ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀಶಪದ ಕಮಲಕ್ಕೆ ಮಧುಪ | ನಿನ್ನದಾಸನೆಂದೆನಿಸುವುದು ಧನಪ | ಸಖ ಮ-ಹೇಶನ ಸುತ ಪೇಳ್ವೆ ಭಿನ್ನಪ | ನೀ ಪ್ರ-ಕಾಶಿಪುದು ಮನವಿ ವಿಘ್ನಪ 1 ಪತಿ ಕರುಣಿ ಶುಭಗಾತ್ರ | ಗ್ರಂಥಲೇಸೆನಿಸಿ ಲಿಖಿಸಿದೆ ಪವಿತ್ರ | ಮೂರ್ತಿಪಾಶಾಂಕುಶ ಪಾಣಿ ಸುಚರಿತ್ರ 2 ಸ್ವಾಂತ | ದಲ್ಲಿಅಭಯ ನೀ ತಿಳಿಸು ನಿಶ್ಚಿಂತ 3 ವಿಘ್ನಪನೆ ದುರ್ವಿಷಯದಲ್ಲಿ | ಬಹಳಮಗ್ನವಿಹ ಮನವ ಹರಿಯಲ್ಲಿ | ನಿರತಲಗ್ನ ಮಾಡಿಸು ತ್ವರ್ಯದಲ್ಲಿ | ಇನ್ನೂ ವಿಘ್ನಗಳಿಗಂಜಿಕೆಯು ಎಲ್ಲಿ ? | 4 ಧನಪ ವಿಶ್ವಕ್ಸೇನ ಯಮಳ | ಆ ಅ-ಶ್ವಿನೀಗಳ್ಗೆ ಸಮ ಕರಿಗೊರಳ | ಪುತ್ರನನುಜನೇ ಶೇಷ ಶತಗರುಗಳ | ರಲ್ಲಿಗುಣೋತ್ತಮನೆ ಕಾಯೊ ನಮ್ಮಗಳ | 5 ಬವರ | ದಲ್ಲಿಗೌರಿಪತಿ ವರದಿ ಉದ್ಧಟರ | ಆದಕ್ರೂರಿ ಜನ ಸಂಹಾರಿ ಶೂರ | 6 ಸೂತ್ರ ಅಪರೂಪ | ಖಳರದರ್ಪ ಭಂಜನನೆ ಶುಭರೂಪ | 7 ಶ್ರೀಶನತಿ ನಿರ್ಮಲವು ಎನಿಪ | ನಾಭಿದೇಶಗತನಾಗಿಹನೆ ಗಣಪ | ರಕ್ತವಾಸೆರಡು ಶೋಭಿತನೆ ಸುರಪ | ಮಿತ್ರಮೂಷಕಾ ವರವಹನ ರೂಪ | 8 ಶಂಕರಾತ್ಮಜ ದೈತ್ಯ ಜನಕೆ | ಅತಿ ಭ-ಯಂಕರ ಗತಿಯ ನೀಡಲ್ಕೇ | ನೀನುಸಂಕಟ ಚತುರ್ಥಿಗ ಎನೆಲ್ಕೆ | ಹಾಗೆಮಂಕು ಜನಾವೃತವು ಮೋಹಕ್ಕೆ 9 ಸಿದ್ಧಿ ವಿಧ್ಯಾಧರರು ಎಂಬ | ಗಣಾರಾಧ್ಯ ಪದಕಮಲ ನಿನದೆಂಬ | ಜನಕೆಸಿದ್ಧಿದಾಯಕ ವೇಗ ಎಂಬ | ಮಹಿಮಬುದ್ಧಿ ವಿದ್ಯೆಗಳ ಕೊಡು ತುಂಬ 10 ಭಕ್ತವರ ಭವ್ಯಾತ್ಮ ಪರಮ | ಶಾಸ್ತ್ರಸಕ್ತವಾಗಲಿ ಮನವು ಅಧಮ | ವಿಷಯಸಕ್ತಿರಹಿತನ ಮಾಡಿ ಪರಮ | ಶುದ್ಧಭಕ್ತನೆಂದೆನಿಸು ನಿಸ್ಸೀಮ | 11 ಶಕ್ರ ಪೂಜಿಸುತ ಗುರು ನಿನ್ನ ವೈರಿಶುಕ್ರ ಶಿಷ್ಯರ ಕೊಂದ ನಿನ್ನ | ಆ ಉ-ರುಕ್ರಮ ರಾಮ ಪೂಜಿಸೆನ್ನ | ತೋರ್ದವಕ್ರ ತುಂಡನೆ ಕರುಣವನ್ನ 12 ಕೌರವನು ಭಜಿಸದಲೆ ನಿನ್ನ | ಆಸಮೀರನ ಗದೆಯಲಿಂದಿನ್ನ | ಹತನುತಾರಕಾಂತಕನನುಜ ಯೆನ್ನೆ | ಧರ್ಮಪ್ರೇರಕನೆ ಸಂತೈಸು ಎನ್ನ 13 ಮೂಕರನ ವಾಗ್ಮಿಗಳ ಗೈವ | ಗುರು ಕೃ-ಪಾಕರನೆ ಕಾಮಗಳ ಕೊಡುವ | ಪರಮಲೇಖಕನೆ ಮನ್ಮನದಲಿರುವ | ಬಹುವ್ಯಾಕುಲವ ಪರಿಹರಿಸು ದೇವ | 14 ಸತ್ತೆ ವೃತ್ತಿಯು ಮತ್ತೆ ಪ್ರಮಿತಿ | ಜಗಕೆಇತ್ತು ತಾ ಸೃಷ್ಟ್ಯಷ್ಟಕತ್ರ್ರೀ | ಎನಿಪಚಿತ್ತಜ ಪಿತನ ದಿವ್ಯ ಸ್ಮøತಿ | ಇತ್ತುನಿತ್ಯ ನೀ ಪಾಲಿಪುದು ಸದ್ಗತಿ 15 ಪಂಚವಕ್ತ್ರನ ತನಯ ಕೇಳೊ | ಎನಗೆಪಂಚಭೇದದ ಜ್ಞಾನ ಪೇಳೊ | ಹರಿಯುವಾಂಛಿತ ಪ್ರದನ ದಿಟ ಆಳೊ | ಭವದಿವಂಚಿಸದೆ ಕಾಯೊ ಕೃಪಾಳೊ | 16 ಏನು ಬೇಡುವುದಿಲ್ಲ ನಿನ್ನ | ದುಷ್ಟಯೋನಿಗಳು ಬರಲಂಜೆ ಘನ್ನ | ಲಕುಮಿಪ್ರಾಣಪತಿ ತತ್ವರಿಂದಿನ್ನ | ಕಾರ್ಯತಾನೆಂಬ ಮತಿಯ ಕೊಡು ಮುನ್ನ 17 ಭಕ್ತ ಜನ ಕಲ್ಪ ತರುವೆನಿಪ | ಉಮೆಯಪುತ್ರ ಮಮ ಮಮತೆಯನು ಹರಿಪ | ದಾಯಹತ್ತಿಹುದು ನಿನ್ನಲ್ಲಿ ಗಣಪ | ಕಳೆಯೊಎತ್ತಿ ಕೈ ಮುಗಿವೆ ಭವರೂಪ 18 ಜಯ ಜಯವು ಎಂಬೆ ವಿಘ್ನೇಶ | ತಾಪತ್ರಯಗಳಿನು ನೀನೇ ವಿನಾಶ | ಗೈದುಭಯ ಶೋಕರಹಿತ ವಿದ್ಯೇಶ | ಜನ್ಮಾಮಯ ಮೃತಿ ಹರಿಸೊ ನಭಕೀಶ | 19 ನಮಿಸುವೆನೊ ಹೇರೊಡಲ ನಿನ್ನ | ಕರುಣಿಕಮಲಾಕ್ಷ ಹರಿನಾಮವನ್ನ | ನಿರುತವಿಮಲ ಮನದಿ ನುಡಿವಂತೆ ಎನ್ನ | ಮಾಡಿಕಮಲೇಶ ಪದ ತೋರೊ ಘನ್ನ20 ಎರಡು ನವ ಮೂರು ಪದಗಳನ್ನ | ಗೌರಿತರಳನಲಿ ಇರುವಂಥ ಪ್ರಾಣ | ಪತಿಯುಗುರು ಗೋವಿಂದ ವಿಠ್ಠಲನಾ | ಪದದಿಇರಿಸುವರ ಹರಿ ಪೊರೆವ ಅವರನ 21
--------------
ಗುರುಗೋವಿಂದವಿಠಲರು
ಹೃತ್ಪದ್ಮದೊಳಿದ್ದು ಹೃತ್ತಾಪಗಳ ಕಳೆಯೊ ಜೀ- ವತ್ಪಿತಾಮಹ ಜನಕನೇಪ ಮೃತ್ಪಿಂಡದಂತೆನ್ನ ಉತ್ಪತ್ತಿಗೆ ಕ- ಣ್ಣೆತ್ತಿ ನೋಡಲರಿಯಾ ಜೀಯಾ ಅ.ಪ ನಿತ್ಯ ನಿತ್ಯ ಜಗವೆಲ್ಲವು ನಿತ್ಯವು ನಿತ್ಯತ್ವವೆಲ್ಲ ಸರಿಯೇ ಏನಿದ್ದರೇನು ಅನಾದಿಕರ್ಮದ ಬವಣೆ ಬೆನ್ನಟ್ಟಿ ಬರುತಿರ್ಪುದ- ಜ್ಞಾನಾಂಧಕಾರದಿಂ ಧ್ಯಾನವನು ತಿಳಿಯದೇ ಕಾನನದೊಳಿಪ್ಪೆನೋ ಜ್ಞಾನಗಮ್ಯನೆಂದು ಸಾರುತಿದೆ ಶ್ರುತಿ ಶಾಸ್ತ್ರ ಜ್ಞಾನಗುರು ದೊರೆತಿಲ್ಲವೋ ಸಾನುರಾಗದಿ ನೀನೆ ಸಾಧನಕೆ ಕರುಣಿಸಿ ಧ್ಯಾನದಲಿ ಮನಸು ನಿಲಿಸೋ ಉಳಿಸೋ 1 ಬಂಧ ಮೋಕ್ಷಕೆ ಎಲ್ಲ ಮನವೆ ಕಾರಣವೆಂದು ಎಂದೆಂದಿಗು ಪೇಳುತಿಹರು ಸಿಂಧುಶಯನನೆ ಭವಬಂಧಮೋಚಕನೆಂದು ವಂದಿಸಿ ಪೊಗಳುವರೊ ಮಂದರೊದ್ಧರ ನಿನ್ನ ಮಂದಮತಿಯಿಂದಲಿ ವಂದಿಸಲು ನಾನರಿಯೆನೊ ಕಂದರ್ಪಜನಕ ನೀ ಮಂದಭಾಗ್ಯನ ಮನವ ನೋಯಿಸದೆ ನಿನ್ನ ಪದದಲ್ಲಿರಿಸೊ ಅಂದೆ ಎನ್ನಯ ಭವಬಂಧನಾಶವಾಗುವು- ದೊಂದೆ ನಿನ್ನನು ಬೇಡುವೆನೊ ಜೀಯ 2 ಜೀವರೆಲ್ಲರು ಗುಣತ್ರಯಾವರಣದಿಂದ ಕರ್ಮ- ಪ್ರವಹದೊಳಿಪ್ಪರೊ ಕವಿಸಿ ಮೋಹವ ನೀನು ಭವಕೆ ಕಾರಣವಹುದು ದೇವೇಶ ನಿನ್ನಾಟವೋ ಶ್ರವಣದಿಂದಲಿ ಭವಬಂಧಮೋಚಕನೆಂದು ತವ ಬಿರುದು ಸಾರುತಿದೇಕೋ ಭಾವ ಬಲ್ಲವರಾರೋ ಕಾವ ಕರುಣಿ ನೀನೆ ಭಾವಜನ ಪಿತನು ಅದೇ ಭವಪಾಶ ಬಿಡಿಸೆ ನಾ ಭಕುತಿಪಾಶದಿಂದ ಪಾದ ಬಿಗಿವೆನಯ್ಯ ಜೀಯ 3 ಸ್ವಾತಂತ್ರ್ಯವೆಲ್ಲಿಹುದು ಸ್ವಾಮಿತ್ವವೆಲ್ಲಿಹುದು ಅ- ಸ್ವತಂತ್ರನಾಗಿಪ್ಪೆನೊ ಕಾತುರದಿ ನಾ ಮಾಳ್ಪ ಕ್ರಿಯೆಗಳೆಲ್ಲವು ಎನ್ನ ಸ್ವಾತಂತ್ರ್ಯವೆಂದ್ಹೇಳುವೆ ನೀ ತಂತ್ರಿಯಾಗಿದ್ದೆನ್ನ ನಡೆಸುವುದನರಿಯೆ ಕು- ತಂತ್ರವನು ನಾ ಮಾಡುವೆ ಸ್ವಾ- ತಂತ್ರನು ನೀನು ಸೂತ್ರನಾಮಕ ದೇವ ಮಂತ್ರಿಯಾಗೀದೇವ ಯಂತ್ರ ನಡೆಸುವ ಎಂತಾದರಡಿಗಡಿಗೆ ಅತಂತ್ರನಾಗಿಹೆ ನಾನೇ ಭ್ರಾಂತಿಪರಿಹರಿಸಿ ಕಾಯೊ ಶೌರೇ 4 ಭಕ್ತಿ ಇಲ್ಲದೆ ನಿನ್ನ ಭಕ್ತನಾಗುವುದೆಂತೋ ಭುಕ್ತಮಾತ್ರನು ನಾನು ಮುಕ್ತರೊಡೆಯ ನೀನು ಯುಕ್ತಿತೋರಿಸು ಎನಗೆ ಭಕ್ತಾಪರಾಧಸಹಿಷ್ಣು ಶಕ್ತ ನೀನಹುದೊ ವೇದೋಕ್ತ ಮಹಿಮಾತೀತ ಸಕ್ತವಾಗಲಿ ನಿನ್ನ ಪದದಿ ಮನಸು ವ್ಯಕ್ತನಲ್ಲವೊ ಸರ್ವ ಸಾರಭೋಕ್ತನು ನೀನು ಭಕ್ತವತ್ಸಲ ಪುರುಷಸೂಕ್ತಮೇಯ ಅಪ್ರಮೇಯ ಯುಕ್ತಿಮಾತಲ್ಲಿದು ಭಕ್ತಿಪೂರ್ವಕ ನಿನ್ನ ಭಕ್ತ ಶ್ರೇಷ್ಠರ ಸೇವೆ ಕೊಟ್ಟು ರಕ್ಷಿಸೊ ದೇವಾ 5 ನಾದಕ್ಕೆ ಪರನಾಗಿ ವಾದಕ್ಕೆದೊರೆಯೇ ನೀ ವೇದವೇದಾಂತವೇದ್ಯ ಸಾಧನವು ಕಾಣೆ ಸಾಧನಶರೀರವಿದು ಸಾದರದಿ ಕರುಣಿಸಿದೆ ಅನಿರುದ್ಧದೇವ ಬಾಧಿಪುದು ಬಂಧಗಳು ಅನಾದಿಕರ್ಮದಿ ಬಂದು ನಾ ಅಧಮತಮಸಾಧನವನ್ನೆಸಗಿದೆ ನೀ ದಯಾಸಿಂಧು ಎಂದಡಿಗಡಿಗೆ ಬೇಡುವೆನು ಕೃದ್ಧನಾಗದೆ ಇನ್ನು ಉದ್ಧರಿಸು ತಂದೇ ಎಂದೇ 6 ಶಂಖಚಕ್ರಾಂಕಿತನೆ ಮಂಕುಬುದ್ಧಿಯ ಬಿಡಿಸೋ ಅಂಕಿತವೆನಗೆ ಇಲ್ಲ ಅಂಕೆ ಇಲ್ಲವೊ ನಿನ್ನ ನೆನೆಹುದಕೆ ಎಂದಿಗೂ ಶಂಕೆಯ ಪಡುವನಲ್ಲ ವೇಂಕಟಾದ್ರಿಯ ವಾಸ ಶ್ರೀ ವೇಂಕಟೇಶನು ಮಮಕುಲಸ್ವಾಮಿ ದೈವವೆಂದನುದಿನ ಸಂಕಟಾಗಾಮಿಗಳ ಕಂಟಕವ ಹರಿಸಿ ಪದ ಪಂಕಜದಿ ಮನವ ನಿಲ್ಲಿಸೋ ಬಿಂಕದ ಮಾತಲ್ಲ ಪಂಕಜದಳಾಯತಾಕ್ಷ ಅಕ- ಳಂಕಮಹಿಮ ಕಾಯೋ ಜೀಯಾ7
--------------
ಉರಗಾದ್ರಿವಾಸವಿಠಲದಾಸರು