ಭಾವಿ ಅಜನಂಘ್ರಿಯುಗವ ಭಜಿಸಬಾರದೆ ಪ
ಭಜಕ ಮಾನವರ ವೃಜಿನಘನಸಮೀರ
ಕುಜನವನಕುಠಾರ ಸುಜನರಿಗೆ ಮಂದಾರನೆಂದು
ಭಜಿಸಬಾರದೆಅ.ಪ
ಭೂತಳದಿ ಶ್ರೀರಾಮ ದೂತನೆನಿಸಿ ಭಕುತ
ವ್ರಾತಕೆ ಸಕಲೇಷ್ಟದಾತನೆಂದು ಪ್ರೀತಿಯಿಂದ 1
ಪುಂಡ ಕೌರವರ ಹಿಂಡುಗೆಲಿದು ರಮೆಯ
ಗಂಡನೊಲಿಸಿದ ಮಧ್ಯ ಪಾಂಡವನ ಪದ ಪಂಡರೀಕ 2
ಶ್ರೀನರಸಿಂಹನೆ ಜಗನಿರ್ಮಾಣ ಕಾರಣನೆಂದು
ಜ್ಞಾನದಾಯಕ ಮಧ್ವ ಮೌನಿಯೆನಿಸಿದ ಪ್ರಾಣಪತಿಯ 3