ಸಕಲಸಾಧನವೆನಗೆ ಕೈಸೇರಿತುಮುಕುತಿಯ ಮಾತಿಗೆ ಬಾರದ ಧನವು ಪ.
ಸಂಸಾರದಲಿ ಜ್ಞಾನ ಸತಿಸುತರಲಿ ಭಕ್ತಿಕಂಸಾರಿಪೂಜೆಯಲಿ ವೈರಾಗ್ಯವುಸಂಶಯದ ಜನರಲ್ಲಿ ಸಖತನವ ಮಾಡುವೆನುಹಿಂಸೆಪಡಿಸುವೆನು ಜನಸಂಗ ಹರಿ ರಂಗ 1
ವಿಷಯಂಗಳಲಿ ಧ್ಯಾನ ಲೌಕಿಕದಲಿ ಮನನವಶವಲ್ಲದ ಕತೆಗಳಲ್ಲಿ ಮನವುಹಸನಾಗಿ ಎಣಿಸುವ ಹಣಹೊನ್ನಿನ ಜಪವುಬಿಸಿಲೊಳಗೆ ಚರಿಸುವುದದೆÉ ಮಹಾ ತಪವು 2
ಪೀಠ ಪೂಜೆಂಬುವುದು ಲಾಜಚೂರಣವಯ್ಯಮಾಟದ ಪಯೋಧರವೆ ಕಲಶಪೂಜೆಚೂಟಿಯಲಿ ಉದರದ ಯಾತ್ರೆಯೆ ಮಹಾಯಾತ್ರೆ ಬೂಟಕತನದಲಿ ಅನೃತವನು ಪೇಳ್ವುದೇ ಮಂತ್ರ3
ಹೆಂಡತಿಯ ಕೊಂಡೆಯ ಮಾತುಗಳೆ ಉಪದೇಶಚಂಡಕೋಪವೆಂಬೋದಗ್ನಿಹೋತ್ರಪಂಡಿತನೆನಿಸುವುದೆ ಕುವಿದ್ಯ ಪಠನೆಗಳುಕಂಡವರ ಕೂಡೆ ವಾದಿಸುವುದೆ ತರ್ಕವÀಯ್ಯ4
ಓದಿದೆನು ಎಲ್ಲಣ್ಣ ಕಲ್ಲಣ್ಣ ಎನುತಲಿಸ್ವಾಧ್ಯಾಯವು ಎನಗೆ ಪಗಡೆ ಪಂಜಿಸಾಧಿಸಿ ಈ ಪರಿಯ ಧನವನ್ನು ಕೂಡ್ಹಾಕಿಮೋದಿ ಹಯವದನ ನಾ ನಿನ್ನ ಮರೆತೆ 5