ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ವಲ್ಲಭ ಸರ್ವೇಶ್ವರ ಬಾ ಪಾವನ ಚರಿತ ಪರಾತ್ಪರ ಬಾ ಸೇವಕ ಜನರಿಗೆ ಸಕಲಾನಂದಗಳೀವ ಬಾ ರುಕ್ಮನ ಭಾವಾ ಬಾ ಸೃತಿನವನಾವ ಬಾ ನಮ್ಮನು ಕಾವನೆ ಬಾ ಎಂದು ಹಸೆಗೆ ಕರೆವೆನು ಶೋಭಾನೆ 1 ಅರಿದರ ಪದ್ಮ ಗದಾಧರ ಬಾ ನರಪತಿಗಳೊಳಿಹ ಶ್ರೀಧರ ಬಾ ಶರಣಾಗತ ಪರಿಪಾಲನೆಂಬ ಬಿರುದಿರುವನೆ ಬಾ ಸಂಪತ್ಕರನೆ ಬಾ ಸಾಮಜವರದನೆ ಬಾ ಶ್ರೀ ನರಹರಿಯೆ ಬಾರೆಂದು ಹಸೆಗೆ ಕರೆವೆನು ಶೋಭಾನೆ 2 ಮಂದರಧರ ಮಧುಸೂದನ ಬಾ ಇಂದಿರೆಯಳನೊಡಗೂಡುತ ಬಾ ಸುಂದರ ತರ ಹರಿ ಚಂದನ ರೂಪದಿನಿಂದಿವ ಬಾ ಕರುಣಾ ಸಿಂಧುವೆ ಬಾ ಆಪದ್ಬಾಂಧವ ಬಾ ಪಾಂಡವ ಬಂಧುವೆ ಬಾ ವೆಂಕಟ ಮಂದಿರ ಬಾರೆಂದು ಹಸೆಗೆ ಕರೆವೆನು ಶೋಭಾನೆ 3
--------------
ತುಪಾಕಿ ವೆಂಕಟರಮಣಾಚಾರ್ಯ