(32ನೇ ವರ್ಷದ ವರ್ಧಂತಿ)
ಶ್ರೀಶ ಆಶಾಪಾಶದಿಂದಲಿ ಘಾಸಿಯಾದೆ ಬರಿದೆ
ವಾಸವಾರ್ಜಿತ ಪಾದಪಂಕಜ ದಾಸಪೋಷಣ ಭೂಷಣಾಚ್ಯುತ ಪ.
ಮತ್ತೆರಡು ಮೂವತ್ತು ವರುಷಗಳುತ್ತಮ ಕೃತ್ಯದಲಿ
ಸತ್ಯ ಶೌಚಾಚಾರ ಭಕ್ತಿಗಳಿತ್ತು ಕೃಪಾರಸದಿ
ಭೃತ್ಯನನು ಪೊರೆದಿತ್ತ ಮೋಹದ
ಕತ್ತಲೆಯ ವಶಕಿತ್ತು ಬಿಡುವುದೇ ಶ್ರೀಶ 1
ನಿನ್ನ ಚರಣಾನನ್ಯ ಶರಣರ ಮುನ್ನ ಪೊರೆದ ತೆರದಿ
ಇನ್ನು ಪೊರೆವುದಕೇನುಪೇಕ್ಷ ಪ್ರ-
ಪನ್ನ ಪಾಲಯದಿ ಚಿನ್ಮಯಿನಂದೈಕ ಭರಿತ ಮ-
ಭವ ಮಾಧವ 2
ಕೂರ್ಮ ವರಾಹ ನರಹರಿ ವಾಮನ ಭಾರ್ಗವನೆ
ರಾಮಕೃಷ್ಣ ಜನಾದಿ ಮೋಹನೆ ಕಾಮಗಾಶ್ವ ಚರನೆ
ರಾಮ ವಿಧುರಿತ ಪಾಪಚಯ ಕಮ-
ಲಾ ಮನೋಹರ ಸುಂದರಾನನ 3
ಕಾಲ ಕರ್ಮವಿದೂರ ಯಮುನಾಕೂಲ ಕೇಳೀಲೋಲಾ
ಮಂದ ಮರಾಳಗಮನ ಶೀಲಾ
ನೀಲ ಮೇಘ ನಿಭಾಂಗ ಪಂಕಜ
ಮಾಲಯದುಕುಲಬಾಲ ಪಾಲಯ 4
ನೀರಜಾಸನ ನಿಮ್ನನಾಭ ಸುರಾರಿವನ ಕುಠಾರಾ
ಜಾರ ಚೋರ
ವಾರಿಜಾಸನ ವಂದ್ಯ ಕರುಣಾ
ಪೂರ ಸುರಪರಿವಾರ ಪಾಲಯ 5
ತಂದೆ ತಾಯಿ ಗುರು ಬಂಧು ಸೋದರನಂದನ ಸಖನೆಂದು
ಮುಂದೆ ಭವಭಯದಿಂದ ನಿನ್ನನು ಹೊಂದಿದೆ ನಾ ಬಂದು
ಹಿಂದೆ ಮಾಡಿದ ಕುಂದನೆಣಿಸದೆ
ಇಂದು ಕರಪಿಡಿ ಎಂದು ಬಯಸುವೆ 6
ವಿನುತ ಚರಣಾ
ಏಸು ಪೇಳುವುದಿನ್ನು ಎನ್ನನು ಪೋಷಿಸು ಬಹು ಕರುಣಾ
ಶೇಷಗಿರಿ ನಿಲಯಾಕುವರದ ಕೃ-
ಪಾಶ್ರಯನೆ ತವದಾಸ ಪಾಲಿಸು 7