ಜಯ ಜಯ ಜಯ ಮುನಿವರ್ಯ
ಜಯ ಮಧ್ವಶಾಸ್ತ್ರ ವ್ಯಾಖ್ಯಾನಾತಿಗೇಯ ಪ
ಮಂಗಲವೇಡೆಯೊಳುದುಭವಿಸುತ ಜಗ-
ನ್ಮಂಗಲಕರವಾದ ಟೀಕೆಯ ರಚಿಸಿ
ಮಂಗಲಮೂರುತಿ ರಾಮನ ಭಜಿಸುತಾ-
ನಂಗನ ಜಯಿಸಿದ ಮುನಿಕುಲ ತಿಲಕ 1
ವಿದ್ಯಾರಣ್ಯನೆಂಬ ಖಾಂಡವ ವನವನೆ
ಯಾದವೇಶನ ಸಖನಂತೆ ನೀ ದಹಿಸಿ
ಮಧ್ವಶಾಸ್ತ್ರವೆಂಬ ರತ್ನವ ಜನರಿಗೆ
ಸುಧೆಯಂತೆ ಕುಡಿಸಿದ ಯತಿವಂಶ ರತ್ನ 2
ಮಾಧ್ವಗ್ರಂಥವ ನೀನು ಬಂಧುವೆಂದೆಣಿಸುತ
ರಾಜೇಶ ಹಯಮುಖ ಶ್ರೀರಾಮಚಂದ್ರ
ಪಾಂದಾಂಬರುಹವನ್ನೆ ಬಿಡದೆ ಸೇವಿಸುತಲಿ
ವಾದೀಭಗಳಿಗೆ ಮೃಗೇಂದ್ರನಾಗಿರುವಿ 3