ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಹಯವದನ ಪ್ರಾರ್ಥನೆ) ಹಾರುತ ಬಂದಿಹ ಹಯಮುಖ ಮೂರುತಿಯನು ನೋಡಿ ಮಾರುತ ವಂದಿತ ಮಹಿಮೆಯ ತೋರುವ ಕಾಪಾಡಿ ಪ. ವೇದವ ಕದ್ದ್ಯೊದಸುರನ ಹಾದಿಯೊಳಡ್ಡಗಟ್ಟಿ ಮೇದಿನಿಗೊರಗಿಸಿ ಶ್ರುತಿಯನು ಕಾದನು ಜಗಜಟ್ಟಿ ವೇಧಗೆ ಪರತತ್ವಂಗಳ ಬೋಧಿಸಿ ಮನಮುಟ್ಟಿ ಶ್ರೀಧರ ದುರ್ಜನರೆದೆಗಳ ಭೇದಿಸುವನು ಮೆಟ್ಟಿ1 ವಾದಿನೃಪ ಯತೀಂದ್ರ ಮನೋಲ್ಲಾಸದಿ ಪದಾಂಭೋಜ ಸಾಧಿಸುವನು ಸಕಲಾರ್ಥನ ಸ್ವಜನಕೆ ಸುರರಾಜ ಸ್ವೋದರಗತ ವಿಶ್ವಂಭರ ಶಮಿತದುರಿತ ಬೀಜ ವ್ಯಾಧಿಯ ಹರಸುವ ವಿಭವಾಸಾದಿತ ಗಜರಾಜ 2 ಹೇಷಾ ನಿಭೃತಾಶಾನತ ಕೋಶಾಸ್ಪದ ರೂಪ ದೋಷಾಂಬುಧಿಶೋಷಾದ್ಭುತ ವೇಷಾಸುರ ತಾಪ ವೀಶಾಹಿ ಗಣೇಶಾದ್ಯಮರೇಶಾರ್ಚಿತ ಪಾದ ಶೇಷಾಚಲ ಭೂಷಾಗಮ ಭಾಷಾಮಿತವಾದ 3
--------------
ತುಪಾಕಿ ವೆಂಕಟರಮಣಾಚಾರ್ಯ