ವೆಂಕಟೇಶ ವಿಠ್ಠಲನೆ ಉದ್ಧರಿಸೊ ಇವಳಾಪಂಕಜಾಸನ ವಂದ್ಯ ಪಂಕೇರು ಹಾಕ್ಷ ಪ
ಪತಿ ವಿಯೋಗದ ದುಃಖ | ಅತಿಯಾಗಿ ತವಪಾದಗತಿಗಾಗಿ ಗಿರಿಯೇರಿ | ತುತಿಸುತಿರೆ ನಿನ್ನಾಗತಿಗೋತ್ರ ತೈಜಸನೆ ಪತಿರೂಪ ನಿನ್ನನುಪತಿಕರಿಸ ನಿನ್ನ ಮೃತ ಹಸ್ತ ನೆತ್ತಿಲಿ ಇಟ್ಟೇ 1
ಇಂದಿವಳ ಪ್ರಾರ್ಥನೆಯ ಛಂದದಲಿ ಮನ್ನಿಸುತಅಂದು ನೀನಾಗಿತ್ತ | ನಂದದಂಕಿತವಾಇಂದು ಊರ್ಜಿತ ಪಡಿಸಿ | ವಂದಿಸಿಹೆ ತವಪಾದವೃಂದಾರ ಕೇಂದ್ರ ಗುರು ನಂದ ಮುನಿ ವಂದ್ಯಾ 2
ಪಕ್ಷಿವಾಹನ ದೇವ | ದಕ್ಷಾರಿ ಪ್ರಿಯ ಸಖನೆದೀಕ್ಷಿತಳ ದಾಸಪಥ | ಲಕ್ಷಿಸುತಲಿದನಾಈಕ್ಷಿಪುದು ಕರುಣಾಕ | ಟಾಕ್ಷದಲೆಂದನುತಅಕ್ಷಾರಿ ವಂದ್ಯ ಹರಿ ಪಾರ್ಥಿಸುವೆ ನಿನ್ನಾ 3
ದೇಶ ದೇಶದ ಜನರ | ಆಶೆಗಳ ಪೂರೈಪ ಕೇಶವನೆ ಶ್ರೀ ವೆಂಕಟೇಶಾಖ್ಯ ಹರಿಯೇ |ದಾಸಿಯಳ ಹೃದಯಾ | ಕಾಶದೊಳು ತೋರೆಂದುಲೇಸು ಭಿನ್ನಪ ಸಲಿಸೊ | ಮೇಶ ಮಧ್ವೇಶಾ4
ಊರ್ವಿಯೊಳು ನಿನ್ಹೊರತು ಕಾವರನು ನಾಕಾಣೇಸರ್ವೋತ್ತಮೋತ್ತಮನೆ | ಶರ್ವ ವಂದ್ಯಾದರ್ವಿ ಜೀವಿಯ ಕಾವ | ಹವಣೆ ನಿನ್ನದಲ್ಲೇನೊ ಗುರ್ವಂತರಾತ್ಮ ಗುರು | ಗೋವಿಂದಾ ವಿಠಲಾ 5