ಒಟ್ಟು 6 ಕಡೆಗಳಲ್ಲಿ , 2 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಅನಂತಪದ್ಮನಾಭ ಪ್ರಾರ್ಥನೆ) ಚಿಂತಿತದಾಯಿ ನಿರಂತರ ಸುಖದಾನಂತಪದ್ಮನಾಭಾ ಸಕಲಸುಜನಾಂತರ ಫಲದಾ ಪ. ಯಾಕೆಂದರೆ ಪೂರ್ಣಾ ನಂದನೀನೊಲಿಯಲು ಎಂದಿಗು ಕುಂದನು ಹೊಂದದಲಿರುವೆ ಸುಂದರ ವಿಗ್ರಹ ಸುಲಭದಿ ಸಕಲಾನಂದ ವಾರಿಧಿಯೊಳಿಳಿವೆ ಭವ ಬಂಧನ ಬಿಡಿಸುವ ದೊರೆ ನಿನ್ನರಿಯದೆ ಮಂದ ಬುದ್ಧಿಯಿಂದಿರುವುದು ಥರವೆ1 ನೀಲಾಳಕ ಪರಿಶೋಭಿತ ಮುಖಕಮಲಾಲಿಸು ಬಿನ್ನಪವÀ ಲೀಲಾಮೃತರಸ ಕುಡಿಸುತ ಕರುಣದಿ ಪಾಲಿಸು ವರಸುಖವಾ ಪದದೊಳಗಿರಿಸಿದ ದುರಿತ 2 ಹೆಂಡತಿ ಜನಿಸಿದ ಮನೆಯೊಳಗಿರುವುದೆ ಪುಂಡರೀಕನಾಥಾ ಪಂಡಿತರುಗಳಿದ ಕಂಡರೆ ನಗರೆ ಬ್ರಹ್ಮಾಂಡಕೋಟಿಭಾಸಾ ಅಂಡಲೆಯದೆ ಹೃನ್ಮಂಡಲದೊಳು ಶುಭಕುಂಡಲ ರಮೆಯೊಡಗೊಂಡು ಬೇಗದಲಿ ನಿಭ ಕುಂಡಲಿಗಿರಿಗ 3
--------------
ತುಪಾಕಿ ವೆಂಕಟರಮಣಾಚಾರ್ಯ
ಭವರೋಗ ಹರವಾದೊಂದೌಷಧಿತ್ರೈಭುವನ ವಿಖ್ಯಾತವಾಗಿದೆ ಬುದ್ಧಿವಂತರಿಗೆ ಪ ಚತುರ ವೇದಶಾಸ್ತ್ರ ಮೇಣಷ್ಟಾದಶವಾದಸ್ಮøತಿತರ್ಕ ಪೌರಾಣದಡವಿಯಲ್ಲಿಮತಿವಂತ ಮುನಿಗಳಾರಿಸಿ ತಂದು ತಾವುಪ್ರತಿಗಂಡು ಲೋಕಕ್ಕೆ ಹಿತವಾಗಿ ತೋರುವ 1 ಅಡವಿಯೊಳರಸಿ ಅಗಿಯಲಿಲ್ಲ ತಂದುಇಡಿದು ಚೂರ್ಣವಮಾಡಿ ಒಣಗಿಸಲಿಲ್ಲಕುಡಿದು ಕಹಿಖಾರವೆಂದೆನಲಿಲ್ಲ ನೋಡೆಬಡವ ಬಲ್ಲಿದರೆಲ್ಲರಿಗೆ ಸಾಧ್ಯವಾಗಿಪ್ಪ 2 ಪಥ್ಯಪಾನದ ನೇಮಗಳಿಲ್ಲ ಹೋಗಿಸ್ತೋತ್ರ ಮಾಡಿ ವೈದ್ಯನ ಬೇಡಲಿಲ್ಲನಿತ್ಯಸೇವಿಸೆ ಆಲಸ್ಯಗಳಿಲ್ಲ ನೋಡೆಮತ್ಯಾರ ಮಾತ ನಡೆಸುವ ಬಗೆಯಿಲ್ಲ3 ರಸಪಾಷಾಣಾದಿ ಮೂಲಿಕೆಯನು ತಂದುಕುಶಲದಿ ಶೋಧಿಪ ಕೋಟಲೆಯಿಲ್ಲಮಿಸುಣಿ ವರ್ಣದ ಭಸ್ಮ ತೈಲಗಳೆಂತೆಂಬಫಸಣೆಯಿಲ್ಲದೆ ಗಾಂಧರ್ವರು ಸೇವಿಪ 4 ಒಮ್ಮೆ ಸೇವಿಸೆ ಜನ್ಮ ಜನ್ಮಂಗಳ ದು-ಷ್ಕರ್ಮ ಸವೆದು ಸಕಲಾನಂದವೀವಘಮ್ಮನೆ ಕೃಷ್ಣರಾಯನ ಪುರದಲಿ ಬಿಡದÉಮ್ಮ ರಕ್ಷಿಪ ಮುದ್ದುಕೃಷ್ಣ ಕೃಷ್ಣಯೆಂಬ 5
--------------
ವ್ಯಾಸರಾಯರು
ಮುಯ್ಯದ ಹಾಡುಗಳು ನೋಡೆ ಧರಣಿ ನಿನ್ನ ಬೀಗರೋಡಿ ಬರುವುದಾ ಕಾಡು ಜನರು ನಗುವ ರೀತಿ ಮಾಡಿ ಮೆರೆವುದಾ ಪ. ಸುತ್ತ ನಾಲ್ಕು ಮುಖದಿ ವೇದ ತತ್ವ ಪೇಳ್ವ ಹಂಸ ಪಕ್ಷಿ ಹತ್ತಿಕೊಂಡು ಬಂದ ಹಳಬ ಮುತ್ಯನೊಬ್ಬನು ಹಸ್ತದೊಳಗಕ್ಷಮಾಲೆಯೆತ್ತಿ ಮಣಿಗಳೆಣಿಸುವಗಿ ನ್ನೆತ್ತ ಪೂಜೆಯಿಲ್ಲವೆಂಬರತ್ಯಾಶ್ಚರ್ಯವರಿಯೆಯ 1 ಮತ್ತೊಬ್ಬನ ನೋಡೆ ಮುದಿಯೆತ್ತನೇರಿ ಬರುವನಿವನ ಜೊತೆಯಲಿರುವ ಭೂತಗಣವು ಸುತ್ತ ಮೆರೆವುದ ಬತ್ತಲಿದ್ದು ಭಸ್ಮ ಪೂಸಿ ಕೃತ್ತಿವಾಸನನಾದ ಫಾಲ ನೇತ್ರ ರುಂಡಮಾಲಶೂಲವೆತ್ತಿ ಕುಣಿವ ಮುತ್ಯತನವ 2 ಗರುವದಿಂದ ಗಜವನೇರಿ ಬರ್ವನ ನೋಡಮ್ಮ ಶತ ಪರ್ವವನ್ನು ಪಿಡಿದ ಸಕಲ ಗೀರ್ವಾಣೀಶನ ಸರ್ವಾವಯವದಲ್ಲಿ ಕಣ್ಣಾಗಿರ್ವದೇನೊ ತಿಳಿಯದು ನಿ ಗರ್ವಿ ಶಿರೋಮಣಿಯೆ ಈತ ಪರ್ವತಾರಿಯೆಂಬುವುದನು 3 ಠಗರು ಕೋಣನೆಗಳ ಮೇಲೆ ಸೊಗಸಿನಿಂದಲೇರ್ದ ಕೆಲಸ ಬಗೆ ಬಗೆ ಬೈರೂಪ ವರ್ಣನೆಗಳು ಸಾಕಿನ್ನು ಸುಗುಣೆ ಮೊದಲೆ ತಿಳಿಯದೆ ನೀ ಮಗಳನೀವ ಭಾಷೆ ಕೊಟ್ಟ ಬಗೆಯ ಪೇಳೆ ಭಾಗ್ಯದ ಹಮ್ಮಿಗೆ ತಕ್ಕಂಥ ನಗೆಯ ಕೇಳೆ 4 ಎರಡು ಮಗುಗಳದರಳೊಂದು ಬಿರುದ ಹೊಟ್ಟೆ ಮೇಲೆ ಕಟ್ಟಿ ದುರಗ ಬೆಳೆವ ಪೋರ ನೋಡೆ ಕರಿಯ ಕುವರನು ಕಿರಿಯ ಕೂಸಿನೊಂದು ನವಿಲ ಮರಿಯನೇರುತ್ತಾರು ಮುಖದಿ ಮೆರೆವ ಛಂದವೇನನೆಂಬೆ ಥರವೆ ನಿನಗೆ ಮಿಸುಣಿ ಗೊಂಬೆ 5 ಅಳಿಯನ ಸಂಸ್ಥಿತಿಯ ನೋಡಿ ತಿಳಿವದೆಂತು ಸುಲಭವಲ್ಲ ಹಲವು ಜನರ ಕೂಡಿಕೊಂಡು ಸುಳಿವರೆ ಬಲ್ಲ ನೆಲೆಯ ಕಾಣದಖಿಳ ವೇದ ಕುಲವು ಭ್ರಮೆಯ ತಾಳ್ವದಿಂಥಾ ಕುಲವೆಂದರಿಯಳಾಗಿ ಲೋಕ ಚೆಲುವೆ ಮಗಳನಿತ್ತೆಯಲ್ಲೆ 6 ಆದರೀತ ಭಕ್ತಜನರ ಕಾದುಕೊಳುವನೆಂಬ ಗುಣವ ಶೋಧಿಪರಿಗೆ ಸಕಲಾನಂದ ಸಾಧಕನೆಂದು ಬೋಧಗೊಳದೆ ನುಡಿದ ಸ್ವಾಪರಾಧವೆಲ್ಲ ಕ್ಷಮಿಸಿ ನಮ್ಮ ಶ್ರೀದ ವೆಂಕಟಾದ್ರಿನಾಥ ಕಾದುಕೊಳಲಿ ಕರುಣವಿಡಲಿ 7
--------------
ತುಪಾಕಿ ವೆಂಕಟರಮಣಾಚಾರ್ಯ
ಲಕ್ಷುಮೀನಾರಾಯಣ ಜಯಲಕ್ಷುಮೀ ನಾರಾಯಣ ಲಕ್ಷುಮೀನಾರಾಯಣ ಜಯ ಲಕ್ಷುಮೀ ನಾರಾಯಣ ಪ. ಪಾದ ದಾನವ ಗರ್ವಹರಣ ಗದಾದಿ ಧಾರಣ ಪರ್ವತಾರಿ ವರ ಪ್ರದ 1 ನಂಬಿಕೊಂಡಿಹೆ ನಿನ್ನ ದಿವ್ಯ ಪದಾಂಬುಜಗಳನು ಸರ್ವಕಾಲದಿ ಮನದೊಳಗಿಂಬುಗೊಳು ಕಮಲಾಂಬಕ 2 ಆರು ಸಂಖ್ಯೆಯ ಕಳ್ಳರೆನ್ನನು ಗಾರುಮಾಡುವರಾದರಿಂದತಿ ಧೀರ ನಿನ್ನ ಪದಾರವಿಂದಕೆ ದೂರುವೆನು ರಘುವೀರನೆ 3 ದುರ್ಮತಿಗಳಾದಸುರಹರಣಕೆ ಭರ್ಮಗರ್ಭನು ಬಂದು ಸ್ತುತಿಸಲು ಧರ್ಮಸಂಸ್ಥಾಪಿಸುತ ಬಹು ಶುಭಕರ್ಮ ತೋರುವ ಕರುಣಿಯೆ 4 ಸಪ್ತ ಋಷಿಗಳ ಕೂಡಿಕೊಂಡತಿ ಭಕ್ತಿಯಿಂದಲಿ ನಿನ್ನ ಭಜಿಸಿದ ಸತ್ಯವ್ರತನಿಗೆ ಸಕಲ ಶ್ರುತಿಗಳ ತತ್ವ ತಿಳಿಸಿದ ಮತ್ಸ್ಯನೆ 5 ಮುಳುಗಿಕೊಂಡಿಹ ಅಮಿತಗುರು ಮಂದರವ ಧರಿಸುತ ಅಮೃತರಸ ತೆಗೆದಿತ್ತನೆ 6 ದೈತ್ಯನ ತರಿದು ಬಿಸುಟು ವಿ- ಜನಿತ ಪವಿತ್ರ ಯಜ್ಞ ವರಾಹನೆ 7 ಘಡುಘಡಿಸಿ ಕಂಬದೊಳು ಬಂದ ಸಿಡಿಲಿನಂತಿಹ ನಖದಿ ದೈತ್ಯನ ಒಡಲ ಬಗೆದನು ಕೋಪದಿಂದ 8 ದಾನಕೊಂಡನಾನೆವನದಿ ದಾನವಾಹೃತ ಧರೆಯ ಕಸ್ಯಪಸೂನುಗಳಿಗೊಲಿದಿತ್ತನೆ 9 ದುಷ್ಟಭೂಭುಜಭಾರದಿಂದತಿ ಕಷ್ಟಪಡುತಿಹ ಧರೆಯ ಕರುಣಾ ನೃಪರ ಕಡಿದ 10 ನೀರಜಾವದನಾರವಿಂದ ಮಹಾ ರಸಾಸ್ವಾದನ ಪದ ಕಪಿವೀರನಿಗೆ ಸ್ವಾರಾಜ್ಯ ನೀಡಿದ ಮಾರುತಿಗೆ ದಯ ಮಾಡಿದ 11 ಬಾಲ ಲೀಲೆಯ ತೋರಿ ಗೋಪಕ ಬಾಲೆಯರ ಕೂಡಾಡಿದೆ ಖೂಳಕಂಸನ ಕೆಡಹಿ ದಾನವಮೂಲ ಕಿತ್ತು ಬಿಸಾಡಿದೆ 12 ಜೈನರನು ಮೋಹಿಸುವೆನೆಂದನುಮಾನವಿಲ್ಲದೆ ನಗ್ನನಾಗಿ ಹೀನ ಬುದ್ಧಿಯ ತಿಳಿಸಿ ತ್ರಿಪುರವ ಹಾನಿಗೈಸಿದ ಬೌದ್ಧನೆ 13 ಸುಧೆಯನು ಕರೆದು ಶಿರದಲಿ ತುಂಗ ವಿಷಯ ತರಂಗ ತಪ್ಪಿಸು ಅಂಗಭಂಗವ ಶಿಂಗನೆ 14 ಮಿಂಚಿನೊಡ್ಡಿದ ಮೇಷನಂದದಿ ಪಂಚವರ್ಣದ ತುರಗವೇರಿ ಸಂಚರಿಸಿ ಮ್ಲೇಂಛರನು ಕೊಲ್ಲಿಸಿ ಲಾಂಛಜೀವನ ವರದನೆ 15 ಮಂದಿರದಿ ನೀ ಬಂದು ರಕ್ಷಿಪೆ ಎಂದು ಸಕಲಾನಂದಗೊಂಡಿಹೆ ಇಂದಿರೇಶನೆ ಎಂದಿಗೂ ಈ ಅಂದದಿಂದಲಿನಿಂದ ಸಲಹು 16 ಕೇಶವಾದಿ ದ್ವಿದಶರೂಪವು ಮಾಸಗಳಿಧಿಷ್ಠಾನನಿಗೆ ಪ- ರೇಶ ಕಡೆಯಲಿರುವ ಕಾರ್ತಿಕವಾಸ ದಾಮೋದರ ಹರನೆ 17 ಬಳಲಿ ಕರ್ಮವ ಮಾಡಲಾರೆ ನಳಿನಜಾರ್ಜಿತ ನಿನ್ನ ಪಾದದ ನೆಳಲನಂಬಿ ಸುಮ್ಮನಿರುವೆ 18 ಅಖಿಳದೋಷ ನಿವಾರಣಾದ್ಭುತ ಸಕಲಸದ್ಗುಣಧಾರಣಾ ಕುಂಡಲ ಧಾರಿ ವೆಂಕಟಶಿಖರ ವರ ಸುಖಕಾರಣಾ 19
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀ ವಲ್ಲಭ ಸರ್ವೇಶ್ವರ ಬಾ ಪಾವನ ಚರಿತ ಪರಾತ್ಪರ ಬಾ ಸೇವಕ ಜನರಿಗೆ ಸಕಲಾನಂದಗಳೀವ ಬಾ ರುಕ್ಮನ ಭಾವಾ ಬಾ ಸೃತಿನವನಾವ ಬಾ ನಮ್ಮನು ಕಾವನೆ ಬಾ ಎಂದು ಹಸೆಗೆ ಕರೆವೆನು ಶೋಭಾನೆ 1 ಅರಿದರ ಪದ್ಮ ಗದಾಧರ ಬಾ ನರಪತಿಗಳೊಳಿಹ ಶ್ರೀಧರ ಬಾ ಶರಣಾಗತ ಪರಿಪಾಲನೆಂಬ ಬಿರುದಿರುವನೆ ಬಾ ಸಂಪತ್ಕರನೆ ಬಾ ಸಾಮಜವರದನೆ ಬಾ ಶ್ರೀ ನರಹರಿಯೆ ಬಾರೆಂದು ಹಸೆಗೆ ಕರೆವೆನು ಶೋಭಾನೆ 2 ಮಂದರಧರ ಮಧುಸೂದನ ಬಾ ಇಂದಿರೆಯಳನೊಡಗೂಡುತ ಬಾ ಸುಂದರ ತರ ಹರಿ ಚಂದನ ರೂಪದಿನಿಂದಿವ ಬಾ ಕರುಣಾ ಸಿಂಧುವೆ ಬಾ ಆಪದ್ಬಾಂಧವ ಬಾ ಪಾಂಡವ ಬಂಧುವೆ ಬಾ ವೆಂಕಟ ಮಂದಿರ ಬಾರೆಂದು ಹಸೆಗೆ ಕರೆವೆನು ಶೋಭಾನೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ಸ್ವಾಮಿ ಯಾತಕೆನ್ನೊಳುಪೇಕ್ಷೆ ಮಾಡುವಿ ದೀನನಾಥ ಸುಮ್ಮನೆ ನಿಂತು ನೋಡುವಿ ಪ. ನಡೆವನ ಕಣ್ಣ ಕಟ್ಟಿ ಕೆಡಹುವುದುಚಿತವೆ ಒಡೆಯ ನಿನ್ನಡಿಗಳ ಪೊಗಳುವ ಪಾಡಿ ನುಡಿವ ಕಾರ್ಯಕೆ ಬಾಡಿ ಬಳಲುತ ನಾ ನಿತ್ಯ ನೋಡುತ ಬಡವನ ಬಿಡದಿರು ಕಡಲಶಯನ ನಿಜ ಮಡದಿ ಸಹಿತನಾಗಿ ಶ್ರೀಶನೆ ಕೃಪೆ ಕಂಜಕರ ಶ್ರೀನಿವಾಸನೆ1 ಭಾವಜ ಪಿತ ನಿನ್ನ ಸೇವೆ ಮಾಳ್ಪರಿಗೆಂದು ನೋವ ನೀಡದೆ ಕಾವ ಬಿರುದನು ಭವ ಸಾರÀ ನೀ ಮರೆವುದು ನೀತಿಯೆ ಎನ್ನ ನೀ ವಿಧ ಮಾಳ್ಪುದು ಖ್ಯಾತಿಯೆ ಪಾವನ ಚರಿತ ಪುರಾಣ ಪುರುಷ ಮಹ ದೇವ ನೀ ಕರಪಿಡಿದೆನ್ನನು ಕರು- ಣಾವಲಂಬನವಿತ್ತು ಪೊರೆವುದು 2 ದುರುಳ ಭಾವನೆಯಿಂದ ಸರಿದು ಹೋಗುವ ಪಂಚ ಕರಣಕೆ ನೀನರಸನಲ್ಲವೆ ಭಕ್ತಾ- ಭರಣಕೆ ನಿನ್ನೊಳಿರಿಸು ಮಾರ್ಗವನಂತ:- ಕರಣಕೆ ತರಿದು ಪಾಪಗಳನು- ದ್ಧರಿಸೆನ್ನ ವೆಂಕಟಗಿರಿವರ ದೀನಾರ್ತಿ ಚಕ್ರಧರ ಸಕಲಾನಂದ ಕಾರಣ 3
--------------
ತುಪಾಕಿ ವೆಂಕಟರಮಣಾಚಾರ್ಯ