ಲಿಂಗಾ ಅಂಗಜಹ - ಮಂಗಳ | ಗಂಗಾಧರ ಕಾಯೊತುಂಗಾ ಘರಣ್ಯ ಅನಳಾ ಪ
ತಿಂಗಳ ಧರ ಹರ | ಅಂಗಜ ಪಿತ ಸಖಮಂಗಳಾಂಗ ಕೃ | ಪಾಂಗ ದಯಾಳೊಅ.ಪ.
ಭವ | ಭೀಮ ಮಹಾಘನಕೋಮಲಾಂಗಿ ತವ | ವಾಮಾಂಗನೆಗೆಆ ಮಹ ಮಂತ್ರವ | ರಾಮತಾರಕವನೇಮದಿ ಪೇಳ್ದ ಸು | ತ್ರಾಮ ವಂದಿತನೆ 1
ಭುಜಗ ಭೂಷಣನೆಸುಜನ ಸುರದ್ರುಮ | ಗಜವರದ ಪ್ರಿಯನಿಜಪತಿ ಪವನನ | ಭಜಿಸಿ ಬಹು ವಿಧದಿಅಜಗರ ಪದವಿಯ | ನಿಜವಾಗಿ ಪಡದೆ 2
ಭೂತೇಶ | ಭಸುಮ ಭೂಷವರ ವ್ಯೋಮಕೇಶ ಉಗ್ರೇಶ ||ಶರಣರ ತೋಷ | ವಿಶ್ವೇಶ | ಕಾಶಿ ಪುರೀಶಸರಿತ್ಕಪಿಲ ತಟದಿ ವಾಸ ||ವರ ಗೌರೀವರ | ಪರಮ ದಯಾನಿಧೆಚರಣಾಂಬುಜಗಳಿ | ಗೆರಗಿ ಬೇಡುವೆನೊಗುರು ಗೋವಿಂದ ವಿಠಲನ | ಚರಣ ನೀರೇರುಹನಿರುತ ಸ್ಮರಿಸುವಂಥ | ವರ ಮತಿ ಪಾಲಿಸು 3