ಗೌರಿ ಗಜಮುಖನ ಮಾತೆ | ಗುಣಗಣ ಭರಿತೆ
ಶೌರಿ ಸಖನಂಗಸಂಗೀ ಸಂಪೂರ್ತೆ ಪ
ಶುಭ ತನು ವಾರಿಜನೇತ್ರಳೆ
ವೀರಸತಿಯೆ ದಯವಾರಿಧಿ ಪಾಲಿಸು ಅ.ಪ.
ತುಂಗ ಮಂಗಳೇ ದೇವಿ | ಕಲಿಗೆ ಭೈರವೀ
ರಂಗಾನ ನವವಿಧಿ ಭಕ್ತಿ ಸಂಗ ನೀಡುವಿ
ಹಿಂಗದೆ ಪೊರಿಯೆ ತಾಯೇ | ಭಕ್ತ ಸಂಜೀವೆ
ತಿಂಗಳ ಮುಖಿವರಗರಿವೆ | ನಮ್ಮ ಶಂಭುವೆ
ಭಂಗಬಟ್ಟೇನು ನುಂಗುವ ಭವದೊಳು
ಮಂಗಳ ಕರುಣಾಪಾಂಗದಿ ನೋಡೆನ್ನ
ಭವ ಭಯ ಗಂಗೆಯ ಧರನಂಘ್ರಿ-
ಭೃಂಗಳೆ ಬೋದಯಾಕಂಗಳೆ ಕರುಣಿಸು 1
ಇಂದ್ರಾದಿ ಸುರಗುರುವೆ | ದೇವ ತರುವೆ
ಪರಿ ನಿನ್ನ ಬೇಡುವೆ
ಕುಂದನೆಣಿಸದಲೆ ಶಿವ ಶಂಕರಿ ಕಾವೆ
ಸಂದೇಹ ಕಳಿ ವಿಭುವೆ | ವೀರಜತನುವೆ
ನೊಂದವನಾ ಮ್ಯಾಲ್ಹೊಂದಿಸು ಕರುಣವ
ಮಂದಸ್ಮಿತೆ ಮುಕುಂದನ ಮನದಲಿ
ವಂದಿಸು ಅನಿಮಿತ್ತ ಬಂಧುವೆ ರಕ್ಷಿಸು 2
ಕಸ್ತೂರಿ ಕುಂಕುಮ ಫಾಲೆ | ರನ್ನಾದ ಓಲೆ
ವಸ್ತುಗಳಿಟ್ಟ ಹಿಮವಂತನ ಬಾಲೆ
ಶಿಸ್ತಿನ ಶುಭ್ರಾಂಬರಧಾರೆ ವನಮಾಲೆ
ಮಸ್ತಕದ ಕಿರೀಟ ವದನೆ ತಾಂಬೂಲೆ
ಸಿರಿ ಹಸ್ತಗಳಿಟ್ಟೆನ್ನ
ದುಸ್ತರದ ಹಾದಿಗಳಸ್ತಮಮಾಳ್ಪುದು
ವಿಸ್ತರ ಮಹಿಮ ಜಯೇಶವಿಠಲ
ವಸ್ತುವ ನೀಡಮ್ಮ ಹಸ್ತಿಯ ಗಮನೆ 3