ಭಜಿಸಿರೊ ಭವಭಂಜನ ಹರಿಯಾ
ರಜತ ಪೀಠ ಪುರದಿ ರಾಜಿಪ ದೊರೆಯಾ ಪ.
ಮುಷ್ಟಿ ಪೃಥುಕವನ್ನು ಕೊಟ್ಟ ಕುಚೇಲಗೆ
ಶ್ರೇಷ್ಠ ಭಾಗ್ಯವನಿತ್ತ ಸಿರಿವರನಾ
ಅಷ್ಟಮಠೀಯರು ಮುಟ್ಟಿ ಪೂಜಿಸುವಂಥ
ವಿಠಲನಿಂದ ಸರ್ವಾಭೀಷ್ಟವ ಪಡೆಯಿರಿ 1
ಯುಕ್ತಿಯನರಿಯದ ಭಕ್ತರಿಗಿಹಪರ
ಭುಕ್ತಿ ಮುಕ್ತಿದನೆಂಬ ಬಹು ಬಿರುದಾ
ವ್ಯಕ್ತ ಮಾಡುತ ಕಡು ರಿಕ್ತಜನರ ರಕ್ಷಾ
ಸಕ್ತನಾಗಿಹ ಭೈಷ್ಮೀನಕ್ತ ಮಾನಸನನ್ನು 2
ನಿತ್ಯ ಮಧ್ವ ಸರಸಿಯೊಳಗೆ ಮಿಂದು
ಉರಗ ಗಿರೀಶ ಸತ್ಯ
ವರನ ಮೂರ್ತಿಯ ಕಂಡು ಸುರವರ ಪ್ರಾರ್ಥನೆಯ
ವರ ಪ್ರಸಾದವನುಂಡು 3