ಆಪದ್ಭಾಂಧವ ವಿಠಲ | ಕಾಪಾಡೊ ಇವಳಾ ಪ
ಶ್ರೀಪತಿ ಶೀರಂಗ ಸ | ಮೀಪಗನೆ ಹರಿಯೇ ಅ.ಪ.
ದುರಿತ ರಾಶಿಗಳಳಿದು | ಹರಿನಾಮ ಸುಧೆ ಸವಿಯೆವರಮಾರ್ಗ ತೋರಿ ಪೊರೆ | ಶ್ರೀದ ನರಹರಿಯೇ |ತರುಣಿಮಣಿ ಹರಿದಾಸ್ಯ | ನೆರೆಸುಕಾಂಕ್ಷಿಸಲಾಗಿವಿರಚಿಸಿಹೆ ಉಪದೇಶ | ಪರಿಪಾಲಿಸಿವಳಾ 1
ತಾರತಮ್ಯಾಂತರದಿ | ಹರಿಯ ಉತ್ಕರ್ಷತ್ವಸುರಸಾದಿ ಸುರರೆಲ್ಲ | ಹರಿದಾಸರೆಂಬಾ |ಎರಡು ಮೂರ್ಭೇದ ಸಹ | ವರ ಜಗದ ಸತ್ಯತೆಯಅರುಹಿ ಪಾಲಿಸು ಇವಳ | ಕರಿವರದ ಹರಿಯೇ2
ಸೀಮೆ ಮೀರಿದ ಮಹಿಮ | ಭೂಮ ಗುಣ ಸಂಪೂರ್ಣಕಾಮಾರಿ ಸಖಕೃಷ್ಣ | ಕಾಮಿತಾರ್ಥದನೇನೇಮ ನಿಷ್ಠೆಗಳಿತ್ತು | ಸಾಧನಗಳಳವಡಿಸಿಕಾಮಿನಿಯ ಪೊರೆಯೊ ಹರಿ ಸ್ವಾಮಿ ಭೂವರಹಾ 3
ಜಲಜಾಕ್ಷನಮಲ ಗುಣ | ತಿಳಿಯಲ್ಕೆ ಸಾಧನವುಕಲಿಯುಗದಿ ಸತ್ಸಂಗಾ | ಬಲ ಉಳ್ಳದೋಹಲವು ಮಾತೇಕೆ ನಿನ್ನ | ಮಲಗುಣ ನಾಮಗಳತಿಳಿಸಿ ಪೊರೆ ಇವಳನ್ನು | ಕಲಿಮಲಧ್ವಂಸೀ 4
ಪಾವ ಮಾನಿಯ ಪ್ರೀಯ ದೇವ ದೇವೋತ್ತಮನೆಭಾವುಕಳ ಪೊರೆಯಲ್ಕೆ | ತೀವ್ರ ಭಿನ್ನವಿಪೇಕಾವ ಕರುಣಾಳು ಗುರು | ಗೋವಿಂದ ವಿಠ್ಠಲನೆಈ ವಿಧದ ಭಿನ್ನಪವ | ನೀ ವೊಲಿದು ಸಲಿಸೋ5