ಎಲ್ಲಿರಲಾರನು ಚೆಲುವ ಗೋಪಾಲ
ಮೆಲ್ಲುಲಿಗೊಲಿವನು ಇಲ್ಲಿರಲಾರನೆ ಪ
ಕ್ಷುಲ್ಲಕರಿರುವೆಡೆ ನಿಲ್ಲಲಾರನು ದಿಟ
ಎಲ್ಲ ಭಕ್ತರ ಮನೆಯಲಿ ನಲಿವನಿವ ಅ.ಪ
ಸಕಲ ತೀರ್ಥಂಗಳ ಸಕಲಕ್ಷೇತ್ರಂಗಳ
ಸಕಲೋತ್ಸವಗಳ ದರ್ಶನಯಾತ್ರೆ
ಭಕುತಿಗೆ ಸಾಧನ ಮಂತ್ರವು ಮಾನವ
ಭಕುತಿಯ ಭಜನೆಯೆ ಮುಕುತಿಯ ಮಾರ್ಗವು 1
ಮಲಗಿ ಪಾಡಲು ಅವ ಕುಳಿತು ಕೇಳುವನಂತೆ
ಕುಳಿತು ಪಾಡಲು ಅವ ನಿಲ್ಲುವನಂತೆ
ನಿಲುತ ಪಾಡಲು ಅವ ನಲಿಯುವನಂತೆ
ನಲಿದರೆ ಒಲಿವ ಮಾಂಗಿರಿಪತಿಯಂತೆ 2