ಬಿಡದೆ ನಿಮ್ಮನು ಪೂಜಿಸುವ ದಾಸರಿಗೆಪ
ತಡೆಯದೆ ವೈಕುಂಠವಹುದು ಸೋಜಿಗವೆ ಅ.ಪ.
ಬಡತನವಾಗೆ ಬಾಲತ್ವದ ಸಖನೆಂದುಮಡದಿ ಪೋಗೆನ್ನೆ ಕುಚೇಲ ಬಂದುಪಿಡಿತುಂಬ ಅವಲಕ್ಕಿಯ ತಂದು ಕೊಡಲಾಗಕಡು ಮೆಚ್ಚಿ ಅವನಿಗೆ ಸೌಭಾಗ್ಯವನಿತ್ತೆ 1
ಕುಡುತೆ ಪಾಲ್ಕುಡಿದು ಪೊಡವಿಯನು ಮೆಟ್ಟಿ ಪಾಪಿಷ್ಠನನು ಕೆಡಹಿದೆಬಡವರಾಧಾರಿಯೆಂಬ ಬಿರುದನು ಪಡೆದೆ 2
ಕಡಲಶಯನನೆ ಕುಬುಜೆ ತಂದ ಗಂಧಕೆ ಮೆಚ್ಚಿಒಡನೆ ಅವಳನು ಸುರೂಪಿಯ ಮಾಡಿದೆಸಡಗರದಿ ಅನವರತ ಬಿಡದೆ ಪೂಜಿಸುವಂಥದೃಢಭಕ್ತಗೇನುಂಟು ಏನಿಲ್ಲ ಸಿರಿಕೃಷ್ಣ 3