ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶರಣು ಶ್ರೀದೇವದೇವಾದಿ ಸದ್ಗುರುನಾಥ ಶರಣು ಸುರಮುನಿಜನರ ಪ್ರಾಣ ಜೀವನದಾತ ಶರಣು ಪರಬ್ರಹ್ಮ ಪರಮಾನಂದ ಭರಿತ ಸಿರಿ ಅರಸ ಕರುಣಾಳು ಶ್ರೀನಾಥ ಶರಣು 1 ವೇದ ಆಗೋಚರಾನಾದಿ ಗುರು ಅನಂತ ಸಾಧುಜನ ಸಹಕಾರ ಸಂತತ ಸದೋದಿತ ಸದ್ಬ್ರಹ್ಮ ಆನಂದ ಗುಣತ್ರಯ ವಿರಹಿತ ಆದಿ ಅನಾದಿ ಅವಿನಾಶ ಗುರುನಾಥ 2 ಸಂಜೀವ ಸದ್ಗುರುನಾಥ ಶಕ್ತನಹುದಖಿಳದೊಳು ಸಕಳಾರ್ಥಪೂರಿತ ಯುಕ್ತನಹುದಯ್ಯ ಶಕ್ತಿಯು ಗುರುಸಮರ್ಥ ಮುಕ್ತಿದಾಯಕ ಮಹಿಪತಿ ಪ್ರಾಣನಾಥ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶ್ರೀಗುರುವೆ ತಾಯಿ ತಂದೆನಗ ನೀನು ಧ್ರುವ ತಾಯಿ ತಂದೆನಗ ನೀ ಬಾಹ್ಯಾಂತ್ರ ಪರಿಪೂರ್ಣ ಸಾಯೋಜ್ಯ ಸದ್ಗುರುನಾಥ ನೀನೆ ಸಂಜೀವ ಸಾಕ್ಷಾತ ನೀನೆ ಕಾವ ಕರುಣಾಳು ವರದಾತ ನೀನೆ ಇಹಪರದೊಳು ಸಕಳಾರ್ಥ ನೀನೆ 1 ಕರುಣ ಆನಂದದಲಿ ಹೊರೆದು ಸಲಹುವ ಮೂರ್ತಿ ಪರಮ ಜೀವದ ಅತಿ ಮೈತ್ರ ನೀನೆ ಸರ್ವ ಙÁ್ಞನಿಗಳ ಕುಲಗೋತ್ರ ನೀನೆ ದ್ರವ್ಯ ಧನವನು ಸಂಚಿತಾರ್ಥ ನೀನೆ ಪೂರ್ವಪ್ರಾಚೀನ ಪುಣ್ಯಸೂತ್ರ ನೀನೆ 2 ಬಾಲಕನ ಮ್ಯಾಲೆ ದಯಮಾಡಿ ಪಾಲಿಸುತೀಹ್ಯ ಕುಲಕೋಟಿ ಬಂಧುಬಳಗ ನೀನೆ ಮೂಲಪುರಷನ ಋಷಿದೈವ ನೀನೆ ಪರಿ ಬಲವು ಇಳಯೊಳಗೆ ನೀನೆ ಸಲಹುತಿಹ ಮಹಿಪತಿಸ್ವಾಮಿ ನೀನೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು