ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವರದ ನರಹರಿ ವಿಠಲ | ಪೊರೆಯ ಬೇಕಿವಳ ಪ ಕರಿವರದ ಶ್ರೀ ಹರಿಯೆ | ಕರುಣಿ ನೀನೆಂದರಿತುಮೊರೆಯಿಡುವೆ ನಿನ್ನಡಿಗೆ | ಮರುತಾಂತರಾತ್ಮಾ ಅ.ಪ. ದಾಸದೀಕ್ಷೆಯಲಿ ಮಹ | ದಾಶೆಯನು ಉಳ್ಳವಳಲೇಸಾಗಿ ಕೈಪಿಡಿದು | ನೀ ಸಲಹ ಬೇಕೋವಾಸವಾನುಜ ದಾಸ | ವೇಷದಿಂ ಸ್ವಪ್ನದಲಿಸೂಸಿ ಸೂಚಿಸಿದ ಉಪ | ದೇಶವಿತ್ತಿಹೆನೋ 1 ಮಧ್ವಮತ ಪದ್ಧತಿಗ | ಳುದ್ಧರಿಸಿ ಇವಳಲ್ಲಿಶ್ರದ್ಧೆಯಿಂ ತವಪಾದ | ಪದ್ಮಗಳ ಭಜಿಸೇಶುದ್ಧ ತತ್ವ ಜ್ಞಾನ | ಸದ್ಭಕ್ತಿ ವೈರಾಗ್ಯಮಧ್ವಾಂತರಾತ್ಮ ಅನಿ | ರುದ್ಧ ಪಾಲಿಪುದೋ 2 ಪತಿಯ ಕೈಂಕರ್ಯವನು | ಹಿತದಿಂದ ಮಾಳ್ಪಂಥಮತಿಯ ನೀ ಕರುಣಿಸುತ | ಕೃತ ಕೃತ್ಯಳೆನಿಸೋಕ್ಷೀತಿಭಾರಹರಣ ಶ್ರೀ | ಪತಿಯೆ ನೀ ಒಲಿದಿವಳಅತುಳ ವಿಭವದಿ ಮೆರೆಸಿ | ಗತಿಪ್ರದನು ಆಗೋ 3 ಸಂತತದಿ ತವನಾಮ | ಚಿಂತಿಸುವ ಸೌಭಾಗ್ಯವಂತೆಯೆಂದೆನಿಸಿವಳ | ಕಾಂತೆಯ ಸಖನೇಅಂತರಾತ್ಮಕ ನೀನೆ | ಅಂತರಂಗದಿ ತೋರಿಸಂತಸವ ನೀಡಯ್ಯ | ಪಂಥಭಿಧ ಹರಿಯೇ 4 ಸರ್ವಜ್ಞ ಸರ್ವೇಶ | ಸರ್ವವ್ಯಾಪಕ ದೇವನಿರ್ವಿಕಾರನೆ ಹರಿಯೆ | ದುರ್ವಿ ಭಾವ್ಯಾಸರ್ವವಿಧ ಪರತಂತ್ರ | ದರ್ವಿ ಜೀವಿಯ ಕಾಯೋಸರ್ವಸುಂದರ ಗುರೂ ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು