ಲೇಸು ಲೇಸಾಯಿತು ಭಾಸ್ಕರ ಗುರು ಕೃಪೆ
ಲೇಸು ಲೇಸಾಯಿತು ಮಾ ಧ್ರುವ
ಹಸ್ತವಿಡಲು ಎನ್ನ ಮಸ್ತಕದ ಮೇಲೆ
ಸ್ವಸ್ತಹೊಂದಿತು ಮನ ನಿಶ್ಚಯಲಿ
ವಿಸ್ತಾರದೋರುವ ವಸ್ತು ಇದೆಯೆಂದು
ವಿಸ್ತರಿಸೆನಗಿನ್ನು ದೋರಿತು ಮಾ 1
ಸೋಂಕಲು ಶ್ರೀಗುರುಪಾದ ಎನಗಿನ್ನು
ಬೇಕಾದ ಸವಿ ಸುಖಗೊಟ್ಟಿತು ಮಾ
ಸಕಲೋತ್ತಮನಾದ ಏಕಾಕ್ಷರ ಬ್ರಹ್ಮ
ಏಕೋಮಯವಾಗಿದೋರಿತು ಮಾ 2
ನೀಡಲು ನಿಜ ಸುಙÁ್ಞನದ ಭಿಕ್ಷೆಯು
ಭವ ದುಷ್ಕಾಳವು ಮಾ
ಕೂಡಿತು ಸಮರಸವಾಗಿ ಮಹಿಪತಿ ಜೀವ
ಒಡಿಯನ ಚರಣದಂಗುಷ್ಠದಲಿ ಮಾ 3