ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೇಗನೆ ಬಾರೊ ಶ್ರೀ ಹರಿಯನೆ ತೊರೋ ಶ್ರೀ ಗುರುವೇ ದಯದಿ ಪ. ಬೇಗನೆ ಬಾರೊ ಯೊಗಿಗಳೊಡೆಯ ನಾಗಶಯನ ಪ್ರೀತ ತ್ವರಿತದಿ ಅ.ಪ. ಭಕ್ತರೆಲ್ಲರು ನಿಮ್ಮ ದಾರಿಯನೆ ನೋಡುತಾ- ಸಕ್ತಿಯಿಂದಿರುತಿಹರೊ ಮೋದ ಗುರುವೆ ನಿಮ್ಮ ಶಕ್ತಿಗೆ ಎದುರ್ಯಾರೊ ಧರೆಯೊಳು 1 ಕಾಣದೆ ಕಂಗಳು ಕಾತರಗೊಳ್ಳುತ ತ್ರಾಣಗೆಡುತಲಿಹವೊ ಪ್ರಾಣವ ರಕ್ಷಿಪ ಪ್ರಾಣಪತಿಯ ಪ್ರಿಯ ಕಾಣೆ ನಾನನ್ಯರನಾ ಜಗದೊಳು 2 ಪರಮಪ್ರಿಯರು ಎಂದು ಪರಮ ಬಿರುದು ಪೊಂದಿ ಪರಮಾತ್ಮನನು ಕಂಡು ಪರಮಾತ್ಮ ತತ್ವ ಪರಮಯೊಗ್ಯರಿಗರುಹಿ ದುರಿತ ತ್ವರಿತದಿ 3 ಕಮಲಾಕ್ಷನನು ಹೃತ್ಕಮಲದಲಿ ಕಾಂಬ ಕಮಲಾಪ್ತ ಅತಿ ಪ್ರೀತ ಕಮಲಸಂಭವಪಿತ ಕಮಲಾಕ್ಷ ಹರಿಯ ಹೃ ತ್ಕಮಲದಲಿ ತೋರೋ ಗುರುವರ 4 ಗೋಪಾಲಕೃಷ್ಣವಿಠ್ಠಲನ ಸೌಂದರ್ಯದ ರೂಪವೆನಗೆ ತೋರೊ ತಾಪವ ಹರಿಸುತ ಕಾಪಾಡಬೇಕೆಂದು ನಾ ಪ್ರಾರ್ಥಿಸುವೆ ಗುರುವೆ ತ್ವರಿತದಿ 5
--------------
ಅಂಬಾಬಾಯಿ
ಮಾಯಾ ಜಯಕೃತಿಗೆ ಮಂಗಳಂ ಶಾಂತಿ ಸ್ವರೂಪಳಿಗೆ ಮಂಗಳಂ ಭಕ್ತರ ಕಂಗಳಿಂದಲಿ ನೋಡಿ ರಂಗನ ಪಾದವ ತೋರ್ವಳಿಗೆ ಪ. ಮಂಗಳಂ ಜಯ ಮಂಗಳಂ ಅ.ಪ. ಅಲ್ಲಿ ವೈಕುಂಠದೊಳಗೆ ಇರಲು ಬಲ್ಲಿದ ಭೃಗು ಋಷಿ ತಾ ಬರಲು ವಲ್ಲಭನ ವಕ್ಷಸ್ಥಳ ಒದೆಯಲು ಹರಿ ಸೊಲ್ಲು ಕೇಳದೆ ಓಡಿ ಬಂದಳಿಗೆ 1 ಕೊಲ್ಲಾಪುರದಲಿ ನಿಂದಳಿಗೆ ಎಲ್ಲರಭೀಷ್ಟವ ಸಲಿಪಳಿಗೆ ಖುಲ್ಲರ ಮರ್ಧಿಪ ಹರಿಯ ವಕ್ಷಸ್ಥಳ ದಲ್ಲಿ ಸದಾ ನೆಲಸಿರ್ಪಳಿಗೆ 2 ಶ್ರೀ ಜಯದೇವಿಗೆ ಶ್ರೀ ಲಕ್ಷ್ಮಿಗೆ ಶ್ರೀ ರುಕ್ಮಿಣೀ ಸತ್ಯಭಾಮಳಿಗೆ ಶ್ರೀ ಪದ್ಮಾವತಿ ನಾಮಕ ನಾನಾರೂಪ ಗುಣಾನ್ವಿತೆಗೆ 3 ಮುಕ್ತಾಮುಕ್ತರಿಗೊಡೆಯಳಿಗೆ ಮುಕ್ತಿಯ ಭಕ್ತರಿಗೀವಳಿಗೆ ಮುಕ್ತಳೆನಿಸಿ ಮುಕ್ತಾಶ್ರಯನಿಗೆ ಆ- ಸಕ್ತಿಯಿಂದ ಸೇವೆ ಮಾಳ್ಪಳಿಗೆ 4 ಗೋಪಾಲಕೃಷ್ಣವಿಠ್ಠಲನ ಆಪಾದ ಮೌಳಿಯ ಗುಣಗಳನು ತಾ ಪರಿಪರಿಯಿಂದ ವರ್ಣಿಸುತ್ತಿದ್ದರು ಅಪಾರವಾಗಿಯೆ ಕಾಂಬಳಿಗೆ 5
--------------
ಅಂಬಾಬಾಯಿ