ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂತು ಎನ್ನ ತಾರಿಸುವಿಯೋ ತಿಳಿಯದಿಂದಿಗೆ ಕಂತುಪಿತನೆ ಮುಕುತಿ ಮಾರ್ಗ ಹೊಂದುವೆನೆಂದಿಗೆ ಪ ಓದಿತತ್ವ ಶಾಸû್ರಗಳನು ಜನರಿಗ್ಹೇಳುವೆ ನಾನು ಮೇದನಿಯೊಳು ಬಲ್ಲವನೆಂಬ ಗರ್ವ ತಾಳುವೆ ಸಾಧು ಸಂತರ ನಡಿಯ ನುಡಿಯ ಮಹಿಮೆ ಕೇಳುವೆ ಮತ್ತೆ ಹಾದಿತಪ್ಪಿ ಕುಜನ ವೃತ್ತಿಯಲ್ಲಿ ಬಾಳುವೆ 1 ಸ್ವಾದ ಲಂಪಟ ದುರ್ವಿಷಯ ಬಿಡದ ಸಕ್ತನು ಕಪಟ ಕಲುಷ ಚಿತ್ತನು ಸಾಧಕಗುರು ಹಿರಿಯರ ಅನುಸರಿಸಿದ ಭಕ್ತರು ಸಾಧಿಪಕರ್ಮ ವೃತ್ತಗಳಲ್ಲಿ ಡಂಭಯುಕ್ತನು 2 ಒಂದು ಎರಡು ಹೇಳಲೇ ಎನ್ನತಪ್ಪವಾ ಹೃದಯ ಮಂದಿರ ಮೊಳಗಿಲ್ಲವಾಯಿತು ಜ್ಞಾನ ದೀಪವಾ ನೊಂದು ಬೆಂದು ತಾಪತ್ರಯದಿ ಸುಖದ ರೂಪವಾ ಬಗೆವೆ ನಿಂದು ಒಮ್ಮಿಗ್ಯಾರ ವಿಡಿಯೆ ಪಶ್ಚಾತ್ತಾಪವಾ 3 ಪತಿತಪಾವನ ದೀನೋದ್ಧರಣನೆಂಬ ಬಿರುದವಾ ಕ್ಷಿತಿಯೊಳಿನ್ನು ತಾಳಿದುದರ ಕೇಳು ಮಾಧವಾ ಮತಿವಿವೇಕದಿಂದೆ ಹಚ್ಚಿ ಭಕುತಿ ಸ್ವಾದವಾ ಗತಿಯ ಕೊಟ್ಟ ಕರಿಯೆ ನಾನು ನಿನ್ನ ಮರೆದವಾ 4 ನಿನ್ನ ಭಕ್ತರ ಮನಿಯ ನಾಯಿ ಯಂದು ಎನ್ನನು ಮುನ್ನಿನವರು ಉಂಡ ವೆಂಜಲ ಶೇಷವನ್ನನು ಇನ್ನು ಇಕ್ಕಿಸಿ ಸಲಹಬೇಕು ಮೂಢ ಚಿನ್ನನು ಘನ್ನ ಗುರು ಮಹಿಪತಿಸ್ವಾಮಿದಯ ಸಂಪನ್ನನು 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕಾಯಯ್ಯ ರಘುನಾಥ ಧೀನಜನೋದ್ದಾರಿ ಪ ಕೇವಲ ಪತಿತ ಪಾಮರ ನಾನು ಕೇವಲ ಪಾವನ ಮೂರುತಿ ನೀನು ಕೇವಲ ಘನ ಅಪರಾಧಿಯು ನಾನು ದೇವನೀ ಕರುಣಾ ಸಾಗರ 1 ಭಾವ ಭಕ್ತಿಯ ಕೀಲವ ನರಿಯೇ ವಿವೇಕ ಮತಿ ನೀ ನೀಡುವ ಧೊರೆಯೇ ಆವಾಗ ವಿಷಯಾ ಸಕ್ತನು ಹರಿಯೇ ಕಾದ ದೈವನು ನೀನೈ 2 ನತ ನಾದೇ ತರಳನ ಕುಂದಾಲಿಸದಿರು ತಂದೇ ಗುರು ಮಹಿಪತಿ ಪ್ರಭು ನಮೋಯಂದೇ ಶರಣಾಗತ ಸಹಕಾರೀ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕಾಯಯ್ಯ ರಘುರಾಮ ದೀನಜನೋದ್ದಾರಿ ರಘುರಾಮ ಧ್ರುವ ಕೈವಲ್ಯಾವನ ಮೂರುತಿ ನೀನು ಕೇವಲ ಘನ ಅಪರಾಧಿಯುನಾನು ದೇವನೆ ಕರುಣಾಸಾಗರ ನೀನು 1 ಭಾವ ಭಕುತಿಕೀಲವ ನಾನರಿಯೆ ವಿವೇಕಾಮೃತ ನೀಡುವ ದೊರೆಯೆ ಅವಾಗ ವಿಷಯಾಸಕ್ತನು ಹರಿಯೆ ಕಾವ ದೈವ ನೀನೆ ಶ್ರೀ ಹರಿಯೆ 2 ಚರಣವೆ ಗತಿಯೆಂದಾತನ ತಂದೆ ತರಳನ ಕುಂದನಾರಿಸದಿರು ತಂದೆ ತರಳ ಮಹಿಪತಿ ಪ್ರಭು ನಮೋ ಎಂದೆ ಶರಣ ರಕ್ಷಕ ನೀನಿಹುದೆಂದೆ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕೃಷ್ಣನಾಮಾಮೃತ ರುಚಿಕರವೆಲ್ಲವುಶ್ರೇಷ್ಠ ಭಕ್ತರಿಗಲ್ಲದೇದುಷ್ಟಮಾನವಮತಿಹೀನಗೆಪೇಳಲು ಇಷ್ಟವಾಗಲು ಬಲ್ಲುದೇ ಪಗುಡಶೈಲದಲಿ ಲಿಂಬೆ ಬೀಜ ಪ್ರತಿಷ್ಠಿಸೆಫಲವು ಮಧುರವಹುದೆ ಗುಡುಗುಮೋಡಕೆ ಮಯೂರವು ಕುಣಿದಂತೆಕುಕ್ಕುಟ ನೋಡಿ ಕುಣಿವುದೆ ಸುಡುವಗ್ನಿಯಲಿಬೀಜಬಿತ್ತಿ ನೀರೆರೆದರೇ ಗಿಡವಾಗಿ ಶೋಭಿಪುದೇಪೊಡವಿಯೊಳಗೆ ಲಕ್ಷ್ಮೀಯೊಡೆಯನಚರಿತೆಯ ಮೂಢಮಾನವಬಲ್ಲನೇ 1ವೀಣೆಯ ನುಡಿಸುತ್ತ ಗಾಯನ ಹಾಡಲುಕೋಣಗೆ ಹಿತವಹುದೆ ಸಾಣೆಕಲ್ಲನುಬಿಸಿನೀರಿನೊಳಿಟ್ಟರೆ ಮೇಣದಂತಾಗುವುದೇಜಾಣತನದಿ ವೇದ ಓದಿದ ಹೊಲೆಯನುಬ್ರಾಹ್ಮಣನೆನಿಸುವನೆ ಕ್ಷೋಣಿಯೊಳಗೆವಾಸುದೇವನ ಚರಿತೆಯ ಹೀನಮತಿಯು ಬಲ್ಲನೆ 2ಕೋಗಿಲೆ ಸಾಕಿದ ಕಾಗೆಯ ಮರಿ ತನ್ನ ರಾಗದಿಮೋಹಿಪುದೇ ನಾಗರಹಾವಿಗೆ ಹಾಲೆರೆದರೆನಿತ್ಯವಿಷವ ನೀಗಿಸಿಕೊಂಬುದೇ ಭೋಗದಾಸೆಯಸ್ತ್ರೀಗೆ ವಿಟನ ಮೇಲಲ್ಲದೇ ಯೋಗಿಯೊಳ್ಹಿತವಹುದೇ ಸಾಗರಶಯನ ಗೋವಿಂದನಮಹಿಮೆಯಭೋಗಾಸಕ್ತನು ಬಲ್ಲನೇ 3
--------------
ಗೋವಿಂದದಾಸ