ತೆರಳಿಪೋದರು ವಿಠ್ಠಲಾರ್ಯರಿಂದು
ಮುರಹರನ ಚರಣವನು ಸ್ಮರಿಸುತಲಿ
ಹರಿಪುರಕೆ ಪ
ಸುರಪುರದಿ ಜನಿಸಿ ದೇವಾಂಶರೆಂದೆನಿಸಿದರು
ಪುರುಹೂತನಂತೆ ಸಕಲೈಶ್ವರ್ಯದಿಂ
ಗುರುರಾಘವೇಂದ್ರರೊಲಿವರಿಗೆ ಪಾತ್ರರೆಂದೆನಿಸಿ
ನರಯಾನದಲಿ ಕುಳಿತು ಮೆರೆದರತಿ ವೈಭವದಿ1
ಬಂದ ಶಿಷ್ಯರಿಗೆ ನಿರುತ ಅನ್ನೋದಕವನಿತ್ತು
ತಂದೆಯಂತೆ ಸಲಹಿ ಪ್ರೀತಿಯಿಂದ
ಮಂದಹಾಸದಿ ಶಾಸ್ತ್ರಮರ್ಮಗಳ ಪೇಳಿಬುಧ
ರೆಂದೆನಿಸಿದಂಥ ಮಹಾಮಹಿಮರಾನಂದದಲಿ2
ಭಾಗವತ ಪುರಾಣವ ಜನಕೆ
ಅತಿಹಿತದಿ ಪೇಳಿ ದುಷ್ಕøತವ ಕಳೆದು
ಗತಿಯೆಂದು ನಂಬಿದ ಭಕುತ ಜನಕೆಧರ್ಮಪ
ದ್ಧತಿಗಳನು ಪೇಳುತ ಪ್ರತಿಮರೆಂದೆನಿಸಿ 3
ಭೂತಲದಿ ಜನಿಸಿ ಬಹು ಖ್ಯಾತಿಯನು ಪಡೆದು ನರ
ನಾಥರಿಂದಲೆ ಮಾನ್ಯರಾಗಿ ಮೆರೆದು
ಪ್ರೀತಿಯಿಂ ಭಜಿಪ ಶಿಷ್ಯೋತ್ತಮರನುದ್ದರಿಸಿ
ಪತಿ ಬಳಿಗೆ ಪೋಗುವಾ ತುರದಿ4
ಮೋದದಿಂ ಪಿಂಗಲ ಸಮಾ ಮಾಘವದಿ ಪಂಚ
ಮೀ ದಿನದಿ ಆದಿವಾರ ಸ್ವಾತಿಯೋಳ್
ಶ್ರೀದಕಾರ್ಪರ ನಾರಶಿಂಹ ವಿಠ್ಠಲನ ಪದ
ಸಾದರದಿ ಧೇನಿಸುತ ಮೇದಿನಿಯ ತ್ಯಜಿಸಿ 5