ಜಯದೇವ ಜಯದೇವ ಜಯ ಲಂಬೋದರ |
ಜಯ ಶಂಭು ಸತಿಗತಿ ಪ್ರಿಯ ಸುಕುಮಾರ ಪ
ಜಯತು ಜಯತೆಂಬೆ ನಿನ್ನಯ ಪದವನಾಶ್ರಯಿಸಿ |
ಜಯತು ಪಾಲಿಸೋಯೆನ್ನ ಮನದಿಷ್ಟ ಸಲಿಸಿ ಅ.ಪ.
ಸುರರ ಪೂಜೆಯಗೊಂಡು ಸಂತುಷ್ಟಿಗೊಳದೆ |
ನರರ ಭಕ್ತಿಗೆ ಮೆಚ್ಚಿ ಧರೆಗೆ ನೀನಿಳಿದೆ ||
ಪರಿಪರಿ ಭಕ್ಷ್ಯ ಪಾಯಸ ಕಜ್ಜಾಯಗಳ|
ವರಶುಭ ದಿನ ಚೌತಿಗುಂಬೆ ಲೇಸುಗಳ 1
ತ್ರಿಭುವನದೊಳು ಸರ್ವರಿಂದ ಸೇವೆಯನು |
ವಿಭವದಿ ಕೈಗೊಳ್ಳುತ್ತೊರೆದ ಶುಭವನು ||
ಅಭಯವನಿತ್ತು ರಕ್ಷಿಸುವೆ ಭಕ್ತರನು |
ಇಭಮುಖ ಗಣಪ ಪಾಲಿಸೊ ಭಾಗ್ಯಗಳನು 2
ಪಾದ ನೆನೆವೆ ಮನ್ಮನದಿ |
ಘನ ದುರಿತವ ದೂರಪಡಿಸು ನೀ ಮುದದಿ ||
ಚಿನುಮಯ ಮೂರ್ತಿಯ ಪದವ ಧ್ಯಾನಿಸುವ |
ಮನಕೆ ಸುಜ್ಞಾನ ಮತಿಯ ಪಾಲಿಸಯ್ಯ 3
ದಾಸರಿಗೊಡೆಯ ಗಣೇಶ್ವರ ನಿನ್ನ |
ಲೇಸಿನೊಳ್ ಭಜಿಸಿ ಕೇಳುವೆ ಗುಣರನ್ನ |
ದಾಸನೆಂದೆನಿಸಿ ಲೋಕದಿ ರಂಜಿಸೆನ್ನ |
ದೋಷವ ತ್ಯಜಿಸನುದಿನ ಸಲಹೆನ್ನ 4
ಸಕಲ ಸುಜ್ಞಾನ ಕವಿತೆಗಳ ಮುದದಿ |
ಸಖನಾಗುತೆನ್ನ ನೀ ಪೊರೆಯಯ್ಯ ದಯದಿ ||
ಭಕುತ ವತ್ಸಲ ಶ್ರೀನಿವಾಸನ ಪ್ರಿಯ ನೀ |
ಸುಕುಮಾರ ಕುಡುಮದೊಡೆಯ ಗಜವದನ 5