ತಂದು ತೋರೆ ಮಂದಹಾಸನ | ಕಾಮಿನಿ |
ತಂದು ತೋರೆ ಮಂದಹಾಸ | ನಂದ ಕಂದ ಶ್ರೀಮುಕುಂದ |
ವಂದಿತಾಮರೇಂದ್ರ ವಂದ್ಯನ | ಕಾಮಿನಿ ಪ
ಉರವನಿತ್ತಗುರುಮೊಮ್ಮನುದರಲಿ ಬಂದ ಮಾತೆ ಮಗನ |
ಶರದ ಭರಕೆ ಫಣಿಲಿ ತಾಳ್ದಾನಾ | ಕಾಮಿನಿ 1
ಸರಳದಿಂದ ಪ್ರಾಣ ತೊರಿದನಾ | ಪ್ರೀತಿಯಾ |
ಸರಳಕಾದು ಅಳಿದನಯ್ಯನ | ಸರಳಗದೆಯ ಕೈಯ್ಯಲಿಂದ |
ಸರಳತ್ರಯನ ಕೊಲಿಸಿದಾತನ | ಕಾಮಿನಿ 2
ಶತಕಮೃಗನ ಭೋಜ್ಯವಾಹನ | ಸಖಉರಭಕಾಗಿ ನಿಲ್ಲದೇ |
ಅಖಿಲದೋಳಗೆನುಸಲುತಿಹನಾ | ರಾಶಿಯ |
ಪಕವನಳಿದನರಿಯಸುತನ | ರಕ್ಷಕಮಹೀಪತಿನಂದನ|
ಮುಖದಿ ತನ್ನ ಚರಿತೆನುಡಿಪನ ಕಾಮಿನಿ 3