತ್ತಮ ಪ್ರಿಯಾ
ಯ [ಸಖ] ಖಗೇಂದ್ರಸಮ ಕಪಿನಾಯಕಾ 4
ಜನಕಸುತಾ ಸುದರ್ಶನ ಹರ್ಷಿತ ವನಭಂಗಕರಾಕರಣಧೀರಾ
ಲಂಕಾನಗರ ಭಯಂಕರಾ 5
ಸೀತಾರಾಮಾನಂದ ವರ್ಧಕಾ ಲಕ್ಷ್ಮಣ ಪ್ರತಾಪವಾನ್
ದೂತಕಾರ್ಯ ವಿಜಯೋತ್ಸುಕ ವಾನರ ಪತಿಸಂಪೂಜ್ಯ ಪ್ರದೀಪ್ತವಾನ್ 6
ರಾಮಾಲಿಂಗಿತ ದಿವ್ಯಶರೀರಾ ರಾವಣದರ್ಪ ವಿನಾಶಕರಾ
ಭೀಮಪರಾಕ್ರಮ ಸಂಜೀವನಧರ ದಾನವತಿಮಿರ ವಿಭಾಕರ 7
ಗಂಭೀರಶರಧಿ ವಿಲಂಘನಧೀರಾ ಮೈನಾಕಾರ್ಚಿತ ಪರಮೋದಾರಾ
ವಿಭೀಷಣ ಪ್ರಿಯ ಸಖಾಭಿವಂದಿತ ರಘುಪತಿಸೇವಾ ಧುರಂಧರಾ 8
ತಾರಕ ಮಂತ್ರೋಪಾಸಕ ಹನುಮಾನ್ ಶೂರಭವಿಷ್ಯ ಚತುರ್ಮುಖಾ
ಧೀರೋದಾತ್ತ ಕೃಪಾಕರ ಮಾಂಗಿರಿರಂಗ ನೀಕೇತನ ಬಹಿರ್ಮುಖ 9