ದೇವರ ದಿವ್ಯಗುಣಗಳ ಪೊಗಳುವದು
ಜೀವರಿಗಿದುವೆ ಪ್ರಯೋಜನವು ಪ
ಭಾವದಿ ತೋರುವ ವಿಷಯಗಳೆಲ್ಲವು
ಭಕ್ತಿಯೊಳರಿತು ಸಮರ್ಪಿಸುತಂ ಅ.ಪ
ನಡೆವದು ನುಡಿವದು ಕೊಡುವದು ಬಿಡುವದು
ಒಡೆಯ ಹರಿಯ ಪ್ರೇರಣೆಯೆಂದು
ದೃಢಮನದಲಿ ತಿಳಿದಾವಾಗಲು ತಾ
ಮೃಢ ಸಖನಡಿ ಧ್ಯಾನಕೆ ತಂದು 1
ಅರಿಯದೆ ಪಾಮರರೊರಲುವ ಬೋಧೆಯ
ತರತರದಿ ತಿರಸ್ಕರಿಸುತಲೀ
ಭವ ಭಯಗಳನೀಡಾಡುತಲಿ 2
ಜನನ ಮರಣ ದೂರ ಪರಾತ್ಪರ ಪಾ-
ವನ ಚರಿತ್ರ ಭಾಸುರ ಗಾತ್ರಾ
ವನಜನಯನ ಗುರುರಾಮವಿಠಲ ಎಂ-
ದನುದಿನ ಭಜಿಸುವನೆ ಪವಿತ್ರ 3