ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾರಾಯಣ ಎನ್ನಿರೊ ನರಹರಿ ನಾರಾಯಣ ಎನ್ನಿರೊ ಪ. ನಾರದ ವಂದಿತ ನಗೆಮೊಗ ಚನ್ನಿಗ ಅ.ಪ. ಆದಿ ಪ್ರಹ್ಲಾದನ ಮೋದದಿ ಪೊರೆದನ ಸಾಧಿಸಿ ಅಂತ್ಯದಿ ಅಜಮಿಳನಂತೆ 1 ಕರುಣವ ಬೀರುತ ಕರೆದು ಮಾರುತಿಯನ್ನು ಶರಣನ ಮಾಡಿದ ನಿರುತ ಶ್ರೀರಾಮನ 2 ಮುದ್ದು ಭೀಮಾರ್ಜುನರಲ್ಲಿದ್ದು ರಣದೊಳಾಗ ತಿದ್ದಿ ತಾ ಹೃದಯದೊಳಗಿದ್ದ ಶ್ರೀ ಕೃಷ್ಣರನ್ನ 3 ಮಧ್ವಮುನಿಯೊಳಗಿದ್ದ ಮನ ಮಧ್ವಮತವ ಗೆದ್ದ ಮುದ್ದು ಮಧ್ವಪತಿಯ ನೀವು 4 ಅಖಿಳಾಂಡನಾಯಕ ಸಖನಾದ ಪಾಂಡವರಿಗೆ ನಿಖಿಳಲೋಕದ ಪ್ರಿಯ ಭಕ್ತರ ಸಖನಾಗುವ ಶ್ರೀ ಶ್ರೀನಿವಾಸನೆಂದು 5
--------------
ಸರಸ್ವತಿ ಬಾಯಿ