ಕೃಷ್ಣ ನೀ ಕರುಣದಿ ಥಟ್ಟನೆ ಸಲಹೊ
ದುಷ್ಟಮರ್ದನ ಸಕಲೇಷ್ಟದಾಯಕ ರಾಮ ಪ.
ಹುಟ್ಟಿಸಿದ ದೇವರು ಹುಲ್ಲು ಮೇಯಿಸನೆಂದು
ಶಿಷ್ಟ ನುಡಿವುದ ನಂಬಿಹೆನು
ಮೆಟ್ಟಿ ಬಾಧಿಸುವಂಥ ದಟ್ಟ ದಾರಿದ್ರ್ಯದ
ಬಟ್ಟೆ ಒಂದನು ಕಾಣೆ 1
ಊರ ಜನರ ಮುಂದೆ ಸೇರಿದ ಪದವನ್ನು
ದೂರಗೊಳಿಸಿ ಬಹು ಗಾರಾದೆನು
ಮಾರಮಣ ನೀನ್ನುದಾರ ಗುಣವ ನಂಬಿ
ಚೀರುವ ಎನಗೆ ಬೇರಾರು ರಕ್ಷಕರಿನ್ನು 2
ವಿಶ್ವಕುಟುಂಬಿ ಸರ್ವೇಶ್ವರ ನೀನಿಂದು
ವಿಶ್ವಾಸದಿಂದ ನಾನಿರುವದನು
ತೈಜಸ ಪ್ರಾಜ್ಞ ತುರ್ಯರೂಪಗಳಿಂದ
ವಿಶ್ವವ್ಯಾಪಕನಾದ ನಿನಗರುಪುವುದೇನೊ 3
ಖುಲ್ಲ ಮಾನವರೆಂಬ ಕ್ಷುಲ್ಲ ನುಡಿಗಳಿಂದ
ತಲ್ಲಣಗೊಳಿಸುವುದುಚಿತವೇನೊ
ಮಲ್ಲ ಚಾಣೂರ ಮುಷ್ಟಿಕರನ್ನ ಗೆಲಿÉದರಿ-
ದಲ್ಲಣಯನಗೆ ಬೆಂಬಲನಾಗಿ ಸಲಹಿನ್ನು 4
ಇಂದ್ರಾದಿ ದಿವಿಜರ ಪದಗಳನವರಿಗೆ
ಪೊಂದಿಸಿ ಪಾಲಿಪ ಕರುಣಿ ನೀನು
ಇಂದಿರೆ ಸಹಿತಾಗಿ ಬಂದೆನ್ನ ಮನಸಿಗಾ
ನಂದ ತೋರಿಸೊ ಭುಜಗೇಂದ್ರಾದಿ ಒಡೆಯ 5