ಸಕಲಾರ್ಥಕಿದೆ ಸುಖ ಸಾಧಿಸಿನ್ನು ನೋಡಿ
ಭಕುತಿ ಭಾವದಿಂದ ಸದ್ಗುರು ಸೇವೆಯ ಪೂರ್ಣಮಾಡಿ ಧ್ರುವ
ಭಾವವಿಟ್ಟು ನೋಡಿ ಖೂನ ದೇವದೇವೇಶನ
ಕಾವ ಕರುಣನೇ ತೋರುತಿಹ್ಯ ತಾ ನಿಧಾನ 1
ನೋಟ ನಿಜಮಾಡಿ ನೋಡಿ ನೀಟ ನಿಜ ಧ್ಯಾನ
ಘಾಟ ತಿಳಿದವರಿಗಿದೆ ಗುರುಕೃಪೆಙÁ್ಞನ 2
ಸವಿದುಣ್ಣಬೇಕು ಇದೇ ಸವಿ ಸವಿಯಿಂದ
ಆವಾಗ ಮಹಿಪತಿಗಿದೆ ನೋಡಿ ಬ್ರಹ್ಮಾನಂದ 3