ಶ್ರೀ ಮಹಾದೇವರು
ಅಂಬಿಕಾಪತಿ ಶಂಭು ರಕ್ಷಿಸೆನ್ನಶಂಬರಾರಿ ಹರನೆ ನಂಬಿದೆನೊ ನಿನ್ನ ಪ
ಭವ ಭ್ರಕುಟ ಭವಹರನೆ ನೀಎನ್ನಅವಗುಣಗಳೆಣಿಸದಿರು ಕವಿಗೇಯನೆ ||ಅವನಿಯೊಳು ಎನಗೀಗ ಸುವಿವೇಕಿಗಳ ಸಂಗಜವದಿ ಪಾಲಿಸು ಮುದದಿ ಜವನಾರಿ ಶಿವನೆ 1
ವಿನುತ ಇಳೆವರೂಥನೆ ನಿರುತತಲೆವಾಗಿ ಬೇಡುವೆನು ಸಲಹೆಂದು ನಾಎಲರುಣಿ ಭೂಷಣೆನೆ ಒಲಿದು ಪಾಲಿಸುದಯದಿಛಳಿಗಿರೀಶನ ಅಳಿಯ ನಳಿನಾರಿ ಧರನೆ 2
ಸಿರಿರಮಣ ಶಾಮಸುಂದರ ವಿಠಲ ಸಖನೆಮೊರೆ ಹೊಕ್ಕೆ ಮರೆಯದಿರು ಗರಗೊರಳನೆಕರುಣದಿಂದಲಿ ನಿನ್ನ ಚರಣ ಸೇವೆಯನಿತ್ತುಕರವಿಡಿದು ಕಾಪಾಡೊ ಕರಿಚರ್ಮಧರನೆ 3