ರಾಮರಾಮ ರಾಮರಾಮ ರಘುಕುಲಾಬ್ಧಿಸೋಮ ಪ
ಪರವಾದಿಭೀಕರ ವೈಷ್ಣವಾಸ್ತ್ರಧಾರಿಯಸುರಧೂಮಾ ಅ.ಪ
ಕಾರ್ಯಕಾರಣಕಿಂತು ತ್ರಿಗುಣಧರಿಸಿಕೊಂಡದೇವಾ
ಆರ್ಯನಾಗಿ ಬಂದಿರುವೆಯೊ ನೀನೆ ಮಹಾನುಭಾವ ರಘುರಾಮ 1
ಪ್ರಣವರೂಪ ಪಕ್ಷಿಗಮನ ತ್ರಿಣೆಯ ಸಖನದ್ಯಾರೊ
ಫಣಿವಿಯಾಸನೆ ನೀನೆನ್ನ ಹೃದಯದಲ್ಲಿ ಕಂಡುಬಾರೊ 2
ವೀರರಾಜನಗರದೊಡೆಯ ಹರಿಯೆ ನಿನ್ನ ನೋಡುವೆ
ದಾರಿಗೈಸಿದ ಶ್ರೀಗುರುವು ತುಳಶಿಭಜನೆಯ ಮಾಡುವೆ 3