(ಭಕ್ತಿ ಎಂಬ ಸ್ತ್ರೀಯ ವರ್ಣನೆ)
ಸೇರಿರೊ ನವ ನಾರಿಕುಂಜರನನ್ನು
ಧೀರಲಕ್ಷ್ಮೀವರನು ಮಂಟಪವೇರಿ ಮುಂದಕೆ ಬರುವನು ಪ.
ಶ್ರವಣ ಕೀರ್ತನ ಸ್ಮರಣ ಸೇವನ ಪೂಜ ಪ್ರ-
ಣವ ದಾಸ್ಯ ಸಖತ್ವ ಸರ್ವವ ವಹಿಪ ನವವಿಧ ಭಕುತಿಯ1
ದೂರ ನಿಂತರೆ ತೋರದು ಸರಿಯಾಗಿ
ಸಾರಗೈಯಲು ಸಾಧನೆಗಳಿಂದಾರು ಮೂರಾಗಿರುವುದು 2
ಜೋಲುವಾ ಸೊಂಡಿಲೆಂಬುದೆ ಸುಜ್ಞಾನ
ಕಾಲುಗಳೆ ಪುರುಷಾರ್ಥವೆನಿಪವು ಬಾಲ ಸದ್ಗುಣಭಾವವು 3
ಭಕ್ತಿ ಭುಕ್ತಿಗಳೆರಡು ನೇತ್ರಗಳು ವಿ-
ರಕ್ತಿಯುದರವು ವಿಷ್ಣು ಗಾಥಾಸಕ್ತಿ ಸಕಲೇಂದ್ರಿಯಗಳು 4
ನಿತ್ಯ ನಿರ್ಮಲ ಚರಿತ ಲಕ್ಷ್ಮೀಶನ
ಭೃತ್ಯಪಾದ ರಜಸ್ಸಮೂಹವನೆತ್ತಿ ನಾಲ್ದೆಸೆ ಸುರಿವದು 5
ಹತ್ತಿರೆಂದಿಗು ಸೇರಲೀಯದು ದು-
ದುರಿತ ಕೂಪದಿ ಒತ್ತಿ ಕೆಡುಹುವ ವಹಿಲವು 6
ಛಲಕೆ ಮೆಚ್ಚುತ ನಲಿವುದು ಮನದಲಿ
ಚೆಲುವ ಶೇಷಗಿರೀಂದ್ರನಾಥನ ವಲಿಸಿ ಕೊಂಡಿಲ್ಲಿಳಿವುದು 7