ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೃಷ್ಣದ್ವೈಪಾಯನ ಗುರುರಾಜರ ಚರಣ ಕಮಲಕಾನಮಿಪೆ ಶಿರಬಾಗಿ ಬಿನ್ನೈಪೆ ಪ ವೇದವ್ಯಾಸರ ಕರಕಮಲಜರೆನಿಸಿ ವೇದೇಶರ ಮುಖದಿ ವೇದಾಂತ ಸುಶಾಸ್ತ್ರ ಜ್ಞಾನವ ಘಳಿಸಿ ಮೇದಿನಿಯೊಳು ಚರಿಸಿ ಮೇದಿನಿ ಸುರರಿಗೆ ಮೋದವ ಗರೆದ 1 ಧರಿಜಾರಮಣನ ಪದಪೂಜಿಸಿದಂಥ ಶ್ರೀ ವ್ಯಾಸರ ಮಂತ್ರ ಧರಿಯೊಳು ಜಪಿಸಿದರಿವರೆ ಮಹಾಂತರೆನಿಸಿದರತಿ ಶಾಂತ ವರುಣಿಸಲೊಶವೆ ಗುರುವರ ಮಠದಲಿ ಸುರಗಂಗೆಯು ಬಂದಿರುವ ಮಹಿಮೆಯನು 2 ವರ ಭೀಮಾತಟದಿ ವಿರಾಜಿಸುವಂಥ ಕುಸುಮೂರುತಿ ಸಂಸ್ಥ ಶರಣಾಗತ ಜನರಿಗೆ ಸಕಲಾಭೀಷ್ಟ ಗರಿಯುವ ಸುಸಮರ್ಥ ಧರೆಯೊಳು ಮೆರೆಯುವ 'ಶಿರಿ ಕಾರ್ಪರ ನರಹರಿ' ಯ ನೊಲಿ-ಸಿರುವ ಪರಮ ಮಹಾತ್ಮ3
--------------
ಕಾರ್ಪರ ನರಹರಿದಾಸರು
ಪಂಢರಪುರವಾಸ ಪಾಲಿಸೊ ಶ್ರೀಶ ಪ ಶ್ರೇಷ್ಠ ಭಕ್ತನು ಕೊಟ್ಟ ಇಟ್ಟಿಕಲ್ಲಿನ ಮ್ಯಾಲೆ ಗಟ್ಯಾಗಿ ನಿಂತಿದ್ದ ವಿಠೋಬ ದಯಮಾಡೊ 1 ಪಾಂಡುರಾಯನ ಸುತ ಗಾಂಡೀವರ್ಜುನ ದೂತ ಬಂಡಿ ನಡೆಸಿದಾತ ಪುಂಡರೀಕ್ವರದನೀತ2 ಮುಕುತಿದಾಯಕ ಮುದ್ದು ರುಕುಮಿಯ ರಮಣನೆ ಭಕುತ ವತ್ಸಲಯೆನಗೆ ಸಕಲಾಭೀಷ್ಟವ ನೀಡೊ 3 ಬುಕ್ಕಿ ್ಹಟ್ಟು ತುಳಸಿಮಾಲೆ ಕಟ್ಟಿ ಕೊರಳಿಗೆ ಹಾಕಿ ದಾತ 4 ಲೋಕ ಲೋಕದೊಳಗಿದ್ದಾನೇಕ ಜೀವರನೆಲ್ಲ ಸಾಕಿ ಸಾಕಾಯ್ತೆ ಕರವೇಕೆ ಟೊಂಕದಲ್ಲಿಟ್ಟಿ 5 ಸೃಷ್ಟಿಸ್ಥಿತಿಯು ಜನಸಂರಕ್ಷಣೆ ಮಾಡಿ ನಿನ್ನ ರಟ್ಟೆ ಸೋತವೆ ಟೊಂಕಕಿಟ್ಟು ಕಯ್ಯನು ನಿಂತೆ 6 ಕಂಬದೊಳಗೆ ನಿಂತ ಪುರಂದರದಾಸರು ವಂದನೆಮಾಡೆ ಇವರೆ ನಾರಂದರೆಂದು ನಾ ತಿಳಿದೆ 7 ರುಕ್ಮಿಣಿ ಸತ್ಯಭಾಮೆ ರಾಧೆ ಲಕ್ಷುಮಿಯೇರ ಹತ್ತಿಲೆ ನಿಂತ ನಮ್ಮಪ್ಪ ವೆಂಕಟರಮಣ 8 ಭೀಮರಥಿಯ ಸ್ನಾನ ಸ್ವಾಮಿ ನಿಮ್ಮ ದರುಶನ ಭೀಮೇಶಕೃಷ್ಣನ ಧ್ಯಾನ ಮಾಡುವೋದ್ವೈಕುಂಠಸ್ಥಾನ 9
--------------
ಹರಪನಹಳ್ಳಿಭೀಮವ್ವ
ಶರಣು ಗಜಮುಖ ಆಖುವಾಹನ ಶರಣು ಸುರಗಣ ಸೇವಿತ ಶರಣು ಸಕಲಾಭೀಷ್ಟದಾಯಕ ಶರಣು ವಿಘ್ನ ವಿನಾಯಕ 1 ಕುಂಡಲ ಕಾಮಿತಾ ಫಲದಾಯಕ ಅಮಿತ ಸೌಲಭ್ಯ ಪ್ರಬಲ ಶಾಸ್ತ್ರೋದ್ಧಾಮ ವಿದ್ಯಾಶರನಿಧೇ 2 ಪಾಶ ಮೋದಕ ಪರಶುಧರ ಫಣಿಭೂಷ ಪಾರ್ವತಿನಂದನ ವಾಸವಾರ್ಚಿತ ವಿಜಯವಿಠ್ಠಲನ ದಾಸ ಭೋ ಗಣನಾಯಕ 3
--------------
ವಿಜಯದಾಸ