ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತತ್ವನಿರೂಪಣೆ ಆಟವಾಡುವ ಕೂಸು ನಾನು | ಕೃಷ್ಣ ಕಾಟಬಡಿಸುವೆ ನಿನ್ನ ಸಾಧನವ ನೀಡೊ ಪ. ಗುರುಗಳು ತಂದು ನಿನಗೊಪ್ಪಿಸಿದರೆಲೊ ದೇವ ಸರಿಯ ಸಖನೆಂದು ಅನುಗಾಲವೂ ಸಿರಿಯರಸ ಕೇಳಿನ್ನು ಹಿರಿಯನೆ ನೀನಹುದೊ ಕಿರಿಯತನದಿಂದ ನಾ ಆಟವಾಡುವೆನೊ 1 ಹೃದಯವೆಂಬೋ ಪುಟ್ಟ ಮನೆಯ ಕಟ್ಟಿ ಅಲ್ಲಿ ಮುದದಿಂದ ಅಷ್ಟದಳ ಪದುಮ ರಚಿಸಿ ಒದಗಿ ಬರುತಿಹ ದುಷ್ಟ ಅರಿಗಳನೆ ನುಗ್ಗೊತ್ತಿ ಪದುಮನಾಭನೆ ನಿನ್ನ ಜೊತೆಯವರೊಡನೆ2 ಅಂಬರ ಮಧ್ಯದಲಿ ಬಿಂಬವೆನ್ನುವ ದಿವ್ಯ ಬೊಂಬೆಯನೆ ಇಟ್ಟು ಸಂಭ್ರಮದಿ ಶೃಂಗರಿಸಿ ಹಾಡಿ ಪಾಡಿ ಕುಣಿದು ಆಂಬ್ರಣಿನುತ ನಿನ್ನ ನೋಡಿ ದಣಿಯುವೆನೊ 3 ಪುಂಡರೀಕಾಕ್ಷ ನಿನ್ನ ಕೊಂಡಾÀಡುವೊ ಬಹಳ ತಿಂಡಿಯನೆ ನೀಡೆನಗೆ ಅನುಗಾಲವೂ ಭಂಡು ಮಾಡುವರೊ ಬರಿಕೈಲಿದ್ದರೆ ಸಖರು ಕಂಡು ಕಂಡೂ ನೀನು ಸಮ್ಮನಿರಬೇಡೊ 4 ಎಷ್ಟು ಜನ ಸ್ನೇಹಿತರೊ ಈ ಮನೆಯೊಳೆಲೆ ದೇವ ಪುಟ್ಟನಾಗಿರುವೆ ನಾನೆಲ್ಲರಿಗೆ ಇನ್ನು ಕೊಟ್ಟರೆ ಸಲಕರಣೆ ಆಟವಾಡುವೆ ಅಳದೆ ಶ್ರೇಷ್ಠ ಶ್ರೀ ಗೋಪಾಲಕೃಷ್ಣವಿಠ್ಠಲನೆ 5
--------------
ಅಂಬಾಬಾಯಿ
ನಿನ್ನೊಳೇನ ಬೇಡಿಕೊಂಬೆನೋ ನಾ ಸನ್ನುತಾಂಗ ಪ ನಿನ್ನ ಪಾದವನ್ನು ಭಜಿಪ ಮನದ ಹೊರತು ಅ.ಪ ಮನೆಯು ಬೇಡ ಮಠವು ಬೇಡ ಧನವು ಬೇಡ ಕನಕ ಬೇಡ ಮನದ ಶುದ್ಧಿಯಿಂದ ನಿನ್ನ ನೆನೆವ ಮನದ ಭಾವ ಹೊರತು1 ಸತಿಯು ಸುತರು ಗತಿಯು ಮತಿಯು ಹಿತರು ಸಖರು ನೀನೇ ಎಂಬ ಮತವನಾಂತು ನಿನ್ನ ಪೂಜೆ ವ್ರತವು ಸಾಕು ಎನ್ನದೇ 2 ಸಿಂಧು ಯಮುನೆ ಕೃಷ್ಣೆ ತುಂಗಭದ್ರೆ ತಪತಿ ಕಪಿಲೆ ಮಂಗಳ ಕಾವೇರಿ [ಹೇವiವತಿಯ] ಮಾಂಗಿರೀಶ ನೀನೆ ಎನ್ನದೆ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಭಿಕ್ಷುಕನ ನಿಜ ಸುಖವು ಲಕ್ಷಕಗದೆಲ್ಲಿಹುದು | ಮೋಕ್ಷದಾ ಮಾರ್ಗವು ಅವಗಿಲ್ಲವು ಪ ಅಕ್ಷಯ ಧನವುಂಟು | ಕುಕ್ಷಿಯೊಳಗುಂಟು ವಾ ಭಿಕ್ಷಾನ್ನವೂ | ಶಿಕ್ಷೆ ಮಾಡಲು ಉಂಟು | ದೀಕ್ಷೆ ಕೊಡಲೂ ಉಂಟು | ರಕ್ಷಿಸುವದುಂಟು ವಾ ಸದ್ಭಕ್ತರಾ1 ಆನಂದ ಧನಿಯುಂಟು | ಸ್ವಾನಂದ ಸುಖವುಂಟು |ಧ್ಯಾನವೇ ಉಂಟು ಶ್ರೀಸದ್ಗುರುವಿನ | ಮೌನದಾ ಮನೆಯುಂಟು | ಜ್ಞಾನದಾ ಪ್ರಭು ಉಂಟು | ಮನ್ನಣೀಯುಂಟು ಸಾಧು ಸಜ್ಜನರ 2 ತಿತೀಕ್ಷೆ ಸೊಸೆಯುಂಟು | ಭಕ್ತಿಭಾವನು ಉಂಟು | ಕೀರ್ತಿ ಬರಲುಂಟು ಈ ತ್ರೈಲೋಕ್ಯದಿ 3 ಶಮದಮಾ ಸಖರುಂಟು | ಪ್ರೇಮ ದಾಸಿಯು ಉಂಟು | ಹಮ್ಮುಹಂಕಾರವೆಂಬಳಿಯರುಂಟು | ನಾಮದಾ ಬಲವುಂಟು | ನಮನ ಸರ್ವರಿಗುಂಟು | ಚಿನ್ಮಯಾನಂದವೈಕ್ಯದಲುಂಟು 4 ಭಿಕ್ಷೆ ಬೇಡಲುಂಟು 5
--------------
ಭೀಮಾಶಂಕರ
ಸತಿಯಿಲ್ಲಸುತರಿಲ್ಲ ಬಂದು ಬಾಂಧವರಿಲ್ಲ ನುತ ಕೇಶವನಲ್ಲದೆ ಸದ್ಗತಿ ಎನಗಿಲ್ಲ ಪ ಹೆರರನಾಶ್ರಯಿಸಿ ಬದುಕಬೇಕಲ್ಲ ನರರನನುಸರಿಸಿ ಬಡವಾದೆನಲ್ಲ ಇರುವ ನಾಲ್ಕು ದಿನದ ಬರಿದೆ ಸುಖಕ್ಕಾಗಿ ನರನಿಗೆ ನೀಚನಿಗೆ ಈ ಸ್ಥಿತಿ ಒದಗಿತಲ್ಲ 1 ಹರಿನಿನ್ನ ಭಜಿಸದೆ ಬಲು ಬಾಧೆಯಾಗಿದೆ ಪರಿಪರಿಯ ನೋವನ್ನು ನೀಗುವವರಾರಿಲ್ಲ ಸಿರಿಸಂಪತ್ತಿರುವರೆಗೆ ಸತಿಸುತರೆಲ್ಲ ಕರೆದರೂ ಬರರಲ್ಲ ಬಾಂಧವರು ಸ್ನೇಹಿತರು 2 ಸುಖದಲಿರುವಾಗ ಮನ್ನಿಪರೋ ಎಲ್ಲ ಅಖಿಲಗೋತ್ರಜರು ನೆರೆಹೊರೆಯವರು ಸಖರು ಯಾರಿಲ್ಲ ಸಾವು ಬಂದೆಳೆವಾಗ ಅಖಂಡ ಒಡೆಯ ಜಾಜಿಪುರೀಶ ಕಾಯಬೇಕಯ್ಯ 3
--------------
ನಾರಾಯಣಶರ್ಮರು