(ಉಡುಪಿಯ ಅನಂತೇಶ್ವರ)
ಚಿಂತಾಂಬುಧಿ ನಿ:ಶೇಷ ವಿಶೇಷಾನಂತೇಶ್ವರ ಕರುಣಾಂಬುಧಿಯೇ
ಮನದಿರವೆಂತಿಹುದೆನಗೆಂಬುದ ದೊರೆಯೆ ಪ.
ಸಂತತ ಸಂಸ್ಕøತಿ ಚಕ್ರದಿ ತಿರುಗುವ ಭ್ರಾಂತ ಜನರಿಗೀ ಜಗದಲ್ಲಿ
ಸಂತತಿ ಸಂಪತ್ಪ್ರಮುಖ ಸುಖಾಶಾ ತಂತುಬಂಧ ಬಿಟ್ಟಿಹುದೆಲ್ಲಿ
ಅಂತರಂಗ ಭಕ್ತರ ತಾನಾಗಿಯೆ ಸಂತೈಸುವ ಮಹ ಬಿರುದೆಲ್ಲಿ
ಮನೋಗತವೆಂತಿಹುದೆಂಬುದ ನೀ ಬಲ್ಲಿ 1
ನಿನ್ನೊಲುಮೆಯಲೀ
ಪರಿಪೂರಿಸಿಕೊಂಡಿಹ ಕಥೆಗಳನು
ತೋರಿದಂತೆ ಪೇಳಿರುವುದನು
ತೋರು ತಡೆಯದಿರು ತತ್ವವನು2
ಸಾಂದ್ರಸುಧಾಕರ ಸೇಚನದಿ
ಸಾಂದ್ರ ನಿನ್ನ ಕರುಣಾರಸದಿ
ಸಕಲೇಂದ್ರಿಯ ತೃಪ್ತಿಯಬಡಿಸುತಲಿ
ಧರೇಶ ನೀ ತ್ವರಿತದಲಿ 3