ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಚಿಂತಾಮಣಿಯ ನರಸಿಂಹದೇವರು) ಚಿಂತಾಮಣಿ ನರಸಿಂಹನ ನೆನೆದರೆ ಚಿಂತಿತ ಫಲವೀವನು ಭ್ರಾಂತ ಬುದ್ಧಿಯೊಳನ್ಯ ದೈವವ ಭಜಿಸದೆ ಕಂತು ಜನಕ ಲಕ್ಷ್ಮೀಕಾಂತನ ನೆರೆನಂಬು ಪ. ಜಲಜ ಸಂಭವ ಶಂಭು ಬಲವೈರಿ ಮುಖದೇವ- ರ್ಕಳನೆಲ್ಲ ಸುಲಭದಿ ಸಲಹುವ ದೊರೆಯು ಕಲಿಕೃತ ಮಲವನ್ನು ಕಳವನು ನಿರತ ಬೆಂ ಬಲವಾಗಿ ದುರಿತಾಳಿಗಳ ಓಡಿಸುವನು ಕಳೆಯ ಪುರದಲಿ ನೆಲೆಯದೋರುವ ಚೆಲುವ ಲಕ್ಷ್ಮೀನಿಲಯ ಮೂರುತಿ ಯೋಗಿನಿಗಣ ಭಯಕ್ಕಾಗಿ ಸಂಸ್ತುತಿವೇದ 1 ನಾಗಭೂಷಣ ನಮ್ಮುದಾಗಿ ರಕ್ಷಿಸೀದ ವಾಗೀಶ ಪದಯೋಗ್ಯನಾಗಿ ಭೂಮಿಗೆ ಬಂದ ಯೋಗೀಶ ವಾದಿರಾಜರಿಗೊಲಿದನಾ ಬೇಗದಲಿ ಭಕ್ತಾಳಿ ರಕ್ಷಣ- ರಾಗಿಯೆನಿಪ ವಿರಾಗಿ ಹೃದ್ಗತ 2 ಶಂಖಾರಿ ಪದ್ಮ ಗದಾಧರ ನಿಜ ಜನ ಶಂಕಾನಿವಾರ ಶಂಕರ ವರದಾ ಲಿಂಗ ಸುಲಾಲಿತ ಪ್ರಲ್ಹಾದ ರಮಾಕುಚ ಕುಂಕುಮಲಿಪ್ತಾ ವಕ್ಷೋವೀವರ ಶಂಕಿಸದೆ ಸಕಲಾರ್ಥವೀವ ಮೃ- ಮಾಧವ ವೆಂಕಟೇಶ್ವರ 3
--------------
ತುಪಾಕಿ ವೆಂಕಟರಮಣಾಚಾರ್ಯ
ಮನೆಯ ನಿರ್ಮಲಗೈದು ಮೋದಬಡಿಸುವುದು ವನಜನಾಭನ ಭಕ್ತಿಯಂಬವಳ ಬಿರಿದು ಪ. ಬಾಯಿಮೊದಲಾದೈದು ಬಾಗಿಲುಗಳಲ್ಲಿ ವಾಯುವಂದ್ಯನ ಚರಿತ ವರ್ಣನಾದಿಗಳಾ ಛಾಯಗೊಂಬುವ ತೆರದಿ ಚಿತ್ರಕೃತ್ಯವನೂ ನಿತ್ಯ ನಲಿವುದನು 1 ಬುದ್ಧಿ ದೀಪವನು ಬಹು ಶುದ್ಧಕನು ತಾ ತದ್ದಾರಿ ಮನವ ಮೇಲುದ್ಧರಿಸಿಕೊಳುತಾ ಸಿದ್ಧಗಮ್ಯನ ಪದಕೆ ಸರಿಯಾಗಿಸುತಾ ಬದ್ಧ ಬೊಗಳುತಾ ಜನರ ಬಾಯಿ ಮುಚ್ಚಿಸುತಾ 2 ದೋಷ ದುಷ್ಕøತ ಕೆಸರ ಲೇಶವಿಡಗೊಡಳು ಆಶೆಯೆಂಬುವ ಬಲೆಯ ಕೊೈಸಿ ಬಿಸುಟುವಳು ಈಶ ಮಾನಿತ್ವಕವಕಾಶವೇನಿಡಳು ಕೇಶವನ ಕರತಂದು ಕಾವಲಿರಿಸುವಳು 3 ಇವಳಾಶ್ರಯವ ಪೊಂದಲ್ಯಾರಭಯವಿಲ್ಲ ನವರೂಪಳನ್ನುಸರಿಸಿ ನಲಿವ ಸಿರಿನಲ್ಲ ತವಕದಿಂದಲಿ ತಾನೆ ಓಡಿ ಬಂದೆಲ್ಲಾ ಯುವತಿಯರ ಕೂಡಿ ತಾ ಪಾಡುವರೆ ಬಲ್ಲಾ 4 ಕಂಜನಾಭನ ಕರುಣ ಪಂಜರದೊಳಿರಿಸಿ ಸಂಜೀವನೌಷಧವ ಸುಲಭದೋಳ್ ಕುಡಿಸಿ ಅಂಜಿಕೆಯ ಬಿಡಿಸಿ ರಿಪು ಪುಂಜವನ ಕಡಿಸಿ ಮಂಜುಳಾತ್ಮಕ ಮಾಧವನ ಮುಂದೆ ಕರಿಸಿ 5 ದಾನ ವ್ರತಾದಿಗಳನೇನ ಮಾಡಿದರು ಶ್ರೀನಿವಾಸನ ಕರುಣ ಸಾಧ್ಯವಾಗಿರದು ನೀನೆ ರಕ್ಷಕನೆಂಬ ಧ್ಯಾನದಲಿ ಮೆರದು ಜ್ಞಾನ ಭಕ್ತಿಗಳಿಂದ ನಲಿವುದೇ ಬಿರುದು 6 ಯುಕ್ತಿಯಿಂದಲಿ ನೋಡಲೆಲ್ಲ ಶಾಸ್ತ್ರದಲಿ ಭಕ್ತಿಯೋಗವ ಪೇಳ್ವವೇಕಮತ್ಯದಲಿ ಭುಕ್ತಿ ಮುಕ್ತಿಯ ಶೇಷ ಭೂಧರೇಶನಲಾ ಸಕ್ತಿಯಿರೆ ಸಕಲಾರ್ಥವೀವನುತ್ಸವದಿ 7
--------------
ತುಪಾಕಿ ವೆಂಕಟರಮಣಾಚಾರ್ಯ