ಒಟ್ಟು 22 ಕಡೆಗಳಲ್ಲಿ , 8 ದಾಸರು , 17 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಚಿಂತಾಮಣಿಯ ನರಸಿಂಹದೇವರು) ಚಿಂತಾಮಣಿ ನರಸಿಂಹನ ನೆನೆದರೆ ಚಿಂತಿತ ಫಲವೀವನು ಭ್ರಾಂತ ಬುದ್ಧಿಯೊಳನ್ಯ ದೈವವ ಭಜಿಸದೆ ಕಂತು ಜನಕ ಲಕ್ಷ್ಮೀಕಾಂತನ ನೆರೆನಂಬು ಪ. ಜಲಜ ಸಂಭವ ಶಂಭು ಬಲವೈರಿ ಮುಖದೇವ- ರ್ಕಳನೆಲ್ಲ ಸುಲಭದಿ ಸಲಹುವ ದೊರೆಯು ಕಲಿಕೃತ ಮಲವನ್ನು ಕಳವನು ನಿರತ ಬೆಂ ಬಲವಾಗಿ ದುರಿತಾಳಿಗಳ ಓಡಿಸುವನು ಕಳೆಯ ಪುರದಲಿ ನೆಲೆಯದೋರುವ ಚೆಲುವ ಲಕ್ಷ್ಮೀನಿಲಯ ಮೂರುತಿ ಯೋಗಿನಿಗಣ ಭಯಕ್ಕಾಗಿ ಸಂಸ್ತುತಿವೇದ 1 ನಾಗಭೂಷಣ ನಮ್ಮುದಾಗಿ ರಕ್ಷಿಸೀದ ವಾಗೀಶ ಪದಯೋಗ್ಯನಾಗಿ ಭೂಮಿಗೆ ಬಂದ ಯೋಗೀಶ ವಾದಿರಾಜರಿಗೊಲಿದನಾ ಬೇಗದಲಿ ಭಕ್ತಾಳಿ ರಕ್ಷಣ- ರಾಗಿಯೆನಿಪ ವಿರಾಗಿ ಹೃದ್ಗತ 2 ಶಂಖಾರಿ ಪದ್ಮ ಗದಾಧರ ನಿಜ ಜನ ಶಂಕಾನಿವಾರ ಶಂಕರ ವರದಾ ಲಿಂಗ ಸುಲಾಲಿತ ಪ್ರಲ್ಹಾದ ರಮಾಕುಚ ಕುಂಕುಮಲಿಪ್ತಾ ವಕ್ಷೋವೀವರ ಶಂಕಿಸದೆ ಸಕಲಾರ್ಥವೀವ ಮೃ- ಮಾಧವ ವೆಂಕಟೇಶ್ವರ 3
--------------
ತುಪಾಕಿ ವೆಂಕಟರಮಣಾಚಾರ್ಯ
(ನವಗ್ರಹ ಸ್ತೋತ್ರ) ಸತ್ಕಟಾಕ್ಷವಿರಿಸು ದಕ್ಷನಖವಜ್ರಿರಿಪುಪಕ್ಷದಹಿಸು ವಿರೂಪಾಕ್ಷ ಶರಣು ಪಕ್ಷವೃತ್ವಯನ ಸಂವತ್ಸರಾಖ್ಯ ದಯಮಾಡು ಶರಣೆಂದು ನಮಿಪೆ ನಿನ್ನ 1 ತೇಜೊರಾಶಿಯಾಗಿ ಮೆರೆವ ಕಮಲ ಘೂಕ ತಸ್ಕರರ ಗಣವ ನಾದಿಪತಿ ಗ್ರಹರಾಜ ನಿನ್ನ ಪದವ ವ್ಯಾಧಿಗಳ ಪರಿಹರಿಸು ಪಾವನಾತ್ಮ ಸಲಹೆನ್ನ ನಿರ್ಮಲಾತ್ಮ2 ನೀರುಮರಬಳ್ಳಿಸಕಲೌಷಧಿಗಳ ತಾರೆಗೊಲಿದಾಕೆಯಲಿ ಬುಧನಪಡದೇ ರಾಶಿ ಸಂಚಾರ ಮಾಳ್ಪೆ ಮೋಹದ ಬಲೆಯ ನೀರಜಾಕ್ಷ ಸಮನೋಜ ಮಾದೇವಿಸಹಜ 3 ಗುರುಮಿತ್ರ ಸಜ್ಜನತ್ರ ವ್ಯಾಮೋಹಗೊಳಿಸದಿರು ದಂಡಪಾಣಿ ರಾಜಕರುಣಾ ಪಾತ್ರನೆ ಕಾಮಚಾರಜ ಬಹುವಿಧಾಮಯವ ಪರಿಹರಿಸಿ ನೀ ಮನೋಹರ್ಷ ಪಾಲಿಸು ಧೀರನೆ ಕಮನೀಯ ಕಾಂತಿ ಕುಹಕಜನವಾರಿ4 ಪದುಮಗಳಿಗೆರಗುವೆನು ಪಾಲಿಸೆಂದು ಮಧು ವಿರೋಧಿಯ ಮನೋಭವನಣುಗ ಮಾತಿನಲಿ ಚದುರತೆಯನಿತ್ತು ಚಾತುರ್ಯಗೊಳಿಸು ಸದಯಾವಲೋಕ ನೀನೆಂದು ತಿಳಿದೆ ಮಾತ್ಸರ್ಯವೆಲ್ಲಬಿಡಿಸು ಪಾದ ಸ್ವರ್ಣವರ್ಣ ಸುಲಲಿತಾಂಗ 5 ಮಂತ್ರಜ್ಞ ಚೂಡಾಮಣಿ ಸದುಪಾಯಗಳ ತಿಳಿಸಿ ಸುರರ ಕಾವ ಉದಿತನಾಗಿರೆ ಸಕಲ ಬುಧರಿಗನುಕೂಲ ನಿತ್ಯದಲಿ ನಿಖಿಳ ಗ್ರಹೋನ್ನತ ಶಕ್ತಿಯೇ ಸಕಲಾರ್ಥ ಪಡದೀವನೆ ನಿನ್ನ ನಮಿಸುವೆನು ನೀನೊಲಿದು ಸಲಹೊ6 ಭಾರ್ಗವನೆ ಭಜಿಪೆ ನಿನ್ನ ತಪ್ಪು ಮರತು ಮುಖ್ಯವೆಂಬರ್ಥವರಿತು ಸೇವೆಗನುಕೂಲನಾಗಿರುವೆ ಕುರಿತು ಕಾಪಾಡು ಕರುಣ ವಹಿಸು7 ಮುನಿಸದಿರು ನಮ್ಮಮೇಲೆಂದೆಂದಿಗು ನಿನ್ನ ಘನವ ತ್ಯಜಿಸು ಭಂಗ ಶಕ್ತರಹರೆ ಪೇಳು ಮನ್ನಿಸುವ ಮಮತೆ ತಾಳು ಕನಸಿಲಾದರು ಕ್ರೋಧವಿಡದೆ ಕಾಪುವುದೆಂದು ನಿರುತದಿಂ ಕೈ ಮುಗಿದು ಬೇಡಿಕೊಳುವೆ 8 ವೀರ್ಯ ವಹಿಸಿದ ರಾಹು ಕೇತುಗಳನು ಶೌರ್ಯಾದಿಗಳ ದಯ ಮಾಡಿರಿ ಧಾರವೆಂದಿತ್ತಹರ್ಯಜ್ಞೆಯಿಂದ ನಾರ್ಯತನವೇನಿವರೊಳಿದ್ದರರಿತು ಮಂಗಳವಿತ್ತು ಸೌಖ್ಯ ಪಾಲಿಸಲಿ9
--------------
ತುಪಾಕಿ ವೆಂಕಟರಮಣಾಚಾರ್ಯ
(ಹಯವದನ ಪ್ರಾರ್ಥನೆ) ಹಾರುತ ಬಂದಿಹ ಹಯಮುಖ ಮೂರುತಿಯನು ನೋಡಿ ಮಾರುತ ವಂದಿತ ಮಹಿಮೆಯ ತೋರುವ ಕಾಪಾಡಿ ಪ. ವೇದವ ಕದ್ದ್ಯೊದಸುರನ ಹಾದಿಯೊಳಡ್ಡಗಟ್ಟಿ ಮೇದಿನಿಗೊರಗಿಸಿ ಶ್ರುತಿಯನು ಕಾದನು ಜಗಜಟ್ಟಿ ವೇಧಗೆ ಪರತತ್ವಂಗಳ ಬೋಧಿಸಿ ಮನಮುಟ್ಟಿ ಶ್ರೀಧರ ದುರ್ಜನರೆದೆಗಳ ಭೇದಿಸುವನು ಮೆಟ್ಟಿ1 ವಾದಿನೃಪ ಯತೀಂದ್ರ ಮನೋಲ್ಲಾಸದಿ ಪದಾಂಭೋಜ ಸಾಧಿಸುವನು ಸಕಲಾರ್ಥನ ಸ್ವಜನಕೆ ಸುರರಾಜ ಸ್ವೋದರಗತ ವಿಶ್ವಂಭರ ಶಮಿತದುರಿತ ಬೀಜ ವ್ಯಾಧಿಯ ಹರಸುವ ವಿಭವಾಸಾದಿತ ಗಜರಾಜ 2 ಹೇಷಾ ನಿಭೃತಾಶಾನತ ಕೋಶಾಸ್ಪದ ರೂಪ ದೋಷಾಂಬುಧಿಶೋಷಾದ್ಭುತ ವೇಷಾಸುರ ತಾಪ ವೀಶಾಹಿ ಗಣೇಶಾದ್ಯಮರೇಶಾರ್ಚಿತ ಪಾದ ಶೇಷಾಚಲ ಭೂಷಾಗಮ ಭಾಷಾಮಿತವಾದ 3
--------------
ತುಪಾಕಿ ವೆಂಕಟರಮಣಾಚಾರ್ಯ
ಕಾಡದೆ ಬೇಡದೆ ಕಂಗೆಡದೆ ಕೋ ಮನವೆ ನಿಜ ಸುಭಿಕ್ಷ ಗುರು ಸಂರಕ್ಷ ಧ್ರುವ ಅಳುಕದೆ ಬಳುಕದೆ ತುಳುಕದೆ ನಿಂದು ತಿಳಕೊ ನಿಜಸುಭಿಕ್ಷೆ ಕೊಳಕ ಹುಳಕ ಮೊಳಕನೆಂದು ಮಾಡದಿರುಪೇಕ್ಷ ನಾಳೆ ನಾಡದಿಂದ್ಯಾಗೆಂದು ಕಲ್ಪಿಸಿಕೊಬ್ಯಾಡಪೇಕ್ಷ 1 ಲಜ್ಜೆ ಅಳಿದು ಗುರು ಶರಣವ ಹೊಕ್ಕು ಸರಕ್ಕನೆ ಕೋ ಸುಭಿಕ್ಷೆ ಹೆಜ್ಜೆಜ್ಜಿಗೆ ಸುರಿಮಳೆಗರೆವುತಲದೆ ಗುರುಕರುಣದಕಟಾಕ್ಷ ಫಜ್ಜಿಗೆ ಬಂದುವರಿತ ಮ್ಯಾಲೆ ಕಂಜನಾಭನೆ ಸುಪಕ್ಷ 2 ಬೇಡಿಸಿಕೊಳ್ಳದೆ ನೀಡುತಲಾನೆ ಭಾಸ್ಕರ ಗುರು ಸಮರ್ಥ ನೀಡಿ ನಿಜನಿಧಾನವ ಕೊಟ್ಟು ಮಾಡುತಲಾನೆ ಹಿತಾರ್ಥ ಬಡವರಾಧಾರೆನ್ನೊಡೆಯನೆ ಜಗತ್ರಯಕ್ಕೊಬ್ಬನೆ ಕರ್ತ ಮೂಢ ಮಹಿಪತಿಗನುದಿನ ಬಿಡದೆ ನೀಡುತಾನೆ ಸಕಲಾರ್ಥ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ಜಯ ಗುರುನಾಥ ದಯ ಗುಣದಲಿ ಅಖಂಡಿತ ಧ್ರುವ ಅನುಗ್ರಹದಲಿ ಸಮರ್ಥ ಜನವನದೋರುವೆ ಪರಮಾರ್ಥ ನೀನೆ ಸಕಲಾರ್ಥ ಅಣು ರೇಣುಕ ಸುಹಿತಾರ್ಥ 1 ಬಡವರಿಗಾಧಾರಿ ನೀಡುವುದರಲಿ ಘನ ಉದಾರಿ ಕುಡುವೆ ನಿಜದೋರಿ ಕಡೆಗಾಣಿಸುವೆ ಸಹಕಾರಿ 2 ಪಿಡಿದವರ ಕೈಯ ಬಿಡ ಎಂದೆಂದಿಗೆ ನಿಶ್ಚಯ ಒಡೆಯನಹುದಯ್ಯ ಮೂಢ ಮಹಿಪತಿ ಮಹದಾಶ್ರಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜ್ಞಾನಗಮ್ಯ ಶ್ರೀರಾಘವೇಂದ್ರ ದೀನಪಾಲ ಶರಣ ಶರಣ್ಯ ಯೋಗ ಪ ದಾನವೇಶ್ವರಾಂತಕ ವಂಶೋದ್ಭವಾ ಪೂರ್ಣಾವತಾರಾ ವ್ಯಾಸರಾಯರೂಪಾ ಅ.ಪ ಸರ್ವಜನ ಹಾಸ | ಬೃಂದಾವನ ನಿವಾಸ ಭುವನೈಕ ನೇತ್ರಾ | ಸಕಲಾರ್ಥದಾತ ತವಚರಣಂ ಮಾಂಗಿರೀಶ ಪ್ರೀತ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಜ್ಞಾನಾನಂದಮಯಂ ಭಜೇಹಂ ಪ ಶ್ರೀನಿವಾಸ ಕರುಣಾರಸಪೂರಂ ಅ.ಪ ಸಕಲ ಕಲಾಕೃತಿ ಪೂರ್ಣಮನಂತಂ ಸಕಲ ವರಪ್ರದಮನುಪಮ ಶಾಂತಂ ವಿಕಸಿತ ಕಮಲೋಪಮ ಶಂಭುಚಿತ್ತಂ ಶ್ರೀಕರಮಮಿತ ಕೃಪಾಗುಣ ಸಹಿತಂ1 ಮೂಲಮಂತ್ರ ಸಕಲಾರ್ಥಸಮೀರಂ ಮೂಲತತ್ವ ನಿರ್ಧಾರಕಮಮರಂ ಗಾಲವ ನಾರದ ಮುನಿಜನನಿಕರಂ ಸಾಲಂಕೃತ ಮಾಂಗಿರಿವರಮಿಹಿರಂ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪತಿತನ್ನ ಪಾವನ ಮಾಡುವ ರಂಗಾ | ಗತಿಯಿಲ್ಲದವರಿಗೆ ಗತಿಯೇ ನೀನೇ ಗತಿ ಪ ನಿಂದಿರಲು ನೆರಳಿಲ್ಲ ನಿಲ್ಲಲು ನೆಲೆಯಿಲ್ಲ | ತಂದಿ-ತಾಯಿಯೆಂಬೋರು ಮೊದಲೆ ಇಲ್ಲ|| ಒಂದು ಸಂಗತಿ ಇಲ್ಲ ಪಡದಾನಂದನರಿಲ್ಲ | ಬಂದು-ಬಳಗದವರು ಆರಿಲ್ಲ ಹರಿಯೇ 1 ಕುಡಿಯಲು ನೀರಿಲ್ಲ ಕಾಲಿಡಲು ಇಂಬಿಲ್ಲಾ | ಪಿಡಿವೆನೆಂದರೆ ಮೇಲೆ ಕೊಡೆಯಿಲ್ಲ || ಒಡನೆ ಬರುವರಾರಿಲ್ಲ ಸಂಗಡದಿ | ಆಡಿವೆನೆಂದರೆ ವಳ್ಳಿಗಾಯಿತೊ ಹರಿಯೆ 2 ಧೈರ್ಯ ಕೊಡುವವರು ಇಲ್ಲ ದಾತರೊಬ್ಬರಿಲ್ಲ | ಕಾರ್ಯವೆಂದರೆ ಕೇಳಿ ಅರಿವರಿಲ್ಲಾ || ವೀರ್ಯವು ಎನಗಿಲ್ಲ ವಸಿಷ್ಠನು ನಾನಲ್ಲ | ಧೈರ್ಯವು ದು:ಖವು ವೆಗ್ಗಳಿಸಿತೋ ಹರಿಯೆ 3 ತನ್ನವರು ತನಗಿಲ್ಲ ತಾಳು ಎಂಬುವರಿಲ್ಲ | ಸಣ್ಣ ಮನಸ್ಸು ಅಲ್ಲದೇ ಘನವು ಯಿಲ್ಲ || ಕರ್ಮ ಬೆನ್ನ ತೊಲಗಲಿಲ್ಲ | ಇನ್ನು ಜನ್ಮ ವ್ಯರ್ಥವಾಯಿತೊ ಹರಿಯೇ 4 ಪಾದ | ಸಾಕಾರ ಮಾಡಿಕೊಂಬುವರ ಸಂಗಡ || ಶ್ರೀಕಾಂತ ವೆಂಕಟ ವಿಜಯವಿಠ್ಠಲರೇಯ | ನೀ ಕರುಣಸಿದರೆ ಸಕಲಾರ್ಥವಹುದು 5
--------------
ವಿಜಯದಾಸ
ಪರಾಕು ಜೀಯ ವೆಂಕಟರಾಯ ಪರಾಕು ಸರ್ವೋದ್ವøಕ್ತ ನೀನೊಬ್ಬ ಸಾಕು ಉಕ್ತಿಯ ಕೇಳಬೇಕು ಪಾಲಿಸು ಸಾಕು ಪ. ಇಂದಿರಾವರ ದೀನ ಬಂಧು ನಿನ್ನ ಪಾದಾರ- ವಿಂದವೆ ಶರಣವೆಂದು ಹೊಂದಿದೆನಿಂದು ಮಂದ ಭಾವನೆಯ ಕುಂದು ಕ್ಷಮಿಸು ಯೆಂದು 1 ಕಾಲ ಶುಭ ಲೀಲೆಯರಸವೆಂಬ ಪಾಲ ಕುಡಿಸುತೆನ್ನನು ಪಾಲಿಸು ಪದ್ಮ ಲೋಲ ನಿನ್ನಣುಗನನ್ನು ಕೈಪಿಡಿದಿನ್ನು 2 ತಡೆಯದೆ ಸಕಲಾರ್ಥ ಕೊಡುವೆ ಶ್ರೀ ವೆಂಕಟಾದ್ರಿ ಒಡೆಯ ನೀನೊಲಿದಿರಲು ವೈರಿಗಳನ್ನು ಕೆಡವುತ ಸುಖ ಲಾಭವು ಸಿದ್ಧವಾಗಿಹವು 3
--------------
ತುಪಾಕಿ ವೆಂಕಟರಮಣಾಚಾರ್ಯ
ಬಲುದೊಡ್ಡ ಧೊರಿ ದೊರಕಿದೆನಗೊಬ್ಬ ನೋಡಿ ಸಲಹುತಿಹ್ಯ ಸಕಲಾರ್ಥ ಸಾರಾಯ ನೀಡಿ ಧ್ರುವ ದೊರೆಗಳಾದವರಿಗೆಲ್ಲ ಈತನೆ ದೊರೆಯು ಚರಣಸೇವೆಯಲ್ಲಿಹಳು ಅಖಂಡ ಸಿರಿಯು ಸುರಮುನಿಜನರ ಪಾಲಿಸುತಿಹ್ಯ ಪರೋಪರಿಯು ಸರಿಸಿಜೋದ್ಭವನುತಗಿಲ್ಲ ಸರಿಯು 1 ಅನಂತಕೋಟಿ ಬ್ರಹ್ಮಾಂಡ ನಾಯಕನೆಂದು ಅನಂತಸಿದ್ಧಿ ವಾಲ್ಗೈಸುತಿಹವು ಅನಂತಗುಣ ಪರಿಪೂರ್ಣ ಶ್ರೀ ಹರಿಯೆಂದು ಅನಂತಶ್ರುತಿ ಸ್ಮøತಿ ಸಾರುತಿಹ್ಯವು 2 ಅನೆಮೊದಲಿರುವೆÉ ಕಡೆ ಅನುದಿನಾಹಾರವಿತ್ತು ಜನವನವಿಜನದಿ ರಕ್ಷಿಸುತಿಹನು ದೀನ ಮಹಿಪತಿಸ್ವಾಮಿ ಭಾನುಕೋಟಿತೇಜ ತಾನೆ ತಾನಾಗೆನಗೆ ಸಲಹುತಿಹ್ಯನು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬ್ರಹ್ಮನ ರಾಣಿ ಮಂಗಳಂ ಶಾರದೆ ಸಕಲಾರ್ಥದೆ ಪ ನಿನ್ನನು ನಂಬಿದೆ ಸನ್ಮತಿಯಿತ್ತು ಜಿಹ್ವೆಯೊಳೀಗಲೆ ನಲಿಯೆ ಶಾರದೆ ಸಕಲಾರ್ಥದೆ 1 ಪೂರ್ಣದಯದಿ ಪೊರೆಯೆ ಶಾರದೆ ಸಕಲಾರ್ಥದೆ 2 ಸುಂದರ ಶಾರದ ಚಂದ್ರ ಪ್ರಭಾನ್ವಿತೆ ಮಂದಹಾಸದಿ ನಟಿಸೆ ಶಾರದೆ ಸಕಲಾರ್ಥದೆ 3 ಶೋಣಾಧರ ಪಲ್ಲವೆ ಶಾರದೆ ಸಕಲಾರ್ಥದೆ 4 ಮಾನಿನಿ ವಾಗ್ವಿಜೃಂಬಿಣಿಶಾರದೆ ಸಕಲಾರ್ಥದೆ 5
--------------
ಬೇಟೆರಾಯ ದೀಕ್ಷಿತರು
ಮನದಲಿ ಸಕಲಾರ್ಥ | ಜಗದೊಳು ಪ ಮನ ನೆಲೆಗೊಂಡರೆ ಮೋಕ್ಷದ ಹಾದೀ | ಮನ ಚಲಿಸಲು ಬಾಧೀ 1 ಮನವೇ ತಾಹದು ನಾನಾಜನ್ಮ | ಮನ ಹರಿವುದು ಕರ್ಮಾ 2 ಯೋಗಿ ಮಹಂತಾ | ಮನಮೀರಲು ಭ್ರಾಂತ 3 ಭವ ದೂರಾ | ಮನದೊಳು ಸಂಸಾರಾ 4 ಮನ ಗುರುವರ ಮಹಿಪತಿ ಪ್ರಭು ನಾಮಾ | ನೆನಿಯಲು ಸುಖಧಾಮಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮನೆಯ ನಿರ್ಮಲಗೈದು ಮೋದಬಡಿಸುವುದು ವನಜನಾಭನ ಭಕ್ತಿಯಂಬವಳ ಬಿರಿದು ಪ. ಬಾಯಿಮೊದಲಾದೈದು ಬಾಗಿಲುಗಳಲ್ಲಿ ವಾಯುವಂದ್ಯನ ಚರಿತ ವರ್ಣನಾದಿಗಳಾ ಛಾಯಗೊಂಬುವ ತೆರದಿ ಚಿತ್ರಕೃತ್ಯವನೂ ನಿತ್ಯ ನಲಿವುದನು 1 ಬುದ್ಧಿ ದೀಪವನು ಬಹು ಶುದ್ಧಕನು ತಾ ತದ್ದಾರಿ ಮನವ ಮೇಲುದ್ಧರಿಸಿಕೊಳುತಾ ಸಿದ್ಧಗಮ್ಯನ ಪದಕೆ ಸರಿಯಾಗಿಸುತಾ ಬದ್ಧ ಬೊಗಳುತಾ ಜನರ ಬಾಯಿ ಮುಚ್ಚಿಸುತಾ 2 ದೋಷ ದುಷ್ಕøತ ಕೆಸರ ಲೇಶವಿಡಗೊಡಳು ಆಶೆಯೆಂಬುವ ಬಲೆಯ ಕೊೈಸಿ ಬಿಸುಟುವಳು ಈಶ ಮಾನಿತ್ವಕವಕಾಶವೇನಿಡಳು ಕೇಶವನ ಕರತಂದು ಕಾವಲಿರಿಸುವಳು 3 ಇವಳಾಶ್ರಯವ ಪೊಂದಲ್ಯಾರಭಯವಿಲ್ಲ ನವರೂಪಳನ್ನುಸರಿಸಿ ನಲಿವ ಸಿರಿನಲ್ಲ ತವಕದಿಂದಲಿ ತಾನೆ ಓಡಿ ಬಂದೆಲ್ಲಾ ಯುವತಿಯರ ಕೂಡಿ ತಾ ಪಾಡುವರೆ ಬಲ್ಲಾ 4 ಕಂಜನಾಭನ ಕರುಣ ಪಂಜರದೊಳಿರಿಸಿ ಸಂಜೀವನೌಷಧವ ಸುಲಭದೋಳ್ ಕುಡಿಸಿ ಅಂಜಿಕೆಯ ಬಿಡಿಸಿ ರಿಪು ಪುಂಜವನ ಕಡಿಸಿ ಮಂಜುಳಾತ್ಮಕ ಮಾಧವನ ಮುಂದೆ ಕರಿಸಿ 5 ದಾನ ವ್ರತಾದಿಗಳನೇನ ಮಾಡಿದರು ಶ್ರೀನಿವಾಸನ ಕರುಣ ಸಾಧ್ಯವಾಗಿರದು ನೀನೆ ರಕ್ಷಕನೆಂಬ ಧ್ಯಾನದಲಿ ಮೆರದು ಜ್ಞಾನ ಭಕ್ತಿಗಳಿಂದ ನಲಿವುದೇ ಬಿರುದು 6 ಯುಕ್ತಿಯಿಂದಲಿ ನೋಡಲೆಲ್ಲ ಶಾಸ್ತ್ರದಲಿ ಭಕ್ತಿಯೋಗವ ಪೇಳ್ವವೇಕಮತ್ಯದಲಿ ಭುಕ್ತಿ ಮುಕ್ತಿಯ ಶೇಷ ಭೂಧರೇಶನಲಾ ಸಕ್ತಿಯಿರೆ ಸಕಲಾರ್ಥವೀವನುತ್ಸವದಿ 7
--------------
ತುಪಾಕಿ ವೆಂಕಟರಮಣಾಚಾರ್ಯ
ವತ್ಸರ ಸಾರ್ಥಕವಾಗಲಿಪಾರ್ಥ ಸಖನ ಗುಣ ಕೀರ್ತಿಸುತಾ ಪ ಅರ್ಥಿಯಿಂದ ಹರಿಕೀರ್ತನೆ ಮಾಡಲುಆರ್ತೇಷ್ಟದ ಸಕಲಾರ್ಥವ ಕೊಡುವ ಅ.ಪ. ವತ್ಸರ ಸಾರಿತು ಹಿಂದೆಸಾರಿತು ನಮ್ಮಾಯುವು ಮುಂದೇ |ವಾರಿಜಾನಾಭನ ಸೇರಿ ಭಜಿಸಲುಸೇರಲಿಲ್ಲ ನಾವ್ ದಿನ ಒಂದೇ1 ತಂದೆ ವೆಂಕಟನ ಪ್ರೇಮದ ದಾಸರುಸಂದೇಶವನೆ ಕಳುಹಿಸದರೂಇಂದಿರೆಯರಸನ ಭಕ್ತ ವೃಂದದಿಛಂzಸÀದಿ ಭಜಿಸೆಂದರುಹಿದರೂ 2 ಇಂದಿನಿಂದಾದರು ಒಂದು ಗೂಡುತ ನಂದಕಂದನನು ಭಜಿಸುವ ಬನ್ನಿಸುಂದರ ಗುರು ಗೋವಿಂದ ವಿಠಲನದ್ವಂದ್ವ ಚರಣವನು ವಂದಿಸೆ ಬನ್ನಿ 3
--------------
ಗುರುಗೋವಿಂದವಿಠಲರು
ಶರಣೆಂಬೆನೋ ಪರಮಾತ್ಮನೆ ನೀ ಕರುಣಿಸೆನ್ನನು ಪ ಶರಣಾಶ್ರಯ ಹಿತಾಯ ಸತ್ಯ ಸುಗುಣಿಯನಿನ್ನು ಅ.ಪ ಪರಮಾನಿನಿಯರ ಸಂಗದೊಳಗೆ ಯಿರಿಪುವುದೂ ಮನ ನರಸಿಂಹನಾಮ ಖಡ್ಗವೀಯೊ ಬೇಡ್ವೆ ನಾನದನಾ 1 ಸಕಲಾರ್ಥಮೆನಗೆ ಅರುಹಿ ಕಾಯೊ ಸರ್ವಾರ್ಥ ಫಲಪ್ರದಂ ಸುಕೃತಾರ್ಯ ಸೇವೆಯೊಳಿರಿಸಿ ಸಲಹೊಸರ್ವಸ್ಯಾತ್ಪರಂ2
--------------
ಚನ್ನಪಟ್ಟಣದ ಅಹೋಬಲದಾಸರು