ಶರಧಿ ಗಂ
ಭೀರ ದಯಾಸಾರ
ವಾರಿಜಾಕ್ಷ ಮುರಹರ ಸಖನಾಗಿಹ
ಚಾರುಮಹಿಮ ನಿಟಿಲಾಂಬಕ ಪರಶಿವ ಪ
ಸಿಂಧು ಮಥನದೊಳಗೆ ಕೈಲಾಸ
ದಿಂದ ಬಂದನಿಳೆಗೆ
ನಂದಿವಾಹನ ಗರಳವನೆಲ್ಲ ಭುಂಜಿಸಿ
ಮಾರ 1
ವ್ಯೋಮಕೇಶ ದೇವಾ ಸುಜನರ
ಸ್ತೋಮವನು ಕಾವಾ
ಕಾಮಿತಾರ್ಥ ವರಗಳನಿತ್ತು ಸಲಹುವ
ಸೋಮಶೇಖರ ಕರ್ಪೂರಧಲಾಂಗಾ 2
ಸುರನರೋರಗ ಪಾಲಾ ಸಜ್ಜನ
ಪೊರೆವ ಪುಣ್ಯಶೀಲಾ
ಗುರುವಿಮಲಾನಂದ ಭರಿತ ಕುಶಸ್ಥಳ
ಪುರನಿವಾಸ ಶ್ರೀ ಮಹಾಂಗಿರೀಶ ಮಹಾರುದ್ರ 3